Wednesday, 12 January 2022

ಬೀದರ್: ₹6.70 ಲಕ್ಷ ಮೌಲ್ಯದ ಮೊಬೈಲ್‌ ಫೋನ್‌ ಡಿಸ್‌ಪ್ಲೇ ವಶ

ಬೀದರ್: ₹6.70 ಲಕ್ಷ ಮೌಲ್ಯದ ಮೊಬೈಲ್‌ ಫೋನ್‌ ಡಿಸ್‌ಪ್ಲೇ ವಶ

ಬೀದರ್: ಇಲ್ಲಿಯ ಮಾರ್ಕೆಟ್‌ ಠಾಣೆಯ ಪೊಲೀಸರು ಇಬ್ಬರು ಕಳ್ಳತನದ ಆರೋಪಿಗಳಿಂದ ₹ 6.70 ಲಕ್ಷ ಮೌಲ್ಯದ ಮೊಬೈಲ್‌ ಫೋನ್‌ಗಳ ಡಿಸ್ಪ್ಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಗಂಗಾಖೇಡ ತಾಲ್ಲೂಕಿನಲ್ಲಿ ಕಳ್ಳತನದ ಇಬ್ಬರು ಆರೋಪಿಗಳನ್ನು ಜನವರಿ 8ರಂದು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಆರೋಪಿಗಳಿಂದ ₹ 6.70 ಲಕ್ಷ ಮೌಲ್ಯದ ಮೊಬೈಲ್‌ ಫೋನ್‌ ಡಿಸ್ಪ್ಲೆ ಹಾಗೂ ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಇನ್ನೊಬ್ಬ ಆರೋಪಿ ಶೋಧ ಕಾರ್ಯ ನಡೆಸಿದ್ದಾರೆ.

2021ರ ಡಿಸೆಂಬರ್ 26ರ ರಾತ್ರಿ ನಗರದ ಮಹಾವೀರ ವೃತ್ತ ಸಮೀಪದ ಧನಲಕ್ಷ್ಮಿ ಮೊಬೈಲ್‌ ಅಂಗಡಿಯಲ್ಲಿನ ₹ 15.98 ಲಕ್ಷ ಮೌಲ್ಯದ ಮೊಬೈಲ್‌ ಫೋನ್‌ ಡಿಪ್ಸ್ಲೆಗಳು ಹಾಗೂ ₹ 3 ಲಕ್ಷ ನಗದು ಸೇರಿ ಒಟ್ಟು ₹ 18.98 ಲಕ್ಷ ಮೌಲ್ಯದ ಸಾಮಗ್ರಿ ಕಳ್ಳತನವಾಗಿದ್ದವು. ರಾಜಸ್ಥಾನದ ಕಲಾರಾಮ ಚೌಗಾರಾಮ ಚೌಧರಿ ಅವರು ಮಾರ್ಕೆಟ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.SHARE THIS

Author:

0 التعليقات: