Wednesday, 5 January 2022

ಕರ್ನಾಟಕ ಜನತೆಗೆ ಇಂದು 'ತ್ರಿಬಲ್ ಶಾಕ್' : ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ, ಜೊತೆಗೆ 50:50 ರೂಲ್ಸ್ ಜಾರಿ

ಕರ್ನಾಟಕ ಜನತೆಗೆ ಇಂದು 'ತ್ರಿಬಲ್ ಶಾಕ್' : 
ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ, ಜೊತೆಗೆ 50:50 ರೂಲ್ಸ್ ಜಾರಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಕ್ಕಾಗಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಈ ಮಾರ್ಗಸೂಚಿಯಂತೆ ರಾಜ್ಯಾಧ್ಯಂತ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಹಾಗೂ 50:50 ರೂಲ್ಸ್ ರಾಜ್ಯಾಧ್ಯಂತ ಜಾರಿಗೊಳಿಸಲಾಗಿದೆ.


ಮಾರ್ಗಸೂಚಿ ಕ್ರಮಗಳು

ರಾತ್ರಿ ಕರ್ಪ್ಯೂ 10 ರಿಂದ ರಾತ್ರಿ 5ರವರೆಗೆ ಜಾರಿಯಲ್ಲಿ ಇರಲಿದೆ.

ಎಲ್ಲಾ ಕಚೇರಿಗಳು ವಾರದಲ್ಲಿ ಐದು ದಿನ ಮಾತ್ರ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯ ನಿರ್ವಹಿಸಲು ಅವಕಾಶ

ಶೇ.50ರಷ್ಟು ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳು ಕೆಲಸ ಮಾಡೋದಕ್ಕೆ ಅವಕಾಶ

ವಾರಾಂತ್ಯ ಕರ್ಪ್ಯೂ ಶುಕ್ರವಾರ ರಾತ್ರಿ 10ರಿಂದ ಪ್ರಾರಂಭಗೊಂಡು ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ.

ಬೆಂಗಳೂರು ನಗರದ 10, 11 ಮತ್ತು 12ನೇ ತರಗತಿ ಶಾಲೆಗಳು ಹೊರತುಪಡಿಸಿ, ಎಲ್ಲಾ ಶಾಲಾ-ಕಾಲೇಜುಗಳು ಬಂದ್ ಮಾಡಲು ಸೂಚನೆ.

ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರಷ್ಟು ಜನರು ಸೇರಲು ಅವಕಾಶ

ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಆಡಿಟೋರಿಯಂ ಮತ್ತು ಸಾರ್ವಜನಿಕರು ಸೇರುವ ಪ್ರದೇಶಗಳಲ್ಲಿ ಶೇ.50ರಷ್ಟು ಜನರು ಸೇರಲು ಅನುಮತಿ

ಹೊರಾಂಗಣದಲ್ಲಿ ನಡೆಯುವಂತ ಮದುವೆ ಸಮಾರಂಭಗಳಿಗೆ 200 ಜನರಿಗೆ ಅವಕಾಶ. ಒಳಾಂಗಣದಲ್ಲಿ ನಡೆಯುವಂತ ಮದುವೆ ಸಮಾರಂಭಗಳಿಗೆ 100 ಜನರು ಮಾತ್ರವೇ ಸೇರಲು ಅವಕಾಶ

ದೇವಸ್ಥಾನ, ಧಾರ್ಮಿಕ ಕೇಂದ್ರಗಳಲ್ಲಿ 50 ಜನರಿಗೆ ಮಾತ್ರ ಅವಕಾಶ

ಸ್ವಿಮ್ಮಿಂಗ್ ಪೂಲ್, ಜಿಮ್ ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ

ಸ್ಪೋರ್ಟ್ ಕಾಂಬ್ಲೆಕ್ಸ್, ಸ್ಟೇಡಿಯಂಗಳಲ್ಲಿ ಶೇ.50ರಷ್ಟು ಮಿತಿ

ಎಲ್ಲಾ ಪ್ರತಿಭಟನಾ ಮೆರವಣಿಗೆ, ಧರಣಿ, Rallyಗಳಿಗೆ ನಿಷೇಧ

ಕೇರಳ, ಮಹಾರಾಷ್ಟ್ರ ಗಳಿಂದ ಬರೋರಿಗೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯ

ರಾಜ್ಯಾಧ್ಯಂತ ವಾರಾಂದ್ಯ ಕರ್ಪ್ಯೂ ಮಾರ್ಗಸೂಚಿ ಕ್ರಮಗಳು

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು ತೆರೆದಿರಲು ಅನುಮತಿ. ತುರ್ತು ಸೇವೆ ಕಚೇರಿಗಳು ತೆರೆದಿರಲು ಅವಕಾಶ

ಎಲ್ಲಾ ಸಾರ್ವಜನಿಕ ಪಾರ್ಕ್ ಗಳು ಬಂದ್

ಐಟಿ ಕಂಪನಿಗಳು ವಾರಾಂತ್ಯ ಕರ್ಪ್ಯೂ ನಡುವೆಯೂ ಕೆಲಸಕ್ಕೆ ಅವಕಾಶ. ನೌಕರರು ಐಡಿ ಕಾರ್ಡ್ ತೋರಿಸಿ ಕಚೇರಿಗೆ ತೆರಳಲು ಅನುಮತಿ

ತುರ್ತು ಸಂದರ್ಭದಲ್ಲಿ ಜನರು ತೆರಳಲು ಅವಕಾಶ

ಆಹಾರ, ತರಕಾರಿ, ಹಣ್ಣು, ಮಾಂಸ, ಮೀನು, ಡೈರಿ, ಹಾಲಿನ ಬೂತ್ ತೆರೆಯಲು ಅನುಮತಿ

ತಳ್ಳುಗಾಡಿಯಲ್ಲಿ ಮಾರಾಟಮಾಡಲು ಅವಕಾಶ

ಹೋಂ ಡಿಲಿವರಿಗೆ ಅವಕಾಶ

ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಕೊಂಡಯ್ಯಲು ಅನುಮತಿ


SHARE THIS

Author:

0 التعليقات: