Thursday, 13 January 2022

5 ವರ್ಷಗಳ ಹಿಂದೆ ನಡೆದ ಅಪಘಾತದಿಂದ ಮೂಕನಾಗಿದ್ದವನಿಗೆ ಕೊರೊನಾ ವ್ಯಾಕ್ಸಿನ್ ನಿಂದ ಮಾತು ಬಂತು.


5 ವರ್ಷಗಳ ಹಿಂದೆ ನಡೆದ ಅಪಘಾತದಿಂದ 
ಮೂಕನಾಗಿದ್ದವನಿಗೆ ಕೊರೊನಾ ವ್ಯಾಕ್ಸಿನ್ ನಿಂದ ಮಾತು ಬಂತು.

ಜಾರ್ಖಂಡ್ : ಕೋವಿಡ್ ವ್ಯಾಕ್ಸಿನ್ , ಕೋವಿಶೀಲ್ಡ್ ಪಡೆದ ನಂತರ ವ್ಯಕ್ತಿಯೋರ್ವನಿಗೆ ಕಳೆದ ಐದು ವರ್ಷಗಳ ನಂತರ ನಿಂತು ಹೋಗಿದ್ದ ಮಾತು ಪುನಃ ಬಂದಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಹೌದುಇಡೀ ಪ್ರಪಂಚದ ಜನರ ನೆಮ್ಮದಿ ಹಾಳು ಮಾಡಿರುವ ಕೊರೊನಾಗೆ ದೇಶದಲ್ಲಿ ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್​ ಲಸಿಕೆ ನೀಡಲಾಗ್ತಿದೆ.ಈಗಾಗಲೇ ಕೋಟ್ಯಂತರ ಜನರು ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ.

ಜಾರ್ಖಂಡ್​ ರಾಜ್ಯದ ಬೊಕಾರೊದಲ್ಲಿ ಕೋವಿಡ್​ ಲಸಿಕೆ ಕೋವಿಶೀಲ್ಡ್​ ಪಡೆದ ವಾರದ ನಂತರ ವ್ಯಕ್ತಿಯೋರ್ವನ ದೇಹದಲ್ಲಿ ಹೊಸ ರೀತಿಯ ಬದಲಾವಣೆ ಕಾಣಿಸಿಕೊಂಡಿದೆ. ಕಳೆದ ಐದು ವರ್ಷಗಳ ನಂತರ ಆತನಿಗೆ ಮಾತು ಮರಳಿ ಬಂದಿದೆ. ಅಷ್ಟೇ ಅಲ್ಲ, ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡಲು ಶುರು ಮಾಡಿವೆ. ಕೆಲವೇ ವಾರಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು, ನರ್ಸ್​ ಜೊತೆ ಸೇರಿ 55 ವರ್ಷದ ದುಲರ್​ ಚಂದ್​ ಮುಂಡಾ ಅವರಿಗೆ ಕೋವಿಶೀಲ್ಡ್​​ ವ್ಯಾಕ್ಸಿನ್​ ನೀಡಿದ್ದಾರೆ. ಇದಾದ ಬಳಿಕ ಈ ಎಲ್ಲ ಬದಲಾವಣೆಗಳು ಕಂಡು ಬಂದಿವೆಯಂತೆ.

ಸಲ್ಗಡಿ ಗ್ರಾಮದ ದುಲರ್​ಚಂದ್ ಮುಂಡಾ ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇವರು ಚಿಕಿತ್ಸೆಯ ನಂತರ ಗುಣಮುಖರಾಗಿದ್ದರೂ ದೈಹಿಕ ನ್ಯೂನತೆಗಳಿಂದಾಗಿ ಹಾಸಿಗೆ ಹಿಡಿದಿದ್ದರು. ದಿನದಿಂದ ದಿನಕ್ಕೆ ಅವರ ಧ್ವನಿಯೂ ಕ್ಷೀಣಿಸಲು ಶುರುವಾಗಿ ಮಾತನಾಡಲು ತೊದಲುತ್ತಿದ್ದರು. ಜನವರಿ 4ರಂದು ಇವರಿಗೆ ಕೋವಿಡ್ ಮೊದಲ ಡೋಸ್ ಆಗಿ​ ಕೋವಿಶೀಲ್ಡ್ ಲಸಿಕೆ​​ ನೀಡಲಾಗಿದೆ. ಇದಾದ ಬಳಿಕ ದೇಹದಲ್ಲಿ ಅನೇಕ ರೀತಿಯ ಬದಲಾವಣೆ ಕಾಣಿಸಿಕೊಂಡಿದ್ದು, ಸ್ಪಷ್ಟವಾಗಿ ಮಾತನಾಡುವುದರ ಜೊತೆಗೆ ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡುತ್ತಿವೆ ಎಂದು ತಿಳಿದು ಬಂದಿದೆ.


SHARE THIS

Author:

0 التعليقات: