Sunday, 9 January 2022

ಸಂಸತ್ತಿನ 400 ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್‌ ಪಾಸಿಟಿವ್: ವರದಿ


 ಸಂಸತ್ತಿನ 400 ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್‌ ಪಾಸಿಟಿವ್: ವರದಿ

ದಿಲ್ಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ಆರಂಭಕ್ಕೂ ಮೊದಲು ಕೋವಿಡ್‌ ಪರೀಕ್ಷೆಗೆ ಒಳಪಟ್ಟ 400 ಕ್ಕೂ ಹೆಚ್ಚು ಸಂಸತ್ತಿನ ಸಿಬ್ಬಂದಿಗಳಲ್ಲಿ ಕೋವಿಡ್-19 ಪಾಸಿಟಿವ್‌ ಧೃಡಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿರುವುದಾಗಿ NDTV.com ವರದಿ ಮಾಡಿದೆ.  

ಜನವರಿ 4 ರ ಹಾಗೂ 8 ರ ನಡುವೆ ಪರೀಕ್ಷೆ ಮಾಡಿದ ಸಂಸತ್ತಿನ 1409 ಸಿಬ್ಬಂದಿಗಳಲ್ಲಿ 402 ಮಂದಿಗೆ ಕರೋನಾ ಪಾಸಿಟಿವ್‌ ಧೃಡಪಟ್ಟಿದೆ. ಅವರ ಪರೀಕ್ಷಾ ಮಾದರಿಗಳನ್ನು ಒಮೈಕ್ರಾನ್‌ ರೂಪಾಂತರಿಯೇ ಅಲ್ಲವೇ ಎಂಬ ಪರೀಕ್ಷೆಗೆ ರವಾನಿಸಲಾಗಿದೆ ಎಂದು ANI ಗೆ ಅಧಿಕಾರಿಗಳು ತಿಳಿಸಿದ್ದಾರೆ. 

ಸಂಸತ್ತಿನ ಆಂತರಿಕ ಸಂದೇಶದಲ್ಲಿ, ʼಲೋಕಸಭಾದ 200 ಸಿಬ್ಬಂದಿಗಳಿಗೆ, ರಾಜ್ಯಸಭಾದ 69 ಸಿಬ್ಬಂದಿಗಳು ಹಾಗೂ 133 ಇತರೆ ಸಿಬ್ಬಂದಿಗಳಿಗೆ ಕೋವಿಡ್‌ ಪಾಸಿಟಿವ್‌ ಧೃಡಪಟ್ಟಿದೆ. ಎಲ್ಲರೂ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕೆಂದುʼ ಸೂಚಿಸಲಾಗಿದೆ. 

ಅದರಂತೆ, ಸಂಸತ್ತಿನ ಉಭಯ ಸದನಗಳ ಸಿಬ್ಬಂದಿಗಳನ್ನು ಐಸೋಲೇಶನ್‌ನಲ್ಲಿ ಇರಿಸಲಾಗಿದ್ದು, ಸೋಂಕಿತ ಸಹೋದ್ಯೋಗಿಗಳೊಂದಿಗೆ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.


SHARE THIS

Author:

0 التعليقات: