Sunday, 2 January 2022

ಕಾಬೂಲ್ ಕಣಿವೆಗೆ 3,000 ಲೀಟರ್ ಮದ್ಯ ಸುರಿದ ತಾಲಿಬಾನ್


ಕಾಬೂಲ್ ಕಣಿವೆಗೆ 3,000 ಲೀಟರ್ ಮದ್ಯ ಸುರಿದ ತಾಲಿಬಾನ್

ಕಾಬೂಲ್: ದೇಶದಲ್ಲಿ ಮದ್ಯ ಮಾರಾಟ ವಿರುದ್ಧ ಸಮರ ಸಾರಿರುವ ಅಫ್ಘಾನಿಸ್ತಾನದ ಗುಪ್ತಚರ ತಂಡ 3,000 ಲೀಟರ್ ಮದ್ಯವನ್ನು ಕಾಬೂಲ್ ಕಣಿವೆಗೆ ಸುರಿದಿದೆ ಎಂದು ಗೂಢಚರ್ಯ ವಿಭಾಗ ಪ್ರಕಟಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ದಾಳಿಯಲ್ಲಿ ಬ್ಯಾರಲ್ ಗಳಲ್ಲಿ ದಾಸ್ತಾನು ಮಾಡಲಾಗಿದ್ದ ಮದ್ಯವನ್ನು ಅಧಿಕಾರಿಗಳು ನಾಲೆಗೆ ಸುರಿಯುತ್ತಿರುವ ದೃಶ್ಯದ ವೀಡಿಯೊ ದೃಶ್ಯಾವಳಿಯನ್ನು ಡೈರೆಕ್ಟರ್ ಜನರಲ್ ಆಫ್ ಇಂಟೆಲಿಜೆನ್ಸ್ ಬಿಡುಗಡೆ ಮಾಡಿದೆ.

"ಮದ್ಯ ಉತ್ಪಾದನೆ ಮತ್ತು ವಿತರಣೆಯಿಂದ ಮುಸ್ಲಿಮರು ಗಂಭೀರವಾಗಿ ದೂರ ಇರಬೇಕು" ಎಂದು ಗುಪ್ತಚರದಳ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಆದರೆ ಯಾವಾಗ ದಾಳಿ ನಡೆಸಿ ಮದ್ಯ ನಾಶಪಡಿಸಲಾಗಿದೆ ಎನ್ನುವುದನ್ನು ಪ್ರಕಟಿಸಿಲ್ಲ. ಕಾರ್ಯಾಚರಣೆ ವೇಳೆ ಮೂವರು ಡೀಲರ್ ಗಳನ್ನು ಬಂಧಿಸಲಾಗಿದೆ.

ಹಿಂದಿನ ಸರಕಾರದ ಆಡಳಿತ ಅವಧಿಯಲ್ಲಿ ಕೂಡಾ ಆಲ್ಕೋಹಾಲ್ ಮಾರಾಟ ಮತ್ತು ಸೇವನೆ ನಿಷೇಧಿಸಲಾಗಿತ್ತು. ಆದರೆ ತಾಲಿಬಾನ್ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಆಗಸ್ಟ್ 15ರಂದು ಅಧಿಕಾರ ವಹಿಸಿಕೊಂಡ ಬಳಿಕ ತಾಲಿಬಾನ್ ನಿರಂತರವಾಗಿ ಮಾದಕವಸ್ತು ಮತ್ತು ಮದ್ಯದ ವಿರುದ್ಧ ಸಮರ ಸಾರಿದ್ದು, ನಿಯಮಿತವಾಗಿ ದಾಳಿಗಳನ್ನು ನಡೆಸುತ್ತಿದೆ.SHARE THIS

Author:

0 التعليقات: