Saturday, 1 January 2022

ದೇಶದಲ್ಲಿ 27 ಸಾವಿರ ಹೊಸ ಕೋವಿಡ್ ಸೋಂಕು ಪತ್ತೆ

ದೇಶದಲ್ಲಿ 27 ಸಾವಿರ ಹೊಸ ಕೋವಿಡ್ ಸೋಂಕು ಪತ್ತೆ

ಹೊಸದಿಲ್ಲಿ: ದೇಶದಲ್ಲಿ ಶನಿವಾರ ಹೊಸದಾಗಿ ಪತ್ತೆಯಾದ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ 27 ಸಾವಿರದ ಗಡಿ ದಾಟಿದೆ. ಶುಕ್ರವಾರ ದಾಖಲಾದ ಒಟ್ಟು ಪ್ರಕರಣಗಳಿಗಿಂತ ಶೇಕಡ 22ರಷ್ಟು ಅಧಿಕ ಪ್ರಕರಣಗಳು ಶನಿವಾರ ಪತ್ತೆಯಾಗಿದ್ದು, ಒಟ್ಟು 27,718 ಪ್ರಕರಣಗಳು ದೃಢಪಟ್ಟಿವೆ. ಶುಕ್ರವಾರ ದೇಶದಲ್ಲಿ 22,706 ಪ್ರಕರಣಗಳು ವರದಿಯಾಗಿದ್ದವು.

ದೇಶದಲ್ಲಿ ಒಮೈಕ್ರಾನ್ ಪ್ರಭೇದದ ವೈರಸ್ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ದೇಶದಲ್ಲಿ ಸಾಂಕ್ರಾಮಿಕ ಉಲ್ಬಣವಾಗಿದ್ದು, ಕೇವಲ ಐದು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 4.5 ಪಟ್ಟು ಹೆಚ್ಚಿದೆ. ಆದಾಗ್ಯೂ ಏರಿಕೆ ಪ್ರಮಾಣ ಹಿಂದಿನ ನಾಲ್ಕು ದಿನಗಳಿಗೆ ಹೋಲಿಸಿದರೆ ಕಡಿಮೆಯಾಗಿರುವುದು ತುಸು ನೆಮ್ಮದಿಯ ವಿಚಾರ. ಶುಕ್ರವಾರ ದೇಶದಲ್ಲಿ ಇದ್ದ ಧನಾತ್ಮಕತೆ ದರ ಶನಿವಾರ ಶೇಕಡ 4.4ಕ್ಕೆ ಹೆಚ್ಚಿದೆ.

ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 9,170 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಏರಿಕೆ ಪ್ರಮಾಣ ಶೇಕಡ 14ರಷ್ಟಾಗಿದೆ. ಬಂಗಾಳದಲ್ಲಿ 4512 ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ದಿನ ದಾಖಲಾಗಿದ್ದ 3451 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 31ರಷ್ಟು ಅಧಿಕ. ಕೊಲ್ಕತ್ತಾ ನಗರದಲ್ಲಿ 2398 ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಪಾಸಿಟಿವಿಟಿ ದರ ಶೇಕಡ 8.46ರಿಂದ 12.02ಕ್ಕೆ ಏರಿದೆ.

ಶೇಕಡ 51ರಷ್ಟು ಏರಿಕೆಯೊಂದಿಗೆ ಶನಿವಾರ ದೆಹಲಿಯಲ್ಲಿ 2716 ಪ್ರಕರಣಗಳು ದಾಖಲಾಗಿದ್ದು, ಕೇರಳ (2435) ರಾಜ್ಯವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದೆ. ಶೇಕಡಾವಾರು ಏರಿಕೆಯಲ್ಲಿ ಬಿಹಾರ ಅಗ್ರಸ್ಥಾನದಲ್ಲಿದ್ದು, ಒಂದೇ ದಿನ ಪ್ರಕರಣಗಳ ಸಂಖ್ಯೆಶೇಕಡ 78ರಷ್ಟು ಏರಿಕೆಯಾಗಿದೆ. ಗುಜರಾತ್‌ನಲ್ಲಿ ಶೇಕಡ 64ರಷ್ಟು ಹೆಚ್ಚಳ ಕಂಡುಬಂದಿದ್ದು, 1069 ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶದಲ್ಲಿ ಶೇಕಡ 61ರಷ್ಟು ಪ್ರಕರಣಗಳು ಹೆಚ್ಚಿದ್ದು, ಉತ್ತರ ಪ್ರದೇಶದಲ್ಲಿ ಹೆಚ್ಚಳ ಪ್ರಮಾಣ ಶೇಕಡ 53ರಷ್ಟಿದೆ.SHARE THIS

Author:

0 التعليقات: