Thursday, 13 January 2022

ದೇಶದಲ್ಲಿ 2.6 ಲಕ್ಷ ಕೋವಿಡ್ ಪ್ರಕರಣ, ಸತತ 2ನೇ ದಿನ 200ಕ್ಕೂ ಅಧಿಕ ಮೃತ್ಯು

ದೇಶದಲ್ಲಿ 2.6 ಲಕ್ಷ ಕೋವಿಡ್ ಪ್ರಕರಣ, ಸತತ 2ನೇ ದಿನ 200ಕ್ಕೂ ಅಧಿಕ ಮೃತ್ಯು

ಹೊಸದಿಲ್ಲಿ: ದೇಶದಲ್ಲಿ ಗುರುವಾರ ಕೋವಿಡ್-19 ಸೋಂಕು ಶೇಕಡ 7ರಷ್ಟು ಏರಿಕೆಯಾಗಿ 2.64 ಲಕ್ಷ ತಲುಪಿದೆ. ಸೋಂಕಿತರ ಸಾವಿನ ಸಂಖ್ಯೆ ಕಡಿಮೆ ಇದ್ದರೂ ಏರಿಕೆಯ ಹಾದಿಯಲ್ಲಿದೆ. 218 ಸೋಂಕಿತರು ಗುರುವಾರ ಜೀವ ಕಳೆದುಕೊಂಡಿದ್ದು, ಸತತ ಎರಡನೇ ದಿನ ದೇಶದಲ್ಲಿ 200ಕ್ಕೂ ಅಧಿಕ ಸೋಂಕಿತರು ಮೃತಪಟ್ಟಿದ್ದಾರೆ.

ಏಳು ದಿನಗಳ ಒಟ್ಟು ಸಾವಿನ ಸಂಖ್ಯೆ 1096 ಆಗಿದ್ದು, ಇದು ಹಿಂದಿನ ಏಳು ದಿನಗಳಲ್ಲಿ ಸಂಭವಿಸಿದ 562 ಸಾವಿಗೆ ಹೋಲಿಸಿದರೆ ಎರಡು ಪಟ್ಟು ಅಧಿಕ.

ಅಂಕಿ ಅಂಶಗಳು ಬರಬೇಕಿರುವ ತ್ರಿಪುರಾ ಹೊರತುಪಡಿಸಿ, ಒಟ್ಟು 2,63,488 ಪ್ರಕರಣಗಳು ದಾಖಲಾಗಿದ್ದು, ಮೊದಲ ಬಾರಿಗೆ ಏರಿಕೆ ಪ್ರಮಾಣ ಶೇಕಡ 10ಕ್ಕಿಂತ ಕಡಿಮೆ ಇದೆ. ದೆಹಲಿ (28867), ಚೆನ್ನೈ (8219) ಅತ್ಯಧಿಕ ಪ್ರಕರಣಗಳನ್ನು ದಾಖಲಿಸಿದ್ದರೆ, ಮುಂಬೈನಲ್ಲಿ ಸೋಂಕಿತರ ಸಂಖ್ಯೆ ಶೇಕಡ 15ರಷ್ಟು ಇಳಿದಿದೆ. ಸತತ ನಾಲ್ಕು ದಿನಗಳ ಇಳಿಕೆಯ ಬಳಿಕ ಬುಧವಾರ ಮುಂಬೈನಲ್ಲಿ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಿತ್ತು.

ಮಹಾರಾಷ್ಟ್ರ (46606), ಪಂಜಾಬ್ (6083), ಜಾರ್ಖಂಡ್ (4000), ಅಸ್ಸಾಂ (3238) ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ಅಲ್ಪಮಟ್ಟಿಗೆ ಕಡಿಮೆಯಾಗಿವೆ. ಆದರೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ಪ್ರಕರಣಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಬುಧವಾರ 31390 ಪ್ರಕರಣಗಳ ವರದಿಯಾಗಿದ್ದರೆ ಗುರುವಾರ ಇದು 25005ಕ್ಕೇರಿದ್ದು, ಈ ಪೈಕಿ 18374 ಪ್ರಕರಣಗಳು ಬೆಂಗಳೂರು ನಗರದಲ್ಲಿ ವರದಿಯಾಗಿವೆ.

ತಮಿಳುನಾಡು (20911), ಒಡಿಶಾ (10059), ಆಂಧ್ರಪ್ರದೇಶ (4348) ಮತ್ತು ಪಶ್ಚಿಮ ಬಂಗಾಳ (23647) ರಾಜ್ಯಗಳಲ್ಲಿ ಪ್ರಕರಣಗಳು ಏರುತ್ತಿವೆ. ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದೂ, ಸಾವಿನ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಗುರುವಾರ 36 ಮಂದಿ ಜೀವ ಕಳೆದುಕೊಂಡಿದ್ದು, ಇದು ಒಂದು ತಿಂಗಳಲ್ಲೇ ಅಧಿಕ. ಬಂಗಾಳದಲ್ಲಿ 26 ಮಂದಿ, ದೆಹಲಿಯಲ್ಲಿ 31 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 25, ಕರ್ನಾಟಕದಲ್ಲಿ 8, ರಾಜಸ್ಥಾನ, ಛತ್ತೀಸ್‌ ಗಢ ಮತ್ತು ಬಿಹಾರದಲ್ಲಿ ತಲಾ ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ.


 SHARE THIS

Author:

0 التعليقات: