Friday, 21 January 2022

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸುಟ್ಟು ಹೋದ ಟಿ.ಸಿಗಳನ್ನ 24 ಗಂಟೆಯಲ್ಲಿ ರೀಪ್ಲೇಸ್


 ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸುಟ್ಟು ಹೋದ ಟಿ.ಸಿಗಳನ್ನ 24 ಗಂಟೆಯಲ್ಲಿ ರೀಪ್ಲೇಸ್

ಬೆಂಗಳೂರು: ಬೆಳಕು ಯೋಜನೆ ಅಡಿಯಲ್ಲಿ, ಯಾರ ಮನೆಯಲ್ಲಿ ವಿದ್ಯುತ್ ಇರಲಿಲ್ಲ ಅವರ ಮನೆಗೆ ವಿದ್ಯುತ್ ನೀಡಲಾಗುತ್ತದೆ. ಸುಟ್ಟು ಹೋದ ಟಿ.ಸಿಗಳನ್ನ 24ಮಟೆಯಲ್ಲಿ ರೀಪ್ಲೇಸ್ ಮಾಡಲಾಗುತ್ತದೆ. ಗಂಗಾ ಕಲ್ಯಾಣ ಯೋಜನೆ ಮೂಲಕ, ವಿದ್ಯುತ್ ಪೂರೈಕೆಗೂ ಕ್ರಮ ಕೈಗೊಳ್ಳಲಾಗಿದೆ.

ಖಾಲಿ ಇರುವಂತ 1,872 ಹುದ್ದೆಗಳನ್ನು ನೇಮಕಾತಿಗೆ ಆದೇಶ ಮಾಡಲಾಗಿದೆ ಎಂಬುದಾಗಿ ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ಈ ಮೂಲಕ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಮುಂದಿನ ವಾರ ದೆಹಲಿಗೆ ಭೇಟಿ ನೀಡ್ತಿದ್ದೀನಿ. ಇಲಾಖೆಗೆ ಸಂಬಂಧಿಸಿದ ಸಚಿವರುಗಳನ್ನ ಭೇಟಿ ಮಾಡಲಿದ್ದೇನೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವ ದೃಷ್ಟಿಯಿಂದ ಭೇಟಿ ಮಾಡಲಾಗುತ್ತದೆ. ತುಳು ಭಾಷೆಗೆ ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಕುರಿತಂತೆಯೂ ಚರ್ಚಿಸಲಾಗುತ್ತದೆ ಎಂದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವುದಕ್ಕೆ ಮತ್ತು ಹೆಚ್ಚು ಅನುದಾನ ಬಿಡುಗಡೆ ಮಾಡುವುದಕ್ಕೆ ಹೋಗ್ತಿದ್ದೀನಿ. ಕನ್ನಡಕ್ಕೆ ಶಾಸ್ತ್ರೀಯ ಸ್ತಾನಮಾನ ಸಿಗಬೇಕು, ನನ್ನ ಬೆಂಬಲ ಕೂಡ ಇದೆ. ಹಾಗೆಯೇ ಸಂಸ್ಕೃತ ವಿರೋಧ ಮಾಡೋದಿಲ್ಲ. ಸಂಸ್ಕೃತ ಭಾಷೆ ಎಲ್ಲದಕ್ಕೂ ತಾಯಿ ಸ್ಥಾನ ಇದೆ. ಸಂಸ್ಕ್ರತ ಹಳೆಯ ಭಾಷೆ ಅಂತ, ಅದಕ್ಕೆ ದಾಖಲೆ ಮತ್ತು ಪಾಣಿ ಕೊಡಿ ಅಂತ ಕೇಳಲಾಗುತ್ತಾ.? ಎಂದು ಪ್ರಶ್ನಿಸಿದರು.

ಸಿಎಂ ಎರಡು ಇಲಾಖೆ ಜವಾಬ್ದಾರಿ ನೀಡಿದ್ದಾರೆ. ವಿಶೇಷವಾಗಿ ಇಂಧನ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ವಹಿಸಿಕೊಂಡು ಜನರ ಕೆಲಸ ಮಾಡಿದ್ದೇವೆ. ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡ್ತಿತ್ತು. ಇದೀಗ ಬೆಂಗಳೂರು ನಗರದ ಹೊರವಲಯದಲ್ಲಿ ನಾಲ್ಕು ಭಾಗದಲ್ಲಿ ಜಾಗ ಗುರುತಿಸಲಾಗಿದೆ. ಇದರಿಂದ ಕಲಾವಿದರಿಗೆ ಅನುಕೂಲ ಆಗಬೇಕಿದೆ. ಬಿಬಿಎಂಪಿ, ಹೌಸಿಂಗ್ ಬೋರ್ಡ್ ಜೊತೆ ಮಾತುಕತೆ ಮಾಡಲಾಗಿದೆ. ನಾಲ್ಕು ರಂಗಮಂದಿರ ನಿರ್ಮಾಣ ಮಾಡಿ ಈ ವರ್ಷವೇ ಕೆಲಸ ಆರಂಭಿಸಬೇಕಿದೆ. ಸಿಎಂ ಕೂಡ ಕಾಮಗಾರಿ ಆರಂಭಿಸಲು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದರು.

ಬುಕ್ಕಿಂಗ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಗ್ಗೆ ಮಾತನಾಡಿದ ಅವರು, ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದು. ಫೆಬ್ರವರಿ ಇಂದ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಸಂಸ ಬಯಲು ರಂಗಮಂದಿರ ಕೂಡ ಆನ್ ಲೈನ್ ಮಾಡಲಾಗುವುದು. ರವೀಂದ್ರ ಕಲಾಕ್ಷೇತ್ರದಲ್ಲಿ ರಿನೋವೇಷನ್ ಮಾಡಲು ನಿರ್ಧಾರ ಮಾಡಲಾಗಿದೆ. ಒಂದುವರೆ ಕೋಟಿ ವೆಚ್ಚದಲ್ಲಿ ಧ್ವನಿ, ಬೆಳಕು ಮತ್ತು ಆಸನ ನವೀಕರಣ ಮಾಡಲಾಗುವುದು. ಶೀಘ್ರ ದರ ಪರಿಷ್ಕರಣೆ ಮಾಡಲು ಕೂಡ ನಿರ್ಧಾರವಾಗಲಿದೆ. ಈಗ 2,500ರೂ ಬಾಡಿಗೆ ಇದೆ. ಹೀಗಾಗಿ ಬಾಡಿಗೆ ಹೆಚ್ಚು ಮಾಡಲು ನಿರ್ಧಾರ ಮಾಡಿದೆ ಎಂದರು.

ಅಮೃತ ಮಹೋತ್ಸವ ಕಾರ್ಯಕ್ರಮ ತಯಾರಿ ಮಾಡಲು ನಿರ್ಧಾರ ಮಾಡಲಾಗುತ್ತದೆ. ಕೋವಿಡ್ ಹಿನ್ನೆಲೆ ಅನಾನುಕೂಲ ಕಾರ್ಯಕ್ರಮ ಆಗಿಲ್ಲ. ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನ, ಅಮೃತ ಭಾರತಿಗೆ, ಕನ್ನಡದ ಆರತಿ ಅಂತ ಕರ್ನಾಟಕದಲ್ಲಿ ಆಚರಣೆಗೂ ಕೋವಿಡ್ ಅಡ್ಡಿಯಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಕನ್ನಡ ನಾಡಿನ ಕೊಡುಗೆ ಬಗ್ಗೆ ಪರಿಚಯ ಮಾಡಿಕೊಡುವ ಉದ್ದೇಶ ಇದೆ. ಹೋರಾಟದ ಹಿನ್ನೆಲೆ ಒಂದು ದಿನ ಅಂತ ಕಾರ್ಯಕ್ರಮ ರೂಪಿಸಲಾಗುವುದು. ಬೇರೆ ಬೇರೆ ಜಿಲ್ಲೆಗೆ ತೆರಳಿ, ಅಲ್ಲಿನ ಐತಿಹಾಸಿಕ ಘಟನೆ ಬಗ್ಗೆ ತಿಳಿಯುವುದು. ಕಲಾಗ್ರಾಮವನ್ನೂ ಕೂಡ ಸಾರ್ವಜನಿಕರಿಗೆ ಮುಕ್ತ ಮಾಡಲು ತೀರ್ಮಾನಿಸಲಾಗಿದೆ ಎಂದರು.


SHARE THIS

Author:

0 التعليقات: