Friday, 14 January 2022

ಕೋವಿಡ್ ಡೆಲ್ಟಾ ರೂಪಾಂತರಿ ಭಾರತದಲ್ಲಿ 2.4 ಲಕ್ಷ ಜೀವಗಳನ್ನು ಬಲಿ ಪಡೆದಿದೆ, ಎಚ್ಚರಿಕೆಯಿರಲಿ: ವಿಶ್ವ ಆರೋಗ್ಯ ಸಂಸ್ಥೆ


 ಕೋವಿಡ್ ಡೆಲ್ಟಾ ರೂಪಾಂತರಿ ಭಾರತದಲ್ಲಿ 2.4 ಲಕ್ಷ ಜೀವಗಳನ್ನು ಬಲಿ ಪಡೆದಿದೆ, ಎಚ್ಚರಿಕೆಯಿರಲಿ: ವಿಶ್ವ ಆರೋಗ್ಯ ಸಂಸ್ಥೆ

ಹೊಸದಿಲ್ಲಿ: ಕೋವಿಡ್-19 ಡೆಲ್ಟಾ ರೂಪಾಂತರಿ ಭಾರತದಲ್ಲಿ ಎಪ್ರಿಲ್-ಜೂನ್ 2021ರ ನಡುವೆ 2.4 ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡಿತಲ್ಲದೆ ದೇಶದ ಆರ್ಥಿಕ ಪುನಶ್ಚೇತನದ ಹಾದಿಗೆ ತಡೆಯುಂಟು ಮಾಡಿತು ಎಂದು ವಿಶ್ವ ಸಂಸ್ಥೆಯ ವರ್ಲ್ಡ್ ಇಕನಾಮಿಕ್ ಸಿಟುವೇಶನ್ ಎಂಡ್ ಪ್ರಾಸ್ಪೆಕ್ಟ್ಸ್ 2022 ವರದಿ ಹೇಳಿದೆ. ಕಳೆದ ವರ್ಷದಂತಹುದೇ ವಿದ್ಯಮಾನಗಳು ಸದ್ಯೋಭವಿಷ್ಯದಲ್ಲಿ ನಡೆಯಬಹುದೆಂದೂ ವರದಿ ಹೇಳಿದೆ.

ಈಗ ಎಲ್ಲೆಡೆ ಹರಡುತ್ತಿರುವ ಓಮೈಕ್ರಾನ್ ರೂಪಾಂತರಿ ಕೂಡ ಇನ್ನೊಂದು ಸೋಂಕಿನ ಅಲೆಯನ್ನು ಸೃಷ್ಟಿಸಿ ದೇಶದಲ್ಲಿ ಜೀವಗಳನ್ನು ಬಲಿ ತೆಗೆದುಕೊಳ್ಳಬಹುದು ಹಾಗೂ ಆರ್ಥಿಕತೆ ಹದಗೆಡಲೂ ಕಾರಣವಾಗಬಹುದು ಎಂದು ವರದಿ ಹೇಳಿದೆ.

"ಕೋವಿಡ್-19 ಸಾಂಕ್ರಾಮಿಕವನ್ನು ಒಂದು ಸಹಭಾಗಿತ್ವದ ಸುಸ್ಥಿರ ಧೋರಣೆಯಿಂದ ನಿರ್ವಹಿಸಿ ಲಸಿಕೆಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡದ ಹೊರತು ಈ ಸಾಂಕ್ರಾಮಿಕ ವಿಶ್ವದ ಆರ್ಥಿಕತೆಯ ಸುಸ್ಥಿರ ಚೇತರಿಕೆಗೆ ಅಡ್ಡಿಯಾಗಲಿದೆ" ಎಂದು ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಅಧೀನ ಮಹಾಕಾರ್ಯದರ್ಶಿ  ಲಿಯು ಝೆನ್ಮಿನ್ ಹೇಳಿದ್ದಾರೆ.


SHARE THIS

Author:

0 التعليقات: