Saturday, 8 January 2022

ದೆಹಲಿಯಲ್ಲಿ ಒಂದೇ ದಿನ 20 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು


ದೆಹಲಿಯಲ್ಲಿ ಒಂದೇ ದಿನ 20 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು  

ಹೊಸದಿಲ್ಲಿ: ಕಳೆದ 250 ದಿನಗಳಲ್ಲಿ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯಲ್ಲಿ ಒಂದೇ ದಿನ 20 ಸಾವಿರಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ನಗರದಲ್ಲಿ ಸಾಂಕ್ರಾಮಿಕದ ಅಲೆ ಮುಂದುವರಿದಿದೆ. ಆದರೆ ಒಟ್ಟು ಪ್ರಕರಣಗಳು ಹೆಚ್ಚುತ್ತಿದ್ದರೂ, ಆಸ್ಪತ್ರೆಗಳಲ್ಲಿ ಮೀಸಲಿಟ್ಟ ಹಾಸಿಗೆಗಳ ಪೈಕಿ ಶೇಕಡ 89ರಷ್ಟು ಇನ್ನೂ ಖಾಲಿ ಇವೆ.

ರಾಜ್ಯದಲ್ಲಿ ಸೋಂಕಿನಿಂದ ಶನಿವಾರ ಏಳು ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಶನಿವಾರ 20,181 ಹೊಸ ಪ್ರಕರಣಗಳು ವರದಿಯಾಗಿದ್ದು, ದೈನಿಕ ತಪಾಸಣೆ ಪ್ರಮಾಣ ಕಳೆದ ವರ್ಷದ ಏಪ್ರಿಲ್‌ನಿಂದ ಇದೇ ಮೊದಲ ಬಾರಿಗೆ ಒಂದು ಲಕ್ಷದ ಗಡಿ ದಾಟಿದೆ. ಶನಿವಾರ ಸಂಗ್ರಹಿಸಲಾದ 1,02,965 ಮಾದರಿಗಳು ಪೈಕಿ ಶೇಖಡ 19.6ರಷ್ಟು ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ರಾಜ್ಯ ಸರ್ಕಾರದ ಆರೋಗ್ಯ ಬುಲೆಟಿನ್ ಸ್ಪಷ್ಟಪಡಿಸಿದೆ.

ಮೇ 9ರ ಬಳಿಕ ಇದೇ ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇಕಡ 21.67ಕ್ಕೆ ಏರಿದೆ. ಪ್ರಸ್ತುತ ನಗರದಲ್ಲಿ 48,178 ರೋಗಿಗಳು ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ.

ಆದಾಗ್ಯೂ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರಿಗಾಗಿ ಮೀಸಲಿಟ್ಟಿರುವ ಹಾಸಿಗೆಗಳ ಪೈಕಿ ದೊಡ್ಡ ಸಂಖ್ಯೆಯ ಬೆಡ್‌ಗಳು ಖಾಲಿ ಇವೆ. ಸೋಂಕು ಸಮಸ್ಯೆಯಿಂದ 1586 ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಅಂದರೆ ಒಟ್ಟು ಮೀಸಲಿಟ್ಟಿರುವ ಬೆಡ್‌ಗಳ ಪೈಕಿ 12500ಕ್ಕೂ ಅಧಿಕ ಅಂದರೆ ಶೇಕಡ 89ರಷ್ಟು ಬೆಡ್‌ಗಳು ಶನಿವಾರ ಸಂಜೆ ವೇಳೆಗೆ ಖಾಲಿ ಇದ್ದವು.

ಆಸ್ಪತ್ರೆಗೆ ದಾಖಲಾಗುವ ದರ ಹಿಂದಿನ ಅಲೆಗಳಿಗೆ ಹೋಲಿಸಿದರೆ ತೀರಾ ಕಡಿಮೆ ಇದೆ. ಇದು ಒಮೈಕ್ರಾನ್ ಅಲೆ ದಟ್ಟವಾಗಿ ಹಬ್ಬಿದೆ ಎನ್ನುವುದರ ಸೂಚಕ ಎಂದು ತಜ್ಞರು ಮತ್ತು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಭೇದದ ವೈರಸ್ ವೇಗವಾಗಿ ಹರಡಿದರೂ, ತೀವ್ರ ಪ್ರಮಾಣದ ಅಸ್ವಸ್ಥತೆಗೆ ಕಾರಣವಾಗುವ ಸಾಧ್ಯತೆ ಕಡಿಮೆ ಎನ್ನುವುದು ತಜ್ಞರ ಅಭಿಮತ.SHARE THIS

Author:

0 التعليقات: