Friday, 14 January 2022

1901ರ ಬಳಿಕ 2021 ಭಾರತದ ಐದನೇ ಅತ್ಯಂತ ತಾಪಮಾನದ ವರ್ಷವಾಗಿತ್ತು.

1901ರ ಬಳಿಕ 2021 ಭಾರತದ ಐದನೇ ಅತ್ಯಂತ ತಾಪಮಾನದ ವರ್ಷವಾಗಿತ್ತು.

ಹೊಸದಿಲ್ಲಿ,ಜ.14: 1901ರ ಬಳಿಕ 2021 ಭಾರತದ ಐದನೇ ಅತ್ಯಂತ ತಾಪಮಾನದ ವರ್ಷವಾಗಿತ್ತು ಮತ್ತು ವಾರ್ಷಿಕ ಸರಾಸರಿ ತಾಪಮಾನವು ಸಾಮಾನ್ಯಕ್ಕಿಂತ 0.44 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಶುಕ್ರವಾರ ತಿಳಿಸಿದೆ.

2021ರಲ್ಲಿಪ್ರವಾಹಗಳು,ಚಂಡಮಾರುತಗಳು,ಭಾರೀಮಳೆ,ಭೂಕುಸಿತಗಳು, ಸಿಡಿಲು ಇತ್ಯಾದಿ ಹವಾಮಾನ ವೈಪರೀತ್ಯ ಘಟನೆಗಳಿಂದಾಗಿ 1,750 ಸಾವುಗಳು ಸಂಭವಿಸಿವೆ ಎಂದು ಅದು ತಿಳಿಸಿದೆ.

1901ರಿಂದ 2016,2009,2017 ಮತ್ತು 2010ರ ನಂತರ 2021 ಅತ್ಯಂತ ಹೆಚ್ಚು ತಾಪಮಾನದ ವರ್ಷವಾಗಿತ್ತು ಎಂದು ಐಎಂಡಿ ತನ್ನ ವಾರ್ಷಿಕ ಹವಾಮಾನ ಹೇಳಿಕೆಯಲ್ಲಿ ತಿಳಿಸಿದೆ. ಚಳಿಗಾಲ ಮತ್ತು ಮಾನ್ಸೂನ್ ನಂತರದ ಋತುವಿನಲ್ಲಿಯ ಹೆಚ್ಚಿನ ತಾಪಮಾನ ಇದಕ್ಕೆ ಪ್ರಮುಖ ಪಾಲನ್ನು ಸಲ್ಲಿಸಿವೆ ಎಂದು ಅದು ಹೇಳಿದೆ.

2016ರಲ್ಲಿ ದೇಶದಲ್ಲಿ ವಾರ್ಷಿಕ ಸರಾಸರಿ ವಾಯು ತಾಪಮಾನ ಸಾಮಾನ್ಯಕ್ಕಿಂತ 0.710 ಡಿ.ಸೆ.ಹೆಚ್ಚಿತ್ತು. 2009 ಮತ್ತು 2017ರಲ್ಲಿ ಇದು ಅನುಕ್ರಮವಾಗಿ 0.550 ಡಿ.ಸೆ.ಮತ್ತು 0.541 ಡಿ.ಸೆ.ನಷ್ಟು ಹೆಚ್ಚಿತ್ತು. 2010ರಲ್ಲಿ ವಾರ್ಷಿಕ ಸರಾಸರಿ ತಾಪಮಾನವು ಸಾಮಾನ್ಯಕ್ಕಿಂತ 0.539 ಡಿ.ಸೆ.ಹೆಚ್ಚಿತ್ತು ಎಂದು ಐಎಂಡಿ ತಿಳಿಸಿದೆ.

2021ರಲ್ಲಿ ಸಿಡಿಲು-ಮಿಂಚುಗಳಿಂದಾಗಿ ದೇಶದಲ್ಲಿ 787 ಜನರು ಹಾಗೂ ಭಾರೀಮಳೆ ಮತ್ತು ಪ್ರವಾಹ ಸಂಬಂಧಿ ಘಟನೆಗಳಲ್ಲಿ 759 ಜನರು ಪ್ರಾಣ ಕಳೆದುಕೊಂಡಿದ್ದಾರೆ.SHARE THIS

Author:

0 التعليقات: