Monday, 3 January 2022

15 ನಿಮಿಷಗಳ ಅಂತರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಮಕ್ಕಳು ಜನಿಸಿದ್ದು ಮಾತ್ರ ಬೇರೆ ಬೇರೆ ವರ್ಷದಲ್ಲಿ!

15 ನಿಮಿಷಗಳ ಅಂತರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಮಕ್ಕಳು ಜನಿಸಿದ್ದು ಮಾತ್ರ ಬೇರೆ ಬೇರೆ ವರ್ಷದಲ್ಲಿ!

 ಫಾತಿಮಾ ಮಾಡ್ರಿಗಲ್ ಅವರಿಗೆ ಹೆರಿಗೆ ಮಾಡಿಸಿದ ಆಸ್ಪತ್ರೆಯು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಅಯ್ಲಿನ್ ಮತ್ತು ಆಲ್ಫ್ರೆಡೊ ಟ್ರುಜಿಲ್ಲೊ ಎಂಬ ಇಬ್ಬರು ಮಕ್ಕಳು ಕೇವಲ 15 ನಿಮಿಷಗಳ ಅಂತರದಲ್ಲಿ ಜನಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಫಾತಿಮಾ ಮಾಡ್ರಿಗಲ್ ಎಂಬ ಮಹಿಳೆ ನಾಟಿವಿಡಾಡ್ ವೈದ್ಯಕೀಯ ಕೇಂದ್ರದಲ್ಲಿ 15 ನಿಮಿಷಗಳ ಅಂತರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಅರೆ ಇದರಲ್ಲೇನು ವಿಶೇಷ ಇದೆ. ಅವಳಿ ಮಕ್ಕಳಿಗೆ ಜನ್ಮ ನೀಡುವುದು ಹೊಸದೇನು ಅಲ್ಲವಲ್ಲಾ ಎಂದು ನೀವು ಯೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಕ್ಯಾಲಿಫೋರ್ನಿಯಾದ ಮಹಿಳೆ ತನ್ನ ಅವಳಿ ಮಕ್ಕಳಿಗೆ ವಿಭಿನ್ನ ವರ್ಷ, ದಿನ ಮತ್ತು ತಿಂಗಳಲ್ಲಿ ಜನ್ಮ ನೀಡಿದ್ದಾರೆ. ಹೌದು ಅವಳಿ ಮಕ್ಕಳಾದರೂ ಬೇರೆ ವರ್ಷದಲ್ಲಿ ಜನಿಸಿದ್ದಾರೆ. ಈ ಅಪರೂಪದ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಈ ಸುದ್ದಿಯನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಫಾತಿಮಾ ಮಾಡ್ರಿಗಲ್ ಅವರಿಗೆ ಹೆರಿಗೆ ಮಾಡಿಸಿದ ಆಸ್ಪತ್ರೆಯು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಅಯ್ಲಿನ್ ಮತ್ತು ಆಲ್ಫ್ರೆಡೊ ಟ್ರುಜಿಲ್ಲೊ ಎಂಬ ಇಬ್ಬರು ಮಕ್ಕಳು ಕೇವಲ 15 ನಿಮಿಷಗಳ ಅಂತರದಲ್ಲಿ ಜನಿಸಿದ್ದಾರೆ. ಆದರೆ ಅವರು ಬೇರೆ ಬೇರೆ ವರ್ಷಗಳಲ್ಲಿ ಜನಿಸಿದ್ದಾರೆ. ಆಲ್ಫ್ರೆಡೊ ಟ್ರುಜಿಲ್ಲೊ 2021 ರ (ಡಿಸೆಂಬರ್​ 31) ಶುಕ್ರವಾರ ರಾತ್ರಿ 11.45ಕ್ಕೆ ಜನಿಸಿದೆ. ಇನ್ನೊಂದು ಮಗು ಅಯ್ಲಿನ್ ಶನಿವಾರ, ಜನವರಿ 01, 2022 ರಂದು ಜನಿಸಿದೆ. ಆ ಮೂಲಕ ಅವಳಿ ಮಕ್ಕಳು ಬೇರೆ ಬೇರೆ ದಿನ, ವರ್ಷ ಮತ್ತು ತಿಂಗಳಲ್ಲಿ ಜನಿಸಿ, ಅಚ್ಚರಿ ಹುಟ್ಟಿಸಿದೆ ಎಂದು ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ವಿವರಣೆ ನೀಡಲಾಗಿದೆ.

ನನ್ನ ಅವಳಿ ಮಕ್ಕಳು ಬೇರೆ ಬೇರೆ ದಿನ, ವರ್ಷದಲ್ಲಿ ಹುಟ್ಟಿದ್ದು, ನನಗೆ ಅಚ್ಚರಿ ಉಂಟುಮಾಡಿದೆ. ಮಧ್ಯರಾತ್ರಿಯಲ್ಲಿ ನಡೆದ ಈ ಚಮತ್ಕಾರದಿಂದ ನಾನು ಆಶ್ಚರ್ಯಗೊಂಡಿದ್ದೇನೆ ಮತ್ತು ತುಂಬಾ ಸಂತೋಷವಾಗಿದೆ ಎಂದು ಅವಳಿ ಮಕ್ಕಳ ತಾಯಿ ಫಾತಿಮಾ ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರು ಈ ಸುದ್ದಿ ಕಂಡು ಖುಷಿಪಟ್ಟಿದ್ದಾರೆ ಮತ್ತು ಕಮೆಂಟ್​ಗಳ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಘಟನೆ ಎಷ್ಟು ಅದ್ಭುತ ಎಂದು ಬರೆದರೆ, ಇನ್ನು ಕೆಲವರು ಭವಿಷ್ಯದಲ್ಲಿ ಅವಳಿಗಳ ಜನ್ಮದಿನಗಳು ಮಹಾಕಾವ್ಯವಾಗಲಿವೆ ಎಂದು ಕಮೆಂಟ್​ ಮಾಡಿದ್ದಾರೆ.




SHARE THIS

Author:

0 التعليقات: