Friday, 7 January 2022

ದೇಶದಲ್ಲಿ 150 ಕೋಟಿ ದಾಟಿದ ಕೋವಿಡ್ ಲಸಿಕೆ ನೀಡಿಕೆ : ಪ್ರಧಾನಿ ಮೋದಿ

ದೇಶದಲ್ಲಿ 150 ಕೋಟಿ ದಾಟಿದ ಕೋವಿಡ್ ಲಸಿಕೆ ನೀಡಿಕೆ : ಪ್ರಧಾನಿ ಮೋದಿ

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ವಿರುದ್ಧದ ಲಸಿಕೆ ನೀಡಿಕೆ ಆರಂಭಿಸಿ ಒಂದು ವರ್ಷದ ಒಳಗಾಗಿ 150 ಕೋಟಿ ಲಸಿಕಾ ಡೋಸ್‌ಗಳನ್ನು ನಾಗರಿಕರಿಗೆ ನೀಡಲಾಗಿದೆ. ಇದರಲ್ಲಿ 15-18 ವಯೋವರ್ಗದ ಮಕ್ಕಳಿಗೆ ನೀಡಿರುವ ಎರಡು ಕೋಟಿ ಲಸಿಕೆಗಳೂ ಸೇರಿವೆ. ಈ ಮೂಲಕ ಭಾರತ ಲಸಿಕಾ ಅಭಿಯಾನದಲ್ಲಿ ಮಹತ್ವದ ಮೈಲುಗಲ್ಲು ದಾಟಿದಂತಾಗಿದೆ.

ಲಸಿಕೆ ನೀಡಿಕೆಯಲ್ಲಿ ಇದು ಮಹತ್ವದ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. "150 ಕೋಟಿಯ ಮೈಲುಗಲ್ಲು ಸಾಧಿಸಿರುವುದಕ್ಕೆ ಸಹ ನಾಗರಿಕರಿಗೆ ಅಭಿನಂದನೆಗಳು. ನಮ್ಮ ಲಸಿಕಾ ಅಭಿಯಾನ ಹಲವು ಜೀವಗಳನ್ನು ಉಳಿಸುವುದನ್ನು ಖಾತರಿಪಡಿಸಿದೆ. ಇದೇ ವೇಳೆ ನಾವೆಲ ಕೋವಿಡ್-19 ಶಿಷ್ಟಾಚಾರಗಳನ್ನು ಪಾಲಿಸೋಣ" ಎಂದು ಮೋದಿ ಹೇಳಿದ್ದಾರೆ.

ದೇಶದಲ್ಲಿ ಶೇಕಡ 91ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಶೇಕಡ 66ರಷ್ಟು ಮಂದಿಗೆ ಎರಡೂ ಡೋಸ್ ನೀಡಲಾಗಿದೆ. ಪ್ರೌಢಾವಸ್ಥೆಯ ಎರಡು ಕೋಟಿ ಮಂದಿಗೆ ಕೊವ್ಯಾಕ್ಸಿನ್ ಮೊದಲ ಡೋಸ್ ನೀಡಲಾಗಿದ್ದು, ಈ ವಯೋವರ್ಗದ ಶೇಕಡ 27ರಷ್ಟು ಮಂದಿಗೆ ಒಂದು ಡೋಸ್ ಲಸಿಕೆ ನೀಡಿದಂತಾಗಿದೆ.

"ನಾವು ಇಂದು ಮಹತ್ವದ ಮೈಲುಗಲ್ಲು ದಾಟಿದ್ದೇವೆ. 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಮೂಲಕ ನಾವು ಹೊಸ ವರ್ಷ ಆರಂಭಿಸಿದ್ದೇವೆ. ಹೊಸ ವರ್ಷದ ಮೊದಲ ತಿಂಗಳ ಮೊದಲ ವಾರದಲ್ಲಿ 150 ಕೋಟಿ ಡೋಸ್‌ಗಳ ನೀಡಿಕೆ ಪೂರ್ಣಗೊಳಿಸಿದ್ದೇವೆ. ಇದು ನಿಜಕ್ಕೂ ಎತ್ತರದ ಸಾಧನೆ. ಇದು ವಿಶ್ವಕ್ಕೆ ಅಚ್ಚರಿ ತರಬಹುದು ಮತ್ತು 130 ಕೋಟಿ ಭಾರತೀಯರಿಗೆ ಇದು ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಸ್ವಯಂ ಹೆಮ್ಮೆಯ ಸಾಧನೆ" ಎಂದು ಮೋದಿ ವಿವರಿಸಿದ್ದಾರೆ.SHARE THIS

Author:

0 التعليقات: