Monday, 3 January 2022

ಸುಳ್ಯ ಹಾಸ್ಟೆಲ್‌ನಲ್ಲಿ ಸಂಗ್ರಹಿಸಿಟ್ಟಿದ್ದ 11 ಕೆ.ಜಿ. ಗಾಂಜಾ ವಶ


ಸುಳ್ಯ ಹಾಸ್ಟೆಲ್‌ನಲ್ಲಿ ಸಂಗ್ರಹಿಸಿಟ್ಟಿದ್ದ 11 ಕೆ.ಜಿ. ಗಾಂಜಾ ವಶ

ಸುಳ್ಯ: ಸುಳ್ಯ ಮತ್ತು ಪುತ್ತೂರು ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸುಳ್ಯ ತಾಲೂಕಿನ ಅಂಬಟೆಡ್ಕದ ಬೆನಕ ಹಾಸ್ಟೆಲ್‌ನಲ್ಲಿ ಬಾಡಿಗೆದಾರರೊಬ್ಬರು ತಮ್ಮ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದ 11 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡ ಘಟನೆ ವರದಿಯಾಗಿದೆ.

ಅಂಬಟೆಡ್ಕದ ಬೆನಕ ಹಾಸ್ಟೆಲ್‌ನಲ್ಲಿ ಪಲ್ಲತ್ತೂರಿನ ಮೊಯ್ದಿನ್ ಕುಂಞಿ ಕೊಠಡಿಯನ್ನು ಬಾಡಿಗೆ ಪಡೆದು ಕುಟುಂಬದೊಂದಿಗೆ ವಾಸವಿದ್ದರೆನ್ನಲಾಗಿದೆ. ಇಲ್ಲಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಪುತ್ತೂರು ಅಬಕಾರಿ ಇಲಾಖೆಯವರು ಸುಳ್ಯ ಅಬಕಾರಿ ಇಲಾಖೆಯವರೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಿದರು.

ಕೊಠಡಿಯನ್ನು ತಪಾಸಣೆ ಮಾಡುವ ವೇಳೆ 11.5 ಕೆ.ಜಿ. ಗಾಂಜಾ ಪತ್ತೆಯಾಗಿದೆ. ಈ ವೇಳೆ ಮನೆಯೊಳಗಿದ್ದ ಮೊಯ್ದಿನ್ ಕುಂಞಿ ಪರಾರಿಯಾಗಿದ್ದು ಸಲಾಹುದ್ದೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಯ್ದೀನ್ ಕುಂಞಿಯ ಕಾರನ್ನು ಕೂಡಾ ವಶಕ್ಕೆ ಪಡೆದಿದ್ದು ಅದರಲ್ಲಿ ಕೂಡಾ 1 ಕೆ.ಜಿ. ಗಾಂಜಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಅಬಕಾರಿ ಉಪಾಧೀಕ್ಷಕ ಶಿವಪ್ರಸಾದ್, ಅಬಕಾರಿ ನಿರೀಕ್ಷಕ ಸುಬ್ರಹ್ಮಣ್ಯ ಪೈ, ಸುಳ್ಯ ಅಬಕಾರಿ ನಿರೀಕ್ಷಕಿ ರಾಧಾ, ಸಿಬ್ಬಂದಿಗಳಾದ ವಿಜಯಕುಮಾರ್, ಪ್ರೇಮಾನಂದ, ಯಲ್ಲಪ್ಪ, ಪ್ರಶಾಂತ್, ಶರಣಪ್ಪ, ಅಮರೇಶ್, ಅಶೋಕ್, ಶರತ್, ತಿಪ್ಪೇಸ್ವಾಮಿ, ನೀಲಾಧರ ಮತ್ತಿತರರು ಕಾರ್ಯಾಚರಣೆ ನಡೆಸಿದರು.


 SHARE THIS

Author:

0 التعليقات: