Monday, 31 January 2022

'ಹಿಜಾಬ್ ಮೂಲಭೂತ ಹಕ್ಕುʼ ಎಂದು ಘೋಷಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ

'ಹಿಜಾಬ್ ಮೂಲಭೂತ ಹಕ್ಕುʼ ಎಂದು ಘೋಷಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ

'ಹಿಜಾಬ್ ಮೂಲಭೂತ ಹಕ್ಕುʼ ಎಂದು ಘೋಷಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ

ಉಡುಪಿ: ಇಲ್ಲಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುವ ವಿವಾದಕ್ಕೆ ಸಂಬಂಧಿಸಿ ವಿದ್ಯಾರ್ಥಿನಿಯೋರ್ವ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. 

ಭಾರತ ಸಂವಿಧಾನದ 14 ಮತ್ತು 25 ನೇ ವಿಧಿಯನ್ವಯ ವಿದ್ಯಾರ್ಥಿನಿ  ಹಿಜಾಬ್ ಧರಿಸುವುದು ಆಕೆಯ  ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಉಡುಪಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ  ರೇಶಮ್ ಫಾರೂಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಿದ್ಯಾರ್ಥಿನಿ ಪರ ವಕೀಲರಾದ ಶತಾಬಿಶ್ ಶಿವಣ್ಣ, ಅರ್ನವ್ ಎ ಬಾಗಲವಾಡಿ ಮತ್ತು ಅಭಿಷೇಕ್ ಜನಾರ್ದನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಮತ್ತು ಕಾಲೇಜು ಆಡಳಿತದ ಯಾವುದೇ ಹಸ್ತಕ್ಷೇಪವಿಲ್ಲದೆ ಅನುಮತಿ ನೀಡಬೇಕೆಂದು ಕೋರಿದ್ದಾರೆ.

'ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವಂತೆ  ಕಾಲೇಜಿಗೆ ಮಧ್ಯಂತರ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರುತ್ತೇವೆ'' ಎಂದು ಶಿವಣ್ಣ ಹೇಳಿದರು.

“ವಿಚಾರಣೆಗೆ  ಬಂದಾಗ, ವಿದ್ಯಾರ್ಥಿಗಳಿಗೆ ಮಧ್ಯಂತರ ಪರಿಹಾರವನ್ನು ನೀಡುವಂತೆ ನಾವು ನ್ಯಾಯಾಲಯವನ್ನು ಕೋರುತ್ತೇವೆ. ನ್ಯಾಯಾಲಯವು ಅದರ ನಿಯಮದ ಪ್ರಕಾರ ಹೋಗುತ್ತದೆ ಮತ್ತು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ರಾಜ್ಯ ಮತ್ತು ಕಾಲೇಜನ್ನು ಕೇಳುತ್ತದೆ, ಆದ್ದರಿಂದ ಈ ಮಧ್ಯೆ, ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಕಾಲೇಜಿಗೆ ನಿರ್ದೇಶನ ನೀಡುವಂತೆ ನಾವು ನ್ಯಾಯಾಲಯಕ್ಕೆ ಕೋರುತ್ತೇವೆ”ಎಂದು ಅವರು ಹೇಳಿದರು.

 ಬೆಂಗಳೂರಿನಲ್ಲಿ ವಾಹನ ಟೋಯಿಂಗ್ ಗೆ ತಾತ್ಕಾಲಿಕ ತಡೆ

ಬೆಂಗಳೂರಿನಲ್ಲಿ ವಾಹನ ಟೋಯಿಂಗ್ ಗೆ ತಾತ್ಕಾಲಿಕ ತಡೆ

 

ಬೆಂಗಳೂರಿನಲ್ಲಿ ವಾಹನ ಟೋಯಿಂಗ್'ಗೆ ತಾತ್ಕಾಲಿಕ ತಡೆ

ಬೆಂಗಳೂರು: ನಗರದೆಲ್ಲೆಡೆ ವಾಹನ ಟೋಯಿಂಗ್‍ಗಳನ್ನು ನಿಯಮ ಮೀರಿ ಮಾಡಲಾಗುತ್ತಿದೆ ಎಂದು ದೂರುಗಳು ಕೇಳಿಬರುತ್ತಿರುವ ಕಾರಣದಿಂದ ಗೊಂದಲ ಮುಗಿಯುವವರೆಗೆ ಟೋಯಿಂಗ್ ಮಾಡದಂತೆ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಆದೇಶಿಸಿದ್ದಾರೆ.

ಟೋಯಿಂಗ್ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಹಾಗಾಗಿ ಟೋಯಿಂಗ್ ಕುರಿತು ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುವವರೆಗೆ ಬೆಂಗಳೂರಿನಲ್ಲಿ ಟೋಯಿಂಗ್ ನಿಲ್ಲಿಸುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದೇ ವಿಚಾರವಾಗಿ ಸೋಮವಾರ ಇಲ್ಲಿನ ಅರಮನೆ ಮೈದಾನದಲ್ಲಿ ಟೋಯಿಂಗ್ ವ್ಯವಸ್ಥೆ ಸುಧಾರಣೆ ಹೇಗೆ ಹಾಗೂ ಪೊಲೀಸರು ಜನರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿಸಲು ಬಿ.ಆರ್. ರವಿಕಾಂತೇಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು.

ನಗರದ ಎಲ್ಲ ಸಂಚಾರ ಠಾಣೆಗಳ ಎಎಸ್ಸೈ, ಪಿಎಸ್ಸೈ, ಇನ್‍ಸ್ಪೆಕ್ಟರ್, ಎಸಿಪಿ ಹಾಗೂ ಡಿಸಿಪಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೆಲ ಸೂಚನೆಗಳನ್ನು ಪಾಲಿಸಬೇಕು. ಸಾರ್ವಜನಿಕರ ಅಭಿಪ್ರಾಯಗಳನ್ನು ಗೌರವಿಸಬೇಕೆಂದು ತಿಳಿಸಿಕೊಡಲಾಯಿತು.

 ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸಿಎಂ ಜತೆ ಚರ್ಚೆ: ಎಚ್.ಡಿ.ಕುಮಾರಸ್ವಾಮಿ

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸಿಎಂ ಜತೆ ಚರ್ಚೆ: ಎಚ್.ಡಿ.ಕುಮಾರಸ್ವಾಮಿ


 ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸಿಎಂ ಜತೆ ಚರ್ಚೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಬಂಧಿತ ಸಚಿವರ ಜತೆ ಮಾತುಕತೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಸೋಮವಾರ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿಯ ಮುಖಂಡರು ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಭೇಟಿಯಾಗಿ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈ ಬಗ್ಗೆ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿಯೂ ಪ್ರಸ್ತಾಪ ಮಾಡುವುದಾಗಿ ತಿಳಿಸಿದರು.

ಅನೇಕ ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು ನನೆಗುದಿಗೆ ಬಿದ್ದಿವೆ. ಅವುಗಳನ್ನು ಈಡೇರಿಸಲೇಬೇಕು. ರಾಜ್ಯದಲ್ಲಿ ಅಸಂಖ್ಯಾತ ಅಂಗನವಾಡಿ ಕಾರ್ಯಕರ್ತೆಯರಿದ್ದು, ಕೋವಿಡ್ ಸೋಂಕಿನ ಕಾಲದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಆ ವಿಷಮ ಪರಿಸ್ಥಿತಿಯಲ್ಲಿ 59 ಕಾರ್ಯಕರ್ತೆಯರು ಸೋಂಕಿಗೆ ಬಲಿಯಾಗಿದ್ದಾರೆ. ಇನ್ನೂ ಅನೇಕರು ಸೋಂಕಿನ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಸರಕಾರ ಮಾನವೀಯ ನೆಲೆಗಟ್ಟಿನಲ್ಲಿ ಇವರ ಸಮಸ್ಯೆಗಳನ್ನು ಬಗೆಹರಿಸಬೇಕು. ಗ್ರಾಮೀಣ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರನ್ನು ನಿರ್ಲಕ್ಷ್ಯ ಮಾಡುವುದು ಬೇಡ ಎಂದು ಕುಮಾರಸ್ವಾಮಿ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವುದರ ಜತೆಗೆ, ಎನ್‍ಪಿಎಸ್ ವಂಚಿತರಾಗಿ ನಿವೃತ್ತಿಯಾದ ಎಲ್ಲರಿಗೂ ಪರಿಹಾರ ನೀಡಬೇಕು. ಅದಕ್ಕೆ ಅಗತ್ಯವಾದ 3.39 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ತೆಗೆದಿರಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯ ಮಾಡಿದರು.

ಸಮಿತಿಯ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಮತ್ತಿತರರು ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

 ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಕ್ರಮೇಣ ಇಳಿಕೆ: ಸಚಿವ ಡಾ.ಕೆ.ಸುಧಾಕರ್

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಕ್ರಮೇಣ ಇಳಿಕೆ: ಸಚಿವ ಡಾ.ಕೆ.ಸುಧಾಕರ್


 ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಕ್ರಮೇಣ ಇಳಿಕೆ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಕ್ರಮೇಣ ಇಳಿಕೆಯಾಗುತ್ತಿದೆ. ಆದರೂ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಎಚ್ಚರದಿಂದ ಪಾಲಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಇಳಿಕೆಯಾಗಿದೆ. ಬೇರೆ ಜಿಲ್ಲೆಗಳಲ್ಲಿ ಕೂಡ ಕ್ರಮೇಣ ಇಳಿಕೆಯಾಗುತ್ತಿದೆ ಎಂದರು.

ಕೆಲ ಜಿಲ್ಲೆಗಳಲ್ಲಿ ಮಾತ್ರ ಕೋವಿಡ್ ಪಾಸಿಟಿವಿಟಿ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ.2-3 ರಷ್ಟಿದೆ. ಜೊತೆಗೆ ಶೇ.0.05ನಷ್ಟು ಮರಣ ಪ್ರಮಾಣವಿದೆ. ಇದು ಸದ್ಯದ ಸಮಾಧಾನಕರ ಸಂಗತಿಯಾಗಿದೆ. ಆದರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕಿದೆ. ಕೋವಿಡ್ ಪ್ರಕರಣಗಳ ಬಗ್ಗೆ ಬೇರೆ ದೇಶ, ರಾಜ್ಯಗಳ ಸ್ಥಿತಿಗತಿಯನ್ನು ಗಮನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೋವಿಡ್ ಲಸಿಕಾಕರಣದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಜನರ ಸಹಕಾರ, ಆರೋಗ್ಯ ಸಿಬ್ಬಂದಿಯ ಪರಿಶ್ರಮ ಹಾಗೂ ಉತ್ತಮ ಆಡಳಿತದಿಂದಾಗಿ ಮೊದಲ ಡೋಸ್‍ನಲ್ಲಿ ಶೇ.100 ಸಾಧನೆಯಾಗಿದೆ. ಎರಡನೇ ಡೋಸ್‍ನಲ್ಲಿ ಶೇ.87ರಷ್ಟು ಸಾಧನೆಯಾಗಿದೆ. ಆದರೂ ನಿರಂತರವಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಸುಧಾಕರ್ ಹೇಳಿದರು.

ಮೂರನೇ ಅಲೆಯಲ್ಲಿ ಮತ್ತೆ ಪ್ರಕರಣಗಳ ಪ್ರಮಾಣ ಹೆಚ್ಚಲಿದೆ ಎಂದು ಹೇಳಲಾಗುವುದಿಲ್ಲ. ಪ್ರತಿ ದಿನ ರಾಜ್ಯದಲ್ಲಿ 2.5 ಲಕ್ಷ ಕೊರೋನ ಪರೀಕ್ಷೆ ಮಾಡಿ ಸಂಪರ್ಕಿತರ ಪತ್ತೆ ಮಾಡಲಾಗುತ್ತಿದೆ. ಶೇ.32ರಷ್ಟು ಪಾಸಿಟಿವಿಟಿ ದರವಿದ್ದರೂ ಅದು ಇಳಿಕೆಯಾಗುತ್ತಿದೆ ಎಂದು ಅವರು ತಿಳಿಸಿದರು.

ಹೊಸ ವೈರಾಣು ಒಮೈಕ್ರಾನ್ ತೀವ್ರವಾಗಿ ಬಾಧಿಸುತ್ತಿಲ್ಲ. ಆದರೆ ಇದು ವೇಗವಾಗಿ ಹರಡುವ ಲಕ್ಷಣ ಹೊಂದಿದೆ. ಈ ವೈರಾಣುವಿನಲ್ಲೇ ಏನಾದರೂ ಬದಲಾವಣೆಯಾಗಲಿದೆಯೇ ಎಂದು ಗಮನಿಸಬೇಕಿದೆ. ಚಿತ್ರಮಂದಿರಗಳು ಮುಚ್ಚಿದ ಸ್ಥಳವಾಗಿದ್ದು, ಬೇರೆ ಉದ್ಯಮಕ್ಕಿಂತ ಭಿನ್ನವಾಗಿದೆ. ಚಿತ್ರಮಂದಿರಗಳಿಗೆ ವಿಧಿಸಿದ ನಿರ್ಬಂಧಗಳ ಸಡಿಲಿಕೆ ಕುರಿತು ಮುಖ್ಯಮಂತ್ರಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬಹುದು ಎಂದು ಸುಧಾಕರ್ ಹೇಳಿದರು.

 ಹಿಜಾಬ್ ಹಾಕದೆ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಕಂಪೌಂಡ್ ಒಳಗೆ ಬರಬೇಡಿ : ಶಾಸಕ ರಘುಪತಿ ಭಟ್

ಹಿಜಾಬ್ ಹಾಕದೆ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಕಂಪೌಂಡ್ ಒಳಗೆ ಬರಬೇಡಿ : ಶಾಸಕ ರಘುಪತಿ ಭಟ್


 ಹಿಜಾಬ್ ಹಾಕದೆ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಕಂಪೌಂಡ್ ಒಳಗೆ ಬರಬೇಡಿ : ಶಾಸಕ ರಘುಪತಿ ಭಟ್

ಉಡುಪಿ: ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ/ವಸ್ತ್ರ ಸಂಹಿತೆಯ ಬಗ್ಗೆ ಸರಕಾರ ಉನ್ನತ ಮಟ್ಟದ ಸಮಿತಿ ರಚಿಸಿ ಅಧ್ಯಯನ ನಡೆಸಿ ಈ ಬಗ್ಗೆ ವರದಿ ನೀಡುವವರೆಗೆ ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಧರಿಸಿ ತರಗತಿಗೆ ಹಾಜರಾಗಬೇಕು. ಒಂದು ವೇಳೆ ಹಿಜಾಬ್ ಹಾಕದೆ ಬರಲು ಸಿದ್ಧರಿಲ್ಲದಿದ್ದರೆ ಅಂತಹ ವಿದ್ಯಾರ್ಥಿನಿಯರು ಕಾಲೇಜಿನ ಕಂಪೌಂಡ್ ಒಳಗೆ ಬರುವುದು ಬೇಡ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕರು ಮತ್ತು ಪೋಷಕ ರನ್ನು ಒಳಗೊಂಡ ಶಿಕ್ಷಣ ಸೇವಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಕುರಿತು ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಆರು ಮಂದಿ ಪೈಕಿ ನಾಲ್ವರು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರಿಗೆ ಮನವಿ ಮಾಡಿದ್ದೇವೆ. ಈ ಹಂತದಲ್ಲಿ ತರಗತಿಗೆ ಹಿಜಾಬ್ ಹಾಕಿಕೊಂಡು ಬರಲು ಅನುಮತಿ ನೀಡಲು ಸಾಧ್ಯವಿಲ್ಲ. ಸರಕಾರ ರಚಿಸಲಿರುವ ಉನ್ನತ ಮಟ್ಟದ ಸಮಿತಿ ನಿರ್ಧಾರ ಪ್ರಕಟಿಸುವವರೆಗೆ ಕಾಯ ಬೇಕಾಗುತ್ತದೆ. ಅಲ್ಲಿಯವರೆಗೆ ಹಿಂದಿನಂತೆ ಕಾಲೇಜಿನ ಕಂಪೌಂಡ್ ಒಳಗೆ ಹಿಜಾಬ್ ಹಾಕಿಕೊಂಡು ಬಂದು ತರಗತಿಯಲ್ಲಿ ಹಿಜಾಬ್ ತೆಗೆಯಬೇಕೆಂದು ತಿಳಿಸಿದ್ದೇವೆ ಎಂದರು.

ನಾಳೆ ಪೋಷಕರ ನಿರ್ಧಾರ

‘ಕಾಲೇಜಿಗೆ ಬರುವುದಾದರೆ ಇಂದಿನಿಂದಲೇ ಬರಬಹುದು. ನಾಳೆಯಿಂದ ಬರುವುದಾದರೆ ತರಗತಿಯಲ್ಲಿ ಹಿಜಾಬ್ ಹಾಕದೆ ಬರುತ್ತೇವೆ ಎಂದು ನಿರ್ಧರಿಸಿದರೆ ಮಾತ್ರ ಕಾಲೇಜಿಗೆ ಬರಬೇಕು. ಇಲ್ಲದಿದ್ದರೆ ಕಾಲೇಜು ಆವರಣಕ್ಕೆ ಬಂದು ಪ್ರತಿಭಟನೆ ಮಾಡಲು ಅವಕಾಶ ನೀಡುವುದಿಲ್ಲ’ ಎಂದು ರಘುಪತಿ ಭಟ್ ಹೇಳಿದರು.

ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದು ಇಲ್ಲಿನ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಬಾರದು. ಹಿಜಾಬ್ ಧರಿಸದೆ ಬರುವುದಾದರೆ ಬರಲಿ, ಇಲ್ಲದಿದ್ದರೆ ಬರುವುದು ಬೇಡ. ಇದಕ್ಕೆ ಶೇ.50ರಷ್ಟು ಪೋಷಕರು ಒಪ್ಪಿದಂತೆ ಕಾಣುತ್ತದೆ. ಆದರೆ ಪೋಷಕರು, ನಾವು ಮಹಿಳೆಯರು ಮಾತ್ರ ಬಂದಿರುವುದರಿಂದ ನಮ್ಮ ಮನೆಯವರ ಬಳಿ ಅಭಿಪ್ರಾಯ ಕೇಳಿ ನಾಳೆ ಸಂಜೆ ಯೊಳಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

ಆದುದರಿಂದ ಇಲ್ಲಿ ಇನ್ನು ಮುಂದೆ ಗೊಂದಲ ಹಾಗೂ ವಿವಾದಗಳಿಗೆ ಅವಕಾಶ ಇಲ್ಲ. ಶಿಸ್ತನ್ನು ಪಾಲಿಸುವವರು ಮಾತ್ರ ಕಾಲೇಜಿಗೆ ಬರಬಹುದು. ಸಭೆಯಲ್ಲಿದ್ದ ಮುಖಂಡರು ಕೂಡ ಪೋಷಕರಿಗೆ ಮನವರಿಕೆ ಮಾಡಿದ್ದಾರೆ. ಸೌಹಾರ್ದಯುತವಾಗಿ ಪೋಷಕರು ಇದನ್ನು ಬಗೆಹರಿಸಬೇಕು ಎಂದು ರಘುಪತಿ ಭಟ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ, ಕರ್ನಾಟಕ ಬ್ಯಾರಿ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಸಲೀಂ ಅಂಬಾಗಿಲು, ದಾವೂದ್ ಅಬೂಬಕ್ಕರ್ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

ಆವರಣದೊಳಗೆ ಪ್ರವೇಶ ನಿರ್ಬಂಧ

ನಾಳೆಯಿಂದ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಕಾಲೇಜು ಆವರಣ ಪ್ರವೇಶಿಸುವಂತಿಲ್ಲ. ಯಾವುದೇ ಸಂಘ ಸಂಸ್ಥೆಗಳು, ಮಾಧ್ಯಮದವರಿಗೂ ಪ್ರವೇಶ ನೀಡಬಾರದು. ಅದನ್ನು ಮೀರಿ ಪ್ರವೇಶಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಭೆಯಲ್ಲಿ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ರಘುಪತಿ ಭಟ್ ಹೇಳಿದರು.

ಇನ್ನು ಎರಡು ತಿಂಗಳಲ್ಲಿ ಪರೀಕ್ಷೆ ಬರುತ್ತದೆ. ಈ ವಿವಾದದಿಂದಾಗಿ ಬೇರೆ ಮಕ್ಕಳಿಗೆ ಓದಲು ಆಗುತ್ತಿಲ್ಲ. ಆದುದರಿಂದ ಇದನ್ನು ಇಲ್ಲಿಗೆ ಮುಗಿಸಿ ಎಂದು ಪೋಷಕರು ತುಂಬಾ ದೂರು ನೀಡುತ್ತಿದ್ದಾರೆ. ಆದುದರಿಂದ ಕಾಲೇಜಿನ ಆವರಣದೊಳಗೆ ಯಾರು ಕೂಡ ಮನವಿ ಕೊಡಲು ಬರಬಾರದು. ಮನವಿ ನೀಡುವುದಿದ್ದರೆ ಜಿಲ್ಲಾಧಿಕಾರಿಗಳಿಗೆ ನೀಡಲಿ ಎಂದರು.

‘ಹಿಜಾಬ್ ಹಾಕಿ ತರಗತಿ ಬರಲು ಅವಕಾಶ ನೀಡುವಂತೆ ಕೇಳುವ ಹಕ್ಕನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಈ ವಿದ್ಯಾರ್ಥಿನಿಯರಿಗೆ ನೀಡಿದೆ. ಹಾಗೆ ಇವರು ತಮ್ಮ ಹಕ್ಕನ್ನು ಕೇಳಿರುವುದು ಅಭಿನಂದನೀಯ. ಅದೇ ರೀತಿ ಇದೀಗ ಸರಕಾರ ಹೊರಡಿಸಿರುವ ಆದೇಶವನ್ನು ಪಾಲಿಸುವುದು ಕೂಡ ಪ್ರತಿಯೊಬ್ಬರ ಕರ್ತವ್ಯ ವಾಗಿದೆ. ಇಲ್ಲಿ ಮುಸ್ಲಿಮರಾಗಿ ನಿಮ್ಮ ಕರ್ತವ್ಯವನ್ನು ಪಾಲಿಸಿದ್ದೀರಿ, ಹಾಗೆ ಭಾರತೀಯರಾಗಿ ಸರಕಾರದ ಆದೇಶವನ್ನು ಪಾಲಿಸುವ ಮೂಲಕ ಸಂವಿಧಾನಕ್ಕೆ ಗೌರವ ನೀಡಬೇಕೆಂದು ಅವರಿಗೆ ಮನವರಿಕೆ ಮಾಡಿದ್ದೇವೆ’

-ರಹೀಂ ಉಚ್ಚಿಲ, ಅಧ್ಯಕ್ಷರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡವಿು

Sunday, 30 January 2022

 ಪೆಗಾಸಸ್ ವಿವಾದ: ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದ ಕುರಿತು ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪೆಗಾಸಸ್ ವಿವಾದ: ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದ ಕುರಿತು ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ


 ಪೆಗಾಸಸ್ ವಿವಾದ: ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದ ಕುರಿತು ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಹೊಸದಿಲ್ಲಿ: ಇಸ್ರೇಲಿ ಸ್ಪೈವೇರ್ ಪೆಗಾಸಸ್‌ಗೆ ಸಂಬಂಧಿಸಿದಂತೆ ವಕೀಲ ಎಂ.ಎಲ್.ಶರ್ಮಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿ,ಸ್ಪೈವೇರ್ ಕುರಿತು ನ್ಯೂಯಾರ್ಕ್ ಟೈಮ್ಸ್‌ನ ವರದಿಯನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ಮತ್ತು 2017ರ ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದದ ಕುರಿತು ತನಿಖೆಗೆ ಆದೇಶಿಸುವಂತೆ ಕೋರಿದ್ದಾರೆ. ಭಾರತವು 2017ರಲ್ಲಿ ಇಸ್ರೇಲ್ ಜೊತೆಗಿನ ಎರಡು ಶತಕೋಟಿ ಡಾ.ಗಳ ಒಪ್ಪಂದದ ಭಾಗವಾಗಿ ಎನ್‌ಎಸ್‌ಒದ ಪೆಗಾಸಸ್ ಸ್ಪೈವೇರ್‌ನ್ನು ಖರೀದಿಸಿತ್ತು ಎನ್ನುವುದನ್ನು ಬಹಿರಂಗಗೊಳಿಸಿರುವ ದಿ ನ್ಯೂಯಾರ್ಕ್ ಟೈಮ್ಸ್‌ನ ತನಿಖಾ ವರದಿಯು ಈ ಬೇಹುಗಾರಿಕೆ ತಂತ್ರಾಂಶದ ಕುರಿತು ವಿವಾದವು ಮತ್ತೊಮ್ಮೆ ಹೊತ್ತಿಕೊಳ್ಳುವಂತೆ ಮಾಡಿದೆ. ಭಾರತದಲ್ಲಿ ಸ್ಪೈವೇರ್‌ನ ಕಾನೂನುಬಾಹಿರ ಬಳಕೆಯ ಬಗ್ಗೆ ಕಾಂಗ್ರೆಸ್ ಪಕ್ಷವು ಕೇಂದ್ರದ ವಿರುದ್ಧ ಮತ್ತೆ ದಾಳಿಯನ್ನು ಆರಂಭಿಸಿದ್ದು,ಸರಕಾರವು ಕಾನೂನುಬಾಹಿರ ಕಣ್ಗಾವಲು ಇರಿಸುತ್ತಿದೆ ಮತ್ತು ಇದು ದೇಶದ್ರೋಹವಾಗಿದೆ ಎಂದು ಆರೋಪಿಸಿದೆ.

ನ್ಯಾಯಾಲಯದ ಮುಂದಿರುವ ಪ್ರಕರಣದ ಮೂಲ ಅರ್ಜಿದಾರರಲ್ಲಿ ಓರ್ವರಾಗಿರುವ ಶರ್ಮಾ,ಒಪ್ಪಂದವು ಸಂಸತ್ತಿನ ಅನುಮತಿಯನ್ನು ಪಡೆದುಕೊಂಡಿರಲಿಲ್ಲ,ಆದ್ದರಿಂದ ಅದನ್ನು ರದ್ದುಗೊಳಿಸಿ,ಹಣವನ್ನು ಮರುವಸೂಲಿ ಮಾಡುವುದು ಅಗತ್ಯವಿದೆ ಎಂದು ವಾದಿಸಿದ್ದಾರೆ.

ನ್ಯಾಯದ ಹಿತಾಸಕ್ತಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ಮತ್ತು ಒಪ್ಪಂದದ ಕುರಿತು ಹಾಗೂ ಸ್ಪೈವೇರ್ ಖರೀದಿಗೆ ಸಾರ್ವಜನಿಕ ಹಣದ ಬಳಕೆಯ ಬಗ್ಗೆ ತನಿಖೆ ನಡೆಸಲು ಸೂಕ್ತ ನಿರ್ದೇಶಗಳನ್ನು ಹೊರಡಿಸುವಂತೆ ಶರ್ಮಾ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ. ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಬೇಹುಗಾರಿಕೆ ಸಾಧನಗಳ ಖರೀದಿಗಾಗಿ ಭಾರತವು ಇಸ್ರೇಲ್ ಜೊತೆ 2017ರಲ್ಲಿ ಮಾಡಿಕೊಂಡಿದ್ದ ಅಂದಾಜು ಎರಡು ಶತಕೋಟಿ ಬಿಲಿಯನ್ ಡಾಲರ್‌ಗಳ ಖರೀದಿ ಒಪ್ಪಂದದ ಕೇಂದ್ರಬಿಂದುವಾಗಿದ್ದವು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿತ್ತು.

 ಗೋಡ್ಸೆಯ ‘ಉತ್ತರಾಧಿಕಾರಿಗಳಿಗೆ’ಭಾರತದಲ್ಲಿ ಜಾಗವಿಲ್ಲ: ತಮಿಳುನಾಡು ಸಿಎಂ ಸ್ಟಾಲಿನ್

ಗೋಡ್ಸೆಯ ‘ಉತ್ತರಾಧಿಕಾರಿಗಳಿಗೆ’ಭಾರತದಲ್ಲಿ ಜಾಗವಿಲ್ಲ: ತಮಿಳುನಾಡು ಸಿಎಂ ಸ್ಟಾಲಿನ್


 ಗೋಡ್ಸೆಯ ‘ಉತ್ತರಾಧಿಕಾರಿಗಳಿಗೆ’ಭಾರತದಲ್ಲಿ ಜಾಗವಿಲ್ಲ: ತಮಿಳುನಾಡು ಸಿಎಂ ಸ್ಟಾಲಿನ್

ಚೆನ್ನೈ: ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ರವಿವಾರ ರಾಜ್ಯಪಾಲ ಆರ್.ಎನ್.ರವಿ ಅವರೊಂದಿಗೆ ಇಲ್ಲಿಯ ಮರೀನಾ ಬೀಚ್‌ನಲ್ಲಿ ರಾಷ್ಟ್ರಪಿತನ ಪ್ರತಿಮೆಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು,ನಾಥುರಾಮ ಗೋಡ್ಸೆಯ ‘ಉತ್ತರಾಧಿಕಾರಿಗಳಿಗೆ’ ಭಾರತದ ನೆಲದಲ್ಲಿ ಜಾಗವಿಲ್ಲದಂತೆ ಮಾಡಲು ಪಣವನ್ನು ತೊಡುವಂತೆ ಜನರನ್ನು ಆಗ್ರಹಿಸಿದ್ದಾರೆ.

ಪ್ರೀತಿ ಮತ್ತು ಭ್ರಾತೃತ್ವವನ್ನು ಉತ್ತೇಜಿಸುವ ಮೂಲಕ ಏಕತೆಯನ್ನು ಎತ್ತಿ ಹಿಡಿಯಲು ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಂದು ಪಣವನ್ನು ತೊಡುವಂತೆ ಜನರನ್ನು ಟ್ವೀಟ್‌ನಲ್ಲಿ ಆಗ್ರಹಿಸಿರುವ ಸ್ಟಾಲಿನ್, ‘ಗೋಡ್ಸೆಯ ಉತ್ತರಾಧಿಕಾರಿಗಳು ಮತ್ತು ಅವರ ದುಷ್ಟ ಚಿಂತನೆಗಳಿಗೆ ಭಾರತದ ನೆಲದಲ್ಲಿ ಜಾಗವಿಲ್ಲ ಎಂದು ನಾವು ಶಪಥ ಮಾಡೋಣ ’ ಎಂದಿದ್ದಾರೆ. ಅವರು ತನ್ನ ಟ್ವಿಟರ್ ಪೋಸ್ಟ್‌ನಲ್ಲಿ ಯಾರನ್ನೂ ಸ್ಪಷ್ಟವಾಗಿ ಹೆಸರಿಸಿಲ್ಲ.

ರಾಜಭವನದಲ್ಲಿಯೂ ಗಾಂಧೀಜಿಯವರಿಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದ ರಾಜ್ಯಪಾಲ ರವಿ,ಅಸ್ಪಶ್ಯತೆಯ ವಿರುದ್ಧ ಶಪಥವನ್ನು ಬೋಧಿಸಿದರಲ್ಲದೆ ಹರಿಜನ ಸೇವಕ ಸಂಘದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ರಾಜಭವನದ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಜೊತೆ ಎರಡು ನಿಮಿಷಗಳ ಮೌನ ಆಚರಿಸಿದರು.

 `ನಾವು ಕಾಂಗ್ರೆಸ್ಸಿನ ಮತಬ್ಯಾಂಕ್ ಅಲ್ಲ, ಚುನಾವಣೆಯಲ್ಲಿ ತಕ್ಕಪಾಠ': ಮುಸ್ಲಿಮ್ ಧರ್ಮ ಗುರುಗಳ ಜಂಟಿ ಹೇಳಿಕೆ

`ನಾವು ಕಾಂಗ್ರೆಸ್ಸಿನ ಮತಬ್ಯಾಂಕ್ ಅಲ್ಲ, ಚುನಾವಣೆಯಲ್ಲಿ ತಕ್ಕಪಾಠ': ಮುಸ್ಲಿಮ್ ಧರ್ಮ ಗುರುಗಳ ಜಂಟಿ ಹೇಳಿಕೆ


 'ನಾವು ಕಾಂಗ್ರೆಸ್ಸಿನ ಮತಬ್ಯಾಂಕ್ ಅಲ್ಲ, ಚುನಾವಣೆಯಲ್ಲಿ ತಕ್ಕಪಾಠ': ಮುಸ್ಲಿಮ್ ಧರ್ಮ ಗುರುಗಳ ಜಂಟಿ ಹೇಳಿಕೆ

ಬೆಂಗಳೂರು: `ರಾಜಕೀಯ ಕ್ಷೇತ್ರದಲ್ಲಿ ಪದೇ ಪದೇ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯವಾದರೆ, ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ ಕಲಿಸುತ್ತೇವೆ' ಎಂದು ಮುಸ್ಲಿಮ್ ಧರ್ಮಗಳು ಎಚ್ಚರಿಕೆ ನೀಡಿದರು.

ರವಿವಾರ ಇಲ್ಲಿನ ನಂದಿದುರ್ಗಾ ರಸ್ತೆಯ ಖಾದ್ರಿ ಮಸೀದಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಮೀಯತುಲ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನ ಮುಸ್ಲಿಮ್ ಸಮುದಾಯಕ್ಕೆ ಮೀಸಲಿಡಬೇಕಿತ್ತು. ಆದರೆ, ಕಾಂಗ್ರೆಸ್ಸಿನ ಹಿರಿಯ ನಾಯಕರು ತಪ್ಪು ಹೆಜ್ಜೆ ಇಟ್ಟಿದ್ದು, ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲುವು, ಸಿದ್ಧಾಂತಗಳಿಗೆ ಮುಸ್ಲಿಮ್ ಸಮುದಾಯ ಬೆಂಬಲಿಸಿ, ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಜೊತೆಗೆ ನಿಂತಿದೆ. ಆದರೆ, ಈ ಪಕ್ಷದ ಹಿರಿಯ ನಾಯಕರು, ಎಐಸಿಸಿ ನಾಯಕರು ಮುಸ್ಲಿಮ್ ಸಮುದಾಯದ ನಾಯಕರನ್ನು ಪರಿಗಣಿಸುತ್ತಿಲ್ಲ.ಹಲವು ವರ್ಷಗಳಿಂದ ಈ ಪಕ್ಷಕ್ಕಾಗಿ ದುಡಿದರೂ, ಅವರನ್ನು ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವೂ ಹೀಗೆ ಮುಸ್ಲಿಮರನ್ನು ನಿರ್ಲಕ್ಷ್ಯವಹಿಸಿ ಹೆಜ್ಜೆ ಹಾಕಿದರೆ, ಪಶ್ಚಿಮಬಂಗಾಲ, ಬಿಹಾರ ರಾಜ್ಯಗಳಂತೆ ಕರ್ನಾಟಕದಲ್ಲೂ ಮುಸ್ಲಿಮರು ಬೇರೆ ಪಕ್ಷದೊಂದಿಗೆ ಜೊತೆಗೂಡುವ ಸನ್ನಿವೇಶ ಬರಲಿದೆ ಎಂದು ಇಫ್ತಿಖಾರ್ ಅಹ್ಮದ್ ಖಾಸ್ಮಿ ನುಡಿದರು.

ನಾಸಿಹ್ ಫೌಂಡೇಶನ್ ಅಧ್ಯಕ್ಷ ಮೌಲಾನ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ ಮಾತನಾಡಿ, ಕಾಂಗ್ರೆಸ್ ಪಕ್ಷವೂ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನ ನೀಡಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಪಕ್ಷಕ್ಕೆ ಪಾಠ ಕಲಿಸಬೇಕಾಗುತ್ತದೆ. ಈ ಸಂಬಂಧ ಚರ್ಚಿಸಲು ರಾಜ್ಯಮಟ್ಟದ ಸಭೆವೊಂದನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಜಮಾತೆ ಅಹ್ಲೆ ಸುನ್ನತ್ ಕರ್ನಾಟಕ ಅಧ್ಯಕ್ಷ ಮೌಲಾನ ಸೈಯದ್ ತನ್ವೀರ್ ಪೀರಾ ಹಾಶ್ಮಿ ಮಾತನಾಡಿ, ಮುಸಿಮ್ ಸಮುದಾಯದ ವಿಚಾರದಲ್ಲಿ ಕಾಂಗ್ರೆಸ್ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಸುಮಾರು ಒಂದು ಕೋಟಿಗೂ ಹೆಚ್ಚು ಜನರಿದ್ದಾರೆ. ಆದರೂ ನಮ್ಮ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮಾಜಿ ರಾಜ್ಯಾಧ್ಯಕ್ಷ ಮೌಲಾನ ಏಜಾಝ್ ಅಹ್ಮದ್ ನದ್ವಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

 ನೀಟ್: ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ

ನೀಟ್: ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ


 ನೀಟ್: ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ

ಬೆಂಗಳೂರು: `2021ರಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳ ಪ್ರವೇಶಾತಿಗೆಂದು ನಡೆಸಿದ್ದ `ನೀಟ್' ಪರೀಕ್ಷೆಯನುಸಾರ ಮೊದಲನೇ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟವಾಗಿದ್ದು, ಶನಿವಾರ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ವಿವರ ಪ್ರಕಟಿಸಲಾಗಿದ್ದು, ದೃಢೀಕರಣ ಚೀಟಿಯನ್ನು ಡೌನ್-ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆಯೂ ಆರಂಭವಾಗಿದೆ' ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಈ ಬಗ್ಗೆ ಪ್ರಾಧಿಕಾರವು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, `ಫೆ.4ರಂದು ಈ ಮೂರೂ ಕೋರ್ಸುಗಳಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಪ್ರಕಟಿಸಲಾಗುವುದು. ಇದಕ್ಕೂ ಮೊದಲು ಫೆ.1ರ ಬೆಳಗ್ಗೆ 10 ಗಂಟೆಯ ವರೆಗೆ ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಫೆ.1ರಿಂದ 3ರ ಬೆಳಗ್ಗೆ 10 ಗಂಟೆಯ ವರೆಗೆ ತಮ್ಮ ಐಚ್ಛಿಕ ವಿಷಯಗಳಲ್ಲಿ ಅಗತ್ಯವೆನಿಸಿದರೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ' ಎಂದು ಹೇಳಿದೆ.

ಬಳಿಕ ಚಾಯ್ಸ್-1 ಮತ್ತು ಚಾಯ್ಸ್-2 ಸ್ತರದ ವಿದ್ಯಾರ್ಥಿಗಳು ನಿಗದಿತ ಶುಲ್ಕ ತುಂಬಿ, ಪ್ರವೇಶ ದಾಖಲಾತಿಯನ್ನು ಡೌನ್-ಲೋಡ್ ಮಾಡಿಕೊಳ್ಳಲು ಫೆ.4ರ ಮಧ್ಯಾಹ್ನ 2 ಗಂಟೆಯಿಂದ ಫೆ.7ರ ಮಧ್ಯಾಹ್ನ 1 ಗಂಟೆಯ ವರೆಗೆ ಅವಕಾಶವಿರುತ್ತದೆ. ನಂತರ, ವಿದ್ಯಾರ್ಥಿಗಳು ಒಂದು ಸೆಟ್ ದೃಢೀಕೃತ ಪ್ರಮಾಣಪತ್ರಗಳೊಂದಿಗೆ ಮೂಲ ದಾಖಲೆಗಳನ್ನು ಫೆ.5ರಿಂದ 7ರ ಒಳಗೆ ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪರಿಶೀಲನೆಗೆ ಸಲ್ಲಿಸಬೇಕು ಎಂದು ಪ್ರಕಟಣೆ ವಿವರಿಸಿದೆ.

 ಯಾದಗಿರಿ: ಬಾಲಕಿಯ ಅತ್ಯಾಚಾರಕ್ಕೆ ಯತ್ನ ಪ್ರಕರಣ; ಆರೋಪಿ ವೃದ್ಧನ ಬಂಧನ

ಯಾದಗಿರಿ: ಬಾಲಕಿಯ ಅತ್ಯಾಚಾರಕ್ಕೆ ಯತ್ನ ಪ್ರಕರಣ; ಆರೋಪಿ ವೃದ್ಧನ ಬಂಧನ ಯಾದಗಿರಿ: ಬಾಲಕಿಯ ಅತ್ಯಾಚಾರಕ್ಕೆ ಯತ್ನ ಪ್ರಕರಣ; ಆರೋಪಿ ವೃದ್ಧನ ಬಂಧನ

ಯಾದಗಿರಿ:  7 ವರ್ಷದ ಬಾಲಕಿ ಮೇಲೆ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 27 ರಂದು ಜಿಲ್ಲೆಯ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಘಟನೆ ನಡೆದಿದ್ದು,  ಜ.29 ರಂದು  ಸಂತ್ರಸ್ತೆ ತಾಯಿ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದಾರೆ.

'ತಾಯಿ ತನ್ನ ಇಬ್ಬರು ಮಕ್ಕಳನ್ನು ಮನೆಯಲ್ಲಿ ಬಿಟ್ಟು  ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆ ತಾಯಿ ತೆರಳಿದ್ದಾಗ 68 ವರ್ಷದ ವೃದ್ಧ ಬಾಲಕಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ಮಾಡಿದ್ದಾನೆ' ಎಂದು ಆರೋಪಿಸಲಾಗಿದೆ.

'‌ಬಾಲಕಿಯ ತಮ್ಮನಿಗೆ ಕತ್ತು ಹಿಸಕಿ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ನಂತರ ಬಾಲಕಿಯ ಮೇಲೆ ದೌರ್ಜನ್ಯ ಎಸೆಗಲು ಮುಂದಾದಾಗ ಅಕ್ಕಪಕ್ಕದವರು ಚೀರಾಟ ಕೇಳಿ ವೃದ್ಧನಿಗೆ ಬೈದು ಬುದ್ದಿವಾದ ಹೇಳಿದ್ದಾರೆ' ಎಂದು ದೂರಿನಲ್ಲಿ ತಿಳಿಸಲಾಗಿದೆ. 

 ಸಿಇಟಿ, ನೀಟ್, ಜೆಇಇ ಅರ್ಜಿ ತುಂಬುವ ವಿಧಾನ: ವಿಶೇಷ ತರಬೇತಿಗೆ ವ್ಯವಸ್ಥೆ; ಸಚಿವ ಅಶ್ವತ್ಥನಾರಾಯಣ

ಸಿಇಟಿ, ನೀಟ್, ಜೆಇಇ ಅರ್ಜಿ ತುಂಬುವ ವಿಧಾನ: ವಿಶೇಷ ತರಬೇತಿಗೆ ವ್ಯವಸ್ಥೆ; ಸಚಿವ ಅಶ್ವತ್ಥನಾರಾಯಣ


 ಸಿಇಟಿ, ನೀಟ್, ಜೆಇಇ ಅರ್ಜಿ ತುಂಬುವ ವಿಧಾನ: ವಿಶೇಷ ತರಬೇತಿಗೆ ವ್ಯವಸ್ಥೆ; ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಸಿಇಟಿ, ನೀಟ್, ಜೆಇಇ ಮುಂತಾದ ಉನ್ನತ ಹಂತದ ಪರೀಕ್ಷೆಗಳಿಗೆ ಅರ್ಜಿ ತುಂಬುವಾಗ ಅಭ್ಯರ್ಥಿಗಳು ತಪ್ಪು ಮಾಡುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ಆಯಾ ಕಾಲೇಜುಗಳಲ್ಲಿಯೇ ವಿಶೇಷ ತರಬೇತಿ ನೀಡಲು ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಭ್ಯರ್ಥಿಗಳು ಹೆಚ್ಚಾಗಿ ಈ ಅರ್ಜಿಗಳಲ್ಲಿ ವಾರ್ಷಿಕ ಆದಾಯ, ಕೆಟಗರಿ, ಹೆಸರು, ಹುಟ್ಟಿದ ದಿನಾಂಕ, ಕೋರ್ಸ್ ಆಯ್ಕೆ ಮುಂತಾದ ಮಾಹಿತಿಗಳನ್ನು ಭರ್ತಿ ಮಾಡುವಾಗ ತಪ್ಪು ಮಾಡುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಹೆಚ್ಚಿನ ಅರ್ಜಿಗಳು ತಿರಸ್ಕೃತವಾಗುತ್ತಿದ್ದು, ಉನ್ನತ ಶಿಕ್ಷಣದ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಗಮನಿಸಿ `ಗೆಟ್ ಸೆಟ್ ಗೋ’ ಮೂಲಕ ಈ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ.

`ಗೆಟ್ ಸೆಟ್ ಗೋ’ ಮೂಲಕ ಈ ಪರೀಕ್ಷೆಗಳಿಗೆ ಹೆಚ್ಚಾಗಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಸ್ನಾತಕೋತ್ತವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ಇವರಿಗೆ ಈ ತರಬೇತಿಯಿಂದ ಪ್ರಯೋಜನವಾಗಲಿದೆ. ತರಬೇತಿಯ ಜತೆಗೆ ಸಾಮಾಜಿಕ ಮಾಧ್ಯಮಗಳು, ವೆಬ್-ಸೈಟುಗಳು ಮತ್ತು ದಿನಪತ್ರಿಕೆಗಳಲ್ಲಿ ಈ ಅರ್ಜಿ ತುಂಬುವ ಸರಿಯಾದ ವಿಧಾನದ ಬಗ್ಗೆ ವ್ಯಾಪಕವಾಗಿ ಜಾಹೀರಾತನ್ನು ಕೂಡ ನೀಡುವ ಮೂಲಕ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 ಬಾಗಲಕೋಟೆ: ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಮತಗಿ: 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ

ಬಾಗಲಕೋಟೆ: ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಮತಗಿ: 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ


 ಬಾಗಲಕೋಟೆ: ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಮತಗಿ: 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ 

ಬಾಗಲಕೋಟೆ: ಜನವರಿ 26ರಂದು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಮತಗಿಯಲ್ಲಿ 73 ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಜನಾಬ್ ನದೀಂ ಸಾಹೇಬ್ ಕೋರಿಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಗುರುಗಳಾದ ಜನಾಬ್ ಮುಹಮ್ಮದ್ ಶಫೀ ಪೀರಝಾದೆ, ಮುಖ್ಯ ಅತಿಥಿಗಳಾದ ಜನಾನಬ ದಸ್ತಗೀರ್ ಸಾಹೇಬ್ ತಹಸಿಲ್ದಾರ್, ಮುರ್ತುಜಾ ಹುಲಿಗೇರಿ, ಉಪಾಧ್ಯಕ್ಷರಾದ ಬಂದೇನವಾಜ್ ಪಂಜಾಬಿ,

ಚಾಂದ ಸಾಹೇಬ್ ಚೌಧರಿ, ಸೈಯದ್ ಭಾಷಾ ಪೀರಜಾದೆ, ರೇಷ್ಮಾ ತಸಿಲ್ದಾರ್, ರಂಜಾನ್ ಬಿ ಚೌದ್ರಿ ಬಿಸ್ಮಿಲ್ಲಾ ಪೀರಜಾದೆ, ಶಾಲೆಯ ಶಿಕ್ಷಕರಾದ ಶ್ರೀ ಹೆಚ್.ಎಂ ಹೊಸೂರು, ಶ್ರೀಮತಿ ಎ.ಎಸ್ ಕೆರೂರ, ಊರಿನ ಮುಖಂಡರು, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಮತ್ತು  ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಕೂನೆಗೆ ಸಿಹಿ ಹಂಚಲಾಯಿತು.
 ಮಣಿಪುರ ಚುನಾವಣೆ: ಎಲ್ಲಾ 60 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ

ಮಣಿಪುರ ಚುನಾವಣೆ: ಎಲ್ಲಾ 60 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ

 

ಮಣಿಪುರ ಚುನಾವಣೆ: ಎಲ್ಲಾ 60 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ

ಹೊಸದಿಲ್ಲಿ: ಮುಂಬರುವ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಲ್ಲಾ 60 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್  ರವಿವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ, ಪಕ್ಷವು 2/3 ಕ್ಕಿಂತ ಹೆಚ್ಚು ಬಹುಮತದೊಂದಿಗೆ ಸರಕಾರವನ್ನು ರಚಿಸುತ್ತದೆ ಎಂದು ಹೇಳಿದರು.

ಆಡಳಿತಾರೂಢ ಬಿಜೆಪಿಯು ಸಣ್ಣಪುಟ್ಟ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿಯ ಕುರಿತು ಚರ್ಚಿಸುತ್ತಿರುವುದಾಗಿ ಅಸ್ಸಾಂ ಸಚಿವ ಹಾಗೂ ಮಣಿಪುರ ರಾಜ್ಯ ಚುನಾವಣೆಯ ಉಸ್ತುವಾರಿ ಅಶೋಕ್ ಸಿಂಘಾಲ್ ಇತ್ತೀಚೆಗೆ ಹೇಳಿದ್ದರು.

ಮಣಿಪುರದಲ್ಲಿ ಫೆಬ್ರವರಿ 27 ಹಾಗೂ ಮಾ.3ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ರಾಜ್ಯ ಸರಕಾರದಲ್ಲಿ ಬಿಜೆಪಿಯ ಮೈತ್ರಿ ಪಕ್ಷ ನ್ಯಾಶನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ)ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಸುಳಿವು ನೀಡಿದೆ.

 ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕನಾಗಿ ಯು.ಟಿ.ಖಾದರ್ ನೇಮಕ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕನಾಗಿ ಯು.ಟಿ.ಖಾದರ್ ನೇಮಕ


 ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕನಾಗಿ ಯು.ಟಿ.ಖಾದರ್ ನೇಮಕ

ಬೆಂಗಳೂರು:  ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಮಾಜಿ ಸಚಿವ ಯು.ಟಿ.ಖಾದರ್ ಅವರನ್ನು ನೇಮಿಸಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.​

ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅಧಿಕೃತ ಘೋಷಣೆ ಮಾಡಿದ್ದಾರೆ. 

ಮಂಗಳೂರು ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾದ ಯು.ಟಿ ಖಾದರ್, ಆರೋಗ್ಯ, ವಸತಿ, ಆಹಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Saturday, 29 January 2022

ಕಾರು-ಲಾರಿ ಭೀಕರ ಅಪಘಾತ: ಕಾರಲ್ಲಿದ್ದ ಸೈನಿಕ ಸ್ಥಳದಲ್ಲೇ ಸಾವು..

ಕಾರು-ಲಾರಿ ಭೀಕರ ಅಪಘಾತ: ಕಾರಲ್ಲಿದ್ದ ಸೈನಿಕ ಸ್ಥಳದಲ್ಲೇ ಸಾವು..


ಕಾರು-ಲಾರಿ ಭೀಕರ ಅಪಘಾತ: ಕಾರಲ್ಲಿದ್ದ ಸೈನಿಕ ಸ್ಥಳದಲ್ಲೇ ಸಾವು..

ಧಾರವಾಡ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸೈನಿಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಧಾರವಾಡ ಹೊರವಲಯದ ಯರಿಕೊಪ್ಪ‌ ಬೈಪಾಸ್ ಬಳಿ ಉಂಟಾದ ಈ ಅಪಘಾತದಲ್ಲಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಹೈದರಾಬಾದ್​ ಆರ್ಮಿ ಸೆಂಟರ್​ನಲ್ಲಿ ನಾಯಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಸಂತರಾಜ್ (45) ಮೃತಪಟ್ಟ ಸೈನಿಕ.

ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿ.

ಇಂದು ಬೆಂಗಳೂರಿನಿಂದ ಇವರು ತಮ್ಮ ಊರಾದ ಬೆಳಗಾವಿಗೆ ಹೋಗುತ್ತಿದ್ದಾಗ ಧಾರವಾಡ ಹೊರವಲಯದ ಯರಿಕೊಪ್ಪ‌ ಬೈಪಾಸ್ ಬಳಿ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ವಸಂತರಾಜ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಉಂಟಾಗಿದೆ.


ಶಿಷ್ಯೆ ಜೊತೆ 'ಹಳ್ಳಿ ಮೇಷ್ಟ್ರ' ರೊಮ್ಯಾನ್ಸ್

ಶಿಷ್ಯೆ ಜೊತೆ 'ಹಳ್ಳಿ ಮೇಷ್ಟ್ರ' ರೊಮ್ಯಾನ್ಸ್

ಶಿಷ್ಯೆ ಜೊತೆ 'ಹಳ್ಳಿ ಮೇಷ್ಟ್ರ' ರೊಮ್ಯಾನ್ಸ್ 

ಮೈಸೂರು : ಶಾಲೆಯಲ್ಲೇ ವಿದ್ಯಾರ್ಥಿನಿ ಜೊತೆಗೆ ಪಾಠ ಹೇಳಿಕೊಡಬೇಕಾದ ಮುಖ್ಯ ಶಿಕ್ಷಕ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ‌ ಆಗಿತ್ತು , ಪೋಲಿ ಶಿಕ್ಷಕನ ವರ್ತನೆಗೆ ವ್ಯಾಪಕ ಅಕ್ರೋಶ ವ್ಯಕ್ತವಾಗಿತ್ತು.

ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿ ಜೊತೆಗೆ ರಾಸಲೀಲೆಯಲ್ಲಿ ನಿರತನಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋವನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳೇ ಹರಿ ಬಿಟ್ಟಿದ್ದಾರೆ ಎನ್ನಲಾಗಿತ್ತು.

ಇದೀಗ ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಮುಖ್ಯ ಶಿಕ್ಷಕನನ್ನು ಸೇವೆಯಿಂದ ವಜಾ ಮಾಡಲಾಗಿದೆ. ಘಟನೆ ಸಂಬಂಧ ಶಿಕ್ಷಣಾಧಿಕಾರಿ ಅವರು ಶಾಲಾ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದ ಕುರಿತು ಮುಖ್ಯೋಪಾಧ್ಯಾಯರ ಮೇಲೆ ದೂರು ದಾಖಲಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಹೆಚ್.ಡಿ ಕೋಟೆ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನನ್ವಯ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಪರಿಶೀಲನೆ ನಡೆಸುತ್ತಿದ್ದು, . ಆರೋಪಿ ಶಿಕ್ಷಕನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಾರೆ ಮಕ್ಕಳಿಗೆ ತಿಳುವಳಿಕೆ ಹೇಳಿ ಮಕ್ಕಳನ್ನು ತಿದ್ದಿ ಸರಿ ದಾರಿಗೆ ತರಬೇಕಾಗಿರುವ ಶಿಕ್ಷಕರೇ ಇಂತಹ ಕೃತ್ಯ ಎಸಗಿದ್ದು, ನಿಜಕ್ಕೂ ನಾಚಿಕೆಗೇಡು.

ಪಿಯುಸಿಯಿಂದಲೇ ಸಿಇಟಿ, ನೀಟ್ ಪರೀಕ್ಷೆಗೆ ತರಬೇತಿ

ಪಿಯುಸಿಯಿಂದಲೇ ಸಿಇಟಿ, ನೀಟ್ ಪರೀಕ್ಷೆಗೆ ತರಬೇತಿ

ಪಿಯುಸಿಯಿಂದಲೇ ಸಿಇಟಿ, ನೀಟ್ ಪರೀಕ್ಷೆಗೆ ತರಬೇತಿ

ಬೆಂಗಳೂರು: ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರಥಮ ಪಿಯುಸಿ ಹಂತದಿಂದಲೇ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ತರಬೇತಿ ನೀಡಲು ಪದವಿಪೂರ್ವ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುವಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿಯುಸಿ ಹಂತದಿಂದಲೇ ಸರ್ಕಾರಿ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ.

ಈ ಹಿಂದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ತರಬೇತಿ ನೀಡಲಾಗುತ್ತಿದ್ದು, ಬಳಿಕ ಯೋಜನೆ ಕೈಬಿಡಲಾಗಿತ್ತು. NCERT ಪಠ್ಯಕ್ರಮದ ಅನ್ವಯ ಮತ್ತು ಪ್ರಥಮ ಪಿಯುಸಿ ಹಂತದಿಂದಲೇ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ. ಪ್ರತಿ ತಾಲೂಕಿನಲ್ಲಿ ಒಂದು ನೋಡಲ್ ಕಾಲೇಜು ಗುರುತಿಸಿ ತರಬೇತಿ ನೀಡಲಾಗುವುದು ಎನ್ನಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿಶ್ವಾಸ ಕಿರಣ ಯೋಜನೆಯಡಿ ಇಂಗ್ಲಿಷ್ ತರಬೇತಿ ನೀಡುತ್ತಿದ್ದು, ಇದನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಲು ಪರವಿಪೂರ್ವ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ರಾಜ್ಯದಲ್ಲಿಂದು 70 ಮಂದಿ ಸೋಂಕಿತರು ಸಾವು, ಇಲ್ಲಿದೆ ಜಿಲ್ಲಾವಾರು ಮಾಹಿತಿ

ರಾಜ್ಯದಲ್ಲಿಂದು 70 ಮಂದಿ ಸೋಂಕಿತರು ಸಾವು, ಇಲ್ಲಿದೆ ಜಿಲ್ಲಾವಾರು ಮಾಹಿತಿ


ರಾಜ್ಯದಲ್ಲಿಂದು 70 ಮಂದಿ ಸೋಂಕಿತರು ಸಾವು, ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 33,337 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 70 ಮಂದಿ ಸೋಂಕಿತರ ಮೃತಪಟ್ಟಿದ್ದಾರೆ. 69,902 ಜನ ಗುಣಮುಖರಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 37,57,031 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 34,65,995 ಜನ ಗುಣಮುಖರಾಗಿದ್ದಾರೆ.

38,874 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 2,52,132 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 19.37 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 16,586 ಜನರಿಗೆ ಕೊರೊನಾ ಸೋಂಕು ತಗುಲಿದೆ. 13 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 46,050 ಜನ ಗುಣಮುಖರಾಗಿದ್ದು, 1,30,701 ಸಕ್ರಿಯ ಪ್ರಕರಣಗಳಿವೆ.

ಬಳ್ಳಾರಿ 602, ಬೆಳಗಾವಿ 798, ಚಾಮರಾಜನಗರ 573, ದಕ್ಷಿಣಕನ್ನಡ 627, ಧಾರವಾಡ 1278, ಹಾಸನ 1039, ಕಲ್ಬುರ್ಗಿ 577, ಕೊಡಗು 540, ಕೋಲಾರ 567, ಮಂಡ್ಯ 986, ಮೈಸೂರು 2431, ಶಿವಮೊಗ್ಗ 674, ತುಮಕೂರು 1192, ಉಡುಪಿಯ 579, ಉತ್ತರಕನ್ನಡ 665 ಸೋಂಕಿತರು ಸಾವನ್ನಪ್ಪಿದ್ದಾರೆ.

ಬಾಗಲಕೋಟೆ 2, ಬಳ್ಳಾರಿ 4, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 13, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ದಕ್ಷಿಣಕನ್ನಡ 5, ಧಾರವಾಡ 1, ಗದಗ 1, ಹಾಸನ 1, ಹಾವೇರಿ 1 ಕಲಬುರ್ಗಿ 5, ಕೊಡಗು 1, ಕೋಲಾರ 1, ಮಂಡ್ಯ 2, ಮೈಸೂರು 9, ರಾಯಚೂರು 2, ರಾಮನಗರ 3, ಶಿವಮೊಗ್ಗ 1, ತುಮಕೂರು 4, ಉಡುಪಿ 5, ಉತ್ತರಕನ್ನಡ 1, ವಿಜಯಪುರ 1 ಸೇರಿ 70 ಜನ ಸೋಂಕಿತರು ಮೃತಪಟ್ಟಿದ್ದಾರೆ.


ವಿಚ್ಛೇದಿತ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪತಿ

ವಿಚ್ಛೇದಿತ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪತಿ


ವಿಚ್ಛೇದಿತ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪತಿ

ಮಂಡ್ಯ: ಪತ್ನಿಯನ್ನೇ ಕತ್ತುಕೊಯ್ದು ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಾಲಿನಿ(32 ) ಕೊಲೆಯಾದ ದುರ್ದೈವಿ ಮಹಿಳೆ. ಈಕೆಯ ಪತಿ ಸುರೇಶ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಒಂದೇ ಗ್ರಾಮದವರಾದ ಶಾಲಿನಿ ಹಾಗೂ ಸುರೇಶ್ ಕಳೆದ 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕೆಲವು ವರ್ಷ ಅನ್ಯೋನ್ಯವಾಗಿದ್ದ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.ನಂತರ ಹೊಂದಾಣಿಕೆ ಕೊರತೆಯಿಂದಾಗಿ 5 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಂದೆ ಮನೆಯಲ್ಲಿಯೇ ಶಾಲಿನಿ ಜೀವನ ಸಾಗಿಸುತ್ತಿದ್ದಳು. ಇದರಿಂದ ಕುಪಿತಗೊಂಡ ಸುರೇಶ್ ತನ್ನನ್ನು ಬಿಟ್ಟು ಜೀವನ ಸಾಗಿಸುತ್ತಿದ್ದಾಳೆ ಎಂದು ಖಿನ್ನತೆಗೆ ಒಳಗಾಗಿದ್ದನು.

ಶನಿವಾರ ಪತ್ನಿ ಕೆಲಸದಿಂದ ಬರುವುದನ್ನೇ ಕಾದು ಕುಳಿತಿದ್ದ ಸುರೇಶ್, ಮನೆಗೆ ಬರುತ್ತಿದ್ದಂತೆ ಕತ್ತು ಕುಯ್ದು, ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 ''ಸಚಿವರು ದೂರವಾಣಿ ಕರೆ ಸ್ವೀಕರಿಸುವುದಿಲ್ಲ'': ಸ್ವಪಕ್ಷೀಯ ಶಾಸಕರಿಂದಲೇ ಸಿಎಂ ಬೊಮ್ಮಾಯಿಗೆ ದೂರು

''ಸಚಿವರು ದೂರವಾಣಿ ಕರೆ ಸ್ವೀಕರಿಸುವುದಿಲ್ಲ'': ಸ್ವಪಕ್ಷೀಯ ಶಾಸಕರಿಂದಲೇ ಸಿಎಂ ಬೊಮ್ಮಾಯಿಗೆ ದೂರು


 ''ಸಚಿವರು ದೂರವಾಣಿ ಕರೆ ಸ್ವೀಕರಿಸುವುದಿಲ್ಲ'': ಸ್ವಪಕ್ಷೀಯ ಶಾಸಕರಿಂದಲೇ ಸಿಎಂ ಬೊಮ್ಮಾಯಿಗೆ ದೂರು

ಬೆಂಗಳೂರು: `ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಆರು ತಿಂಗಳ ಪೂರೈಸಿದೆ. ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಒತ್ತಾಯದ ಬೆನ್ನಲ್ಲೆ ಇದೀಗ ಸಚಿವರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿಯ 15ಕ್ಕೂ ಹೆಚ್ಚು ಶಾಸಕರು ಖುದ್ದು ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದಾರೆ.

ಶನಿವಾರ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರು, ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ದೂರು ಸಲ್ಲಿಸಿದ್ದು, ಸಚಿವರ ಕಾರ್ಯವೈಖರಿ ವಿರುದ್ಧ ಪಕ್ಷದ ವರಿಷ್ಠರಿಗೂ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ, `ವಿಧಾನಸಭಾ ಚುನಾವಣೆಗೆ ಇನ್ನೂ ಕೇವಲ 14 ತಿಂಗಳು ಬಾಕಿ ಉಳಿದಿದೆ. ಇಂತಹ ಸಂದರ್ಭದಲ್ಲಿ ಸಚಿವರು ನಮ್ಮ ಯಾವುದೇ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ. ಮೊಬೈಲ್‍ಫೋನ್ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಅಷ್ಟೇ ಅಲ್ಲ ಖುದ್ದಾಗಿ ಭೇಟಿಯಾಗಿ ಪತ್ರಗಳನ್ನು ಕೊಟ್ಟರೆ ಆಪ್ತ ಸಹಾಯಕರಿಂದ ಸಹಿ ಮಾಡಿಸಿ ಅಧಿಕಾರಿಗಳಿಗೆ ಕೊಡುತ್ತಾರೆ. ಕ್ಷೇತ್ರದ ಯಾವುದೇ ಕೆಲಸಗಳು ಆಗುತ್ತಿಲ್ಲ. ನಾವು ಕ್ಷೇತ್ರಕ್ಕೆ ಸಂಬಂಧಿಸಿದ ಪತ್ರಗಳನ್ನು ನೀಡಿದರೂ ಸಚಿವರು ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ. ಕ್ಷೇತ್ರದಲ್ಲಿ ನಮ್ಮ ಕೆಲಸಗಳೇ ಆಗದಿದ್ದರೆ ನಾವು ಹೇಗೆ ಕ್ಷೇತ್ರದ ಜನರ ಎದುರು ಮುಖ ಹೊತ್ತು ತಿರುಗಾಡಬೇಕು' ಎಂದು ಪ್ರಶ್ನಿಸಿದರು.

`ಕೆಲವರಿಗೆ ನಮ್ಮಿಂದಲೇ ಸರಕಾರ ಬಂದಿದೆ ಎಂಬ ಅಹಂ ಇದೆ. ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳಬೇಕು. ಕನಿಷ್ಟ ಪಕ್ಷ ಫೋನ್‍ಕಾಲ್ ಸ್ವೀಕಾರ ಮಾಡಬೇಕು. ನಮ್ಮ ಕ್ಷೇತ್ರಗಳ ಕೆಲಸ ಮಾಡಿಕೊಡುವಂತೆ ಸಚಿವರಿಗೆ ಸೂಚನೆ ಕೊಡಬೇಕು. ಎಲ್ಲಕ್ಕೂ ನಾವು ಅಧಿಕಾರಿಗಳು ಮತ್ತು ಸಚಿವರ ಆಪ್ತ ಸಹಾಯಕರು, ಸಹಾಯಕರನ್ನು ಕೇಳಲು ಆಗುವುದಿಲ್ಲ. ಈ ಕುರಿತು ಸಿಎಂ, ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

`ಖುದ್ದು ಶಾಸಕರೇ ಕೆಲಸ ಮಾಡಿಕೊಡಿ ಎಂದು ಕೇಳಿಕೊಂಡರೂ ಸಚಿವರು ಸ್ಪಂದಿಸುತ್ತಿಲ್ಲ. ಶಾಸಕರ ನಿರೀಕ್ಷೆ ಈಡೇರುತ್ತಿಲ್ಲ. ಈಗಿನ ಸರಕಾರದಲ್ಲೂ ಕ್ಷೇತ್ರದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಚಿವರೆಂದರೆ ಅವರೇನು ದೇವಲೋಕದಿಂದ ಇಳಿದು ಬಂದವರಲ್ಲ. ನಾವು ಜನರಿಂದಲೇ ಆಯ್ಕೆಯಾಗಿ ಬಂದಿದ್ದೇವೆ. ಇನ್ನೂ ಕೆಲ ಸಚಿವರು ಕೈಗೆ ಸಿಗುವುದಿಲ್ಲ. ನಮ್ಮ ಸಮಸ್ಯೆಗಳನ್ನು ಕೇಳುವ ಸೌಜನ್ಯವೂ ಕೆಲವರಲ್ಲಿ ಇಲ್ಲ' ಎಂದು ಅವರು ಅಳಲು ತೋಡಿಕೊಂಡರು. ಇತ್ತೀಚೆಗೆ ಸಚಿವರೊಬ್ಬರಿಗೆ ಕರೆ ಮಾಡಿದ್ದರೆ ಐಸೋಲೇಷನ್‍ನಲ್ಲಿ ಇರುವುದಾಗಿ ಸುಳ್ಳು ಹೇಳಿದರು. ಆದರೆ, ಅದೇ ಸಚಿವರು ಅಂದು ನಡೆದ ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು ಎಂದು ರೇಣುಕಾಚಾರ್ಯ ದೂರಿದರು.

ಶೀಘ್ರದಲ್ಲೆ ಸಭೆ: ಶಾಸಕರ ಅಸಮಾಧಾನವನ್ನು ಆಲಿಸಿದ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ಶೀಘ್ರದಲ್ಲೆ ಈ ಸಂಬಂಧ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಸಚಿವರು, ಶಾಸಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ನೀಡಲಾಗುವುದು ಅನಿವಾರ್ಯ ಆಗುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.

 ತುಮಕೂರು: ಬುದ್ಧಿಮಾಂಧ್ಯ ಯುವತಿ ಮೇಲೆ ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ ಪ್ರಕರಣ; ಜ.31ರಂದು ಶಿಕ್ಷೆ ಪ್ರಕಟ

ತುಮಕೂರು: ಬುದ್ಧಿಮಾಂಧ್ಯ ಯುವತಿ ಮೇಲೆ ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ ಪ್ರಕರಣ; ಜ.31ರಂದು ಶಿಕ್ಷೆ ಪ್ರಕಟ


 ತುಮಕೂರು: ಬುದ್ಧಿಮಾಂಧ್ಯ ಯುವತಿ ಮೇಲೆ ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ ಪ್ರಕರಣ; ಜ.31ರಂದು ಶಿಕ್ಷೆ ಪ್ರಕಟ

ತುಮಕೂರು: ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಉಮೇಶಯ್ಯ ವಿರುದ್ಧದ ಆರೋಪ ಸಾಬೀತಾಗಿದೆ.

2017ರ ಜನವರಿ 15 ರಂದು ನೈಟ್ ರೌಂಡ್ಸ್ ನಲ್ಲಿದ್ದ ಮಹಿಳಾ ಠಾಣೆಯ ಎಎಸೈ ಉಮೇಶಯ್ಯ ತುಮಕೂರು ನಗರದ ಅಂತರಸನಹಳ್ಳಿ ಸೇತುವೆ ಬಳಿ ಹೋಗುತ್ತಿದ್ದ ಬುದ್ಧಿಮಾಂದ್ಯ ಯುವತಿಯನ್ನು ಖಾಸಗಿ ಜೀಪ್ ನಲ್ಲಿ ಕೂರಿಸಿಕೊಂಡು ಅತ್ಯಾಚಾರ ಎಸಗಿದ್ದ.

ಘಟನೆಯ  ಸಂತ್ರಸ್ತೆಯ ಪೋಷಕರು ಎಎಸ್ಐ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣ ರಾಜ್ಯಾದ್ಯಂತ  ಸುದ್ದಿಯಾಗಿತ್ತು. ಇನ್ನು ಈ ಘಟನೆಯ ನಂತರ ಪೊಲೀಸ್ ಇಲಾಖೆಯು ತಲೆತಗ್ಗಿಸುವಂತಹ ಕೃತ್ಯ ಎಸಗಿದ್ದ ಉಮೇಶಯ್ಯ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹೆಚ್.ಎಸ್ ಮಲ್ಲಿಕಾರ್ಜುನಸ್ವಾಮಿ ರವರು  ಆರೋಪಿ ಉಮೇಶಯ್ಯ ತಪ್ಪಿತಸ್ಥ ಎಂದು ಜನವರಿ 28 ರಂದು ತೀರ್ಪು ನೀಡಿದ್ದಾರೆ. ಜನವರಿ 31 ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

ಸರ್ಕಾರಿ ಅಭಿಯೋಜಕ ವಿ.ಎ ಕವಿತಾ ವಾದ ಮಂಡಿಸಿದರು ಎರಡನೇ ಆರೋಪಿ ವಾಹನ ಚಾಲಕ ಈಶ್ವರನನ್ನು ನ್ಯಾಯಾಲಯ ಆರೋಪದಿಂದ ಮುಕ್ತಿಗೊಳಿಸಿದೆ. ಅಪರಾಧಿ ಉಮೇಶ್ಅಯ್ಯನಿಗೆ 12 ವರ್ಷ ಜೈಲು ಶಿಕ್ಷೆ ಮತ್ತು ಸಂತ್ರಸ್ತರ ಪರಿಹಾರ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅವ್ಯವಹಾರ ಪ್ರಕರಣ: ವಿಚಾರಣೆಗೆ ಹಿರಿಯ ಅಧಿಕಾರಿ ಎಸ್.ಮುರುಗನ್ ನೇಮಕ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅವ್ಯವಹಾರ ಪ್ರಕರಣ: ವಿಚಾರಣೆಗೆ ಹಿರಿಯ ಅಧಿಕಾರಿ ಎಸ್.ಮುರುಗನ್ ನೇಮಕ


 ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅವ್ಯವಹಾರ ಪ್ರಕರಣ: ವಿಚಾರಣೆಗೆ ಹಿರಿಯ ಅಧಿಕಾರಿ ಎಸ್.ಮುರುಗನ್ ನೇಮಕ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ತನಿಖೆ ನಡೆಸಿ, ತುರ್ತಾಗಿ ವರದಿ ಸಲ್ಲಿಸಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಸ್. ಮುರುಗನ್ ಅವರನ್ನು ವಿಚಾರಣಾ ಅಧಿಕಾರಿಯಾಗಿ ನೇಮಿಸಿ ಶನಿವಾರ ಒಳಾಡಳಿತ (ಗೃಹ)ಇಲಾಖೆ ಆದೇಶ ಹೊರಡಿಸಿದೆ.

ಈ ಸಂಬಂಧ ಒಳಾಡಳಿತ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಎಸ್.ಸುರೇಶ್ ಬಾಬು ಆದೇಶ ಹೊರಡಿಸಿದ್ದು, `ದೃಶ್ಯ ಮಾಧ್ಯಮಗಳಲ್ಲಿ ಪುಸಾರವಾದ ವಿಡಿಯೋ ಯಾವ ರೀತಿ ಕಾರಾಗೃಹದಲ್ಲಿ ಚಿತ್ರೀಕರಣವಾಯಿತು ಹಾಗೂ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ, ಸಮಗ್ರವಾಗಿ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸಹಾಯಕರಾಗಿ ಎಂ. ಸೋಮಶೇಖರ್, ಕಾರಾಗೃಹಗಳ ಉಪ ಮಹಾನಿರೀಕ್ಷಕರು, ಉತ್ತರ ವಲಯ, ಬೆಳಗಾವಿ ಇವರನ್ನು ನೇಮಿಸಿ ಆದೇಶಿಸಲಾಗಿದೆ.

ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ ಹಾಗೂ ಪೊಲೀಸ್ ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆ ಅವರೊಂದಿಗೆ ಜ.27ರಂದು ನಡೆದ ಸಭೆಯಲ್ಲಿ ಚರ್ಚಿಸಿ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಂದ ಉನ್ನತ ಮಟ್ಟದ ವಿಚಾರಣೆಯನ್ನು ನಡೆಸಲು ತೀರ್ಮಾನಿಸಲಾಗಿದೆ.

ಅದರನ್ವಯ ವಿಚಾರಣಾಧಿಕಾರಿಗಳು ಅಂತಿಮ ವರದಿಯನ್ನು ಹಾಗೂ ವಿಚಾರಣೆಯ ಪ್ರಗತಿಯ ಪ್ರತಿಯೊಂದು ಹಂತದ ಬಗ್ಗೆ ಮಾಹಿತಿಯನ್ನು ಕಾಲಕಾಲಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆ ಅವರಿಗೆ ನೇರವಾಗಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.

 ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ನಾಮಪತ್ರ ಸಲ್ಲಿಕೆ

ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ನಾಮಪತ್ರ ಸಲ್ಲಿಕೆ


 ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ನಾಮಪತ್ರ ಸಲ್ಲಿಕೆ

ಸಂಗ್ರೂರ್,(ಪಂಜಾಬ್): ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಶನಿವಾರ ಧುರಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಸ್ತುತ ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿರುವ ಮಾನ್ ಅವರು ಈಗ ಸಂಗ್ರೂರ್ ಜಿಲ್ಲೆಯ ಧುರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

1973 ರಲ್ಲಿ ಸಂಗ್ರೂರಿನ ಸತೋಜ್ ಗ್ರಾಮದಲ್ಲಿ ಜನಿಸಿದ ಮಾನ್ ಕಾಮಿಡಿಯನ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅವರು 2011 ರಲ್ಲಿ ಮನ್‌ಪ್ರೀತ್ ಸಿಂಗ್ ಬಾದಲ್ ನೇತೃತ್ವದ ಪಂಜಾಬ್ ಪೀಪಲ್ಸ್ ಪಾರ್ಟಿಯೊಂದಿಗೆ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು.

2012 ರಲ್ಲಿ ಅವರು ಲೆಹ್ರಗಾಗಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಸೋತರು.

ನಂತರ, ಅವರು 2014 ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು ಹಾಗೂ  ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಆಗ ಶಿರೋಮಣಿ ಅಕಾಲಿದಳದ (ಎಸ್ ಎಡಿ) ಭಾಗವಾಗಿದ್ದ ಪಂಜಾಬ್‌ನ ಅನುಭವಿ ನಾಯಕ ಸುಖದೇವ್ ಸಿಂಗ್ ಧಿಂಡ್ಸಾ ಅವರನ್ನು ಸೋಲಿಸಿದಾಗ ಪಂಜಾಬ್ ರಾಜಕೀಯದಲ್ಲಿ ಅವರ ಪ್ರಾಮುಖ್ಯತೆ ಹೆಚ್ಚಾಯಿತು.

ಮಾನ್ ಅವರು 2014 ರಿಂದ ಸತತವಾಗಿ ಎರಡನೆ ಅವಧಿಗೆ ಸಂಗ್ರೂರ್‌ನ ಪಂಜಾಬ್ ಲೋಕಸಭಾ ಸ್ಥಾನಕ್ಕೆ ಚುನಾಯಿತರಾಗಿದ್ದಾರೆ.

 ಜ.31ರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ರದ್ದು: ಸಚಿವ ಆರ್. ಅಶೋಕ್

ಜ.31ರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ರದ್ದು: ಸಚಿವ ಆರ್. ಅಶೋಕ್

 

ಜ.31ರಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ರದ್ದು: ಸಚಿವ ಆರ್. ಅಶೋಕ್

ಬೆಂಗಳೂರು: ರಾಜ್ಯಾದ್ಯಂತ ಜ.31ರಿಂದ ನೈಟ್ ಕರ್ಫ್ಯೂ ಇರುವುದಿಲ್ಲ. ಅದೇರೀತಿ ಸೋಮವಾರದಿಂದ ಬೆಂಗಳೂರಿನಲ್ಲಿ ಶಾಲೆಗಳು ಪುನಾರಂಭಗೊಳ್ಳಲಿದೆ ಎಂದು  ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಕೋವಿಡ್‌-19ರ ಸ್ಥಿತಿಗತಿಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ನಡೆಸಿ ನಂತರ ಕಂದಾಯ ಸಚಿವ ಆರ್. ಅಶೋಕ್‌  ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ದೇವಾಲಯ, ಮಸೀದಿ, ಚರ್ಚ್ ಗಳಲ್ಲಿ ಎಲ್ಲ ಧಾರ್ಮಿಕ ಸೇವೆಗಳಿಗೆ ಅವಕಾಶ ಇರುತ್ತದೆ. ಆದರೆ ಏಕಕಾಲದಲ್ಲಿ 50 ಜನರಷ್ಟೇ ಸೇರಲು ಅವಕಾಶವಿರುತ್ತದೆ. ಚಿತ್ರಮಂದಿರಗಳಲ್ಲಿ ಶೇ.50ರ ನಿಯಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಆದರೆ ಜಾತ್ರೆಗಳು, ಧರಣಿ, ಪ್ರತಿಭಟನೆಗಳಿಗೆ ನಿರ್ಬಂಧ ಮುಂದುವರಿಯಲಿದೆ. ಕಚೇರಿಗಳಲ್ಲಿ 100 ಶೇ. ಸಿಬ್ಬಂದಿಯೊಂದಿಗೆ ಕಾರ್ಯಾಚರಿಸಲು ಅವಕಾಶ ಇರುತ್ತದೆ. ಸ್ವಿಮ್ಮಿಂಗ್ ಫುಲ್, ಜಿಮ್ ಗಳಲ್ಲಿ ಶೇ.50ರಷ್ಟು ಅವಕಾಶ ನೀಡಲಾಗಿದೆ. ಹೋಟೆಲ್, ಪಬ್‍, ರೆಸ್ಟೋರೆಂಟ್ ಗಳು ತೆರೆಯಲು ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದರು.

ತೆರೆದ ಪ್ರದೇಶದಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ 300 ಜನರು ಹಾಗೂ ಒಳಾಂಗಣದಲ್ಲಿ ನಡೆಯುವ ಮದುವೆಗಳಲ್ಲಿ 200 ಜನರು ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅದೇರೀತಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ.2ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ 19 ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದವರು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಎಲ್ಲಾ ತರಗತಿಗಳು ಪುನರಾರಂಭ: ಬಿ.ಸಿ.ನಾಗೇಶ್

ಬೆಂಗಳೂರಿನಲ್ಲಿ ಸೋಮವಾರದಿಂದ ಶಾಲೆಗಳನ್ನು ಪುನರಾರಂಭಿಸಲು‌ ನಿರ್ಧರಿಸಲಾಗಿದೆ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಲ್ಲ ತರಗತಿಗಳು ಸೋಮವಾರದಿಂದ ಕಾರ್ಯಾ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

Friday, 28 January 2022

 ಉ.ಪ್ರ.ಚುನಾವಣೆ: ಅಯೋಧ್ಯೆಯಲ್ಲಿ ಹಾಲಿ ಶಾಸಕ ವಿ.ಪಿ.ಗುಪ್ತಾ ಬಿಜೆಪಿ ಅಭ್ಯರ್ಥಿ

ಉ.ಪ್ರ.ಚುನಾವಣೆ: ಅಯೋಧ್ಯೆಯಲ್ಲಿ ಹಾಲಿ ಶಾಸಕ ವಿ.ಪಿ.ಗುಪ್ತಾ ಬಿಜೆಪಿ ಅಭ್ಯರ್ಥಿ


 ಉ.ಪ್ರ.ಚುನಾವಣೆ: ಅಯೋಧ್ಯೆಯಲ್ಲಿ ಹಾಲಿ ಶಾಸಕ ವಿ.ಪಿ.ಗುಪ್ತಾ ಬಿಜೆಪಿ ಅಭ್ಯರ್ಥಿ

ಲಕ್ನೋ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಾಗಿ ತನ್ನ 91 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಶುಕ್ರವಾರ ಬಿಡುಗಡೆಗೊಳಿಸಿದ್ದು, 13 ಸಚಿವರು ಮತ್ತು ಅಯೋಧ್ಯೆಯ ಹಾಲಿ ಶಾಸಕ ಪಟ್ಟಿಯಲ್ಲಿದ್ದಾರೆ.

ಪಕ್ಷವು ಸಹಕಾರ ಸಚಿವ ಮುಕುಲ ಬಿಹಾರಿ ವರ್ಮಾರನ್ನು ಕೈಬಿಟ್ಟಿದ್ದು, ಅವರ ಪುತ್ರ ಗೌರವ ತನ್ನ ತಂದೆಯ ಕೈಸರ್‌ಗಂಜ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಉ.ಪ್ರ.ಮುಖ್ಯಮಂತ್ರಿ ಆದಿತ್ಯನಾಥರ ಮಾಧ್ಯಮ ಸಲಹೆಗಾರ ಶಲಭಮಣಿ ತ್ರಿಪಾಠಿ ಅವರನ್ನು ದೇವರಿಯಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಅಯೋಧ್ಯೆಯಲ್ಲಿ ತನ್ನ ಅಭ್ಯರ್ಥಿಯಾಗಿ ಹಾಲಿ ಶಾಸಕ ವೇದ ಪ್ರಕಾಶ ಗುಪ್ತಾ ಅವರನ್ನೇ ಬಿಜೆಪಿ ಹೆಸರಿಸಿದೆ.

ಸಿದ್ಧಾರ್ಥನಾಥ ಸಿಂಗ್ (ಅಲಹಾಬಾದ್ ಪಶ್ಚಿಮ) ಮತ್ತು ನಂದಗೋಪಾಲ ಗುಪ್ತಾ ‘ನಂದಿ’(ಅಲಹಾಬಾದ್ ದಕ್ಷಿಣ) ಅವರು ಬಿಜೆಪಿ ಟಿಕೆಟ್ ಪಡೆದಿರುವ ಸಚಿವರಲ್ಲಿ ಸೇರಿದ್ದಾರೆ. ಕೃಷಿ ಸಚಿವ ಸೂರ್ಯಪ್ರತಾಪ ಶಾಹಿ ಅವರೂ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ.

 ವಿಮಾನದಲ್ಲಿ ಅನಾರೋಗ್ಯಕ್ಕೀಡಾದ ವ್ಯಕ್ತಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಿದ ಡಾ. ಝಕರಿಯಾ ಅಬ್ಬಾಸ್‌

ವಿಮಾನದಲ್ಲಿ ಅನಾರೋಗ್ಯಕ್ಕೀಡಾದ ವ್ಯಕ್ತಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಿದ ಡಾ. ಝಕರಿಯಾ ಅಬ್ಬಾಸ್‌


 ವಿಮಾನದಲ್ಲಿ ಅನಾರೋಗ್ಯಕ್ಕೀಡಾದ ವ್ಯಕ್ತಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಿದ ಡಾ. ಝಕರಿಯಾ ಅಬ್ಬಾಸ್‌

ಹೊಸದಿಲ್ಲಿ: ಚಲಿಸುತ್ತಿದ್ದ ವಿಮಾನದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿ ಯುವ ವೈದ್ಯರೊಬ್ಬರು ನಿಜವಾದ ಹೀರೋ ಎನಿಸಿಕೊಂಡಿದ್ದಾರೆ. ಈ ಕುರಿತು ಬೆಂಗಳೂರಿನ ವೈದ್ಯ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಯುವ ವೈದ್ಯ ಝಕರಿಯಾ ಅಬ್ಬಾಸ್‌ ಶಾರ್ಜಾದಿಂದ ಬಾಗ್ದಾದ್‌ ಹೋಗುವ ವಿಮಾನ ಹತ್ತಿದ್ದರು. ದಾರಿ ಮಧ್ಯೆ 30 ರ ಹರೆಯದ ಯುವಕರೋರ್ವರಿಗೆ ಅನಾರೋಗ್ಯ ಕಂಡುಬಂದಿದ್ದು, ವಿಮಾನ ಪರಿಚಾರಕಿಯರು ವಿಮಾನದಲ್ಲಿ ಯಾರಾದರೂ ವೈದ್ಯರಿದ್ದಾರೆಯೇ ಎಂದು ಪರೀಕ್ಷಿಸಿದ್ದಾರೆ. 

ಈ ವೇಳೆ ಅದೇ ವಿಮಾನದಲ್ಲಿ ಸಂಚರಿಸುತ್ತಿದ್ದ ಝಕರಿಯಾ ಅಬ್ಬಾಸ್‌ ಪರಿಚಾರಕಿಯರ ಕರೆಗೆ ಓಗೊಟ್ಟು, ಅನಾರೋಗ್ಯಕ್ಕೆ ಈಡಾಗಿದ್ದ ವ್ಯಕ್ತಿಯ ನೆರವಿಗೆ ಧಾವಿಸಿದ್ದಾರೆ. ಕ್ಲಪ್ತ ಸಮಯದಲ್ಲಿ ಆ ವ್ಯಕ್ತಿಗೆ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ ಅವರ ಜೀವ ಉಳಿಸಿರುವುದಾಗಿ ಝಕರಿಯಾ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

ತುರ್ತು ಪರಿಸ್ಥಿತಿಯಲ್ಲಿ ಒಂದು ಜೀವ ಉಳಿಸಲು ಸಾಧ್ಯವಾಗುವುದು ಒಬ್ಬ ವೈದ್ಯ ಎಂಬ ನೆಲೆಯಲ್ಲಿ ತುಂಬಾ ಹೆಮ್ಮೆ ತರುವ ಸಂಗತಿ ಎಂದು ಅವರು ಬರೆದಿದ್ದಾರೆ. 

ವಿಮಾನ ಪರಿಚಾರಕಿಯರು ವೈದ್ಯರಿದ್ದಾಯೆ ಎಂದು ಕರೆದಾಗ ವಿಮಾನದಲ್ಲಿದ್ದ ಏಕೈಕ ಡಾಕ್ಟರ್‌ ನಾನಾಗಿದ್ದೆ. ನಾನು ಅನಾರೋಗ್ಯ ಪೀಡಿತ ವ್ಯಕ್ತಿ ಬಳಿ ಹೋದಾಗ ಆತ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ವಿಮಾನದಲ್ಲಿ ಒಆರ್‌ಎಸ್‌ ಗೆ ಬೇಕಾದ ಅಗತ್ಯ ಔಷಧಿಗಳಿರಲಿಲ್ಲ. ಹಾಗಾಗಿ ಆರು ಟೇಬಲ್‌ ಸ್ಪೂನ್‌ ಸಕ್ಕರೆ, ಒಂದು ಸ್ಪೂನ್‌ ಉಪ್ಪು ಹಾಗೂ ಬಿಸಿ ಆರಿದ ನೀರನ್ನು ತಯಾರು ಮಾಡುವಂತೆ ವಿಮಾನ ಸಿಬ್ಬಂದಿಗೆ ಸೂಚಿಸಿದೆ. ಕೆಲವು ಕ್ಷಣಗಳ ಬಳಿಕ ಆ ವ್ಯಕ್ತಿ ಸಹಜ ಸ್ಥಿತಿಗೆ  ಮರಳಿದರು. ವಿಮಾನ ಯಾನ ಪೂರ್ತಿಯಾಗುವವರೆಗೆ ನಾನು ಅವರನ್ನು ಮೂರು ಬಾರಿ ಪರೀಕ್ಷಿಸಿದೆ. ಅವರು ಆರಾಮವಾಗಿದ್ದರು. ಒಬ್ಬ ವೈದ್ಯನಾಗಿ ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ನೆರವಾಗುವುದು ನಿಜಕ್ಕೂ ಒಂದು ಹೆಮ್ಮೆ. ನಿಜಕ್ಕೂ ಅನುಗ್ರಹೀತ ಎಂದು ಝಕರಿಯಾ ಬರೆದುಕೊಂಡಿದ್ದಾರೆ.

 ದಿಲ್ಲಿಯಿಂದ ಉತ್ತರಪ್ರದೇಶಕ್ಕೆ ನನ್ನ ಹೆಲಿಕಾಪ್ಟರ್ ಹಾರಲು ಬಿಡದೆ ಬಿಜೆಪಿ 'ಪಿತೂರಿ'ನಡೆಸುತ್ತಿದೆ: ಅಖಿಲೇಶ್ ಯಾದವ್

ದಿಲ್ಲಿಯಿಂದ ಉತ್ತರಪ್ರದೇಶಕ್ಕೆ ನನ್ನ ಹೆಲಿಕಾಪ್ಟರ್ ಹಾರಲು ಬಿಡದೆ ಬಿಜೆಪಿ 'ಪಿತೂರಿ'ನಡೆಸುತ್ತಿದೆ: ಅಖಿಲೇಶ್ ಯಾದವ್


 ದಿಲ್ಲಿಯಿಂದ ಉತ್ತರಪ್ರದೇಶಕ್ಕೆ ನನ್ನ ಹೆಲಿಕಾಪ್ಟರ್ ಹಾರಲು ಬಿಡದೆ ಬಿಜೆಪಿ 'ಪಿತೂರಿ'ನಡೆಸುತ್ತಿದೆ: ಅಖಿಲೇಶ್ ಯಾದವ್

ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಪ್ರಮುಖ ಸವಾಲಾಗಿ ಹೊರಹೊಮ್ಮಿರುವ ಅಖಿಲೇಶ್ ಯಾದವ್ ಅವರು ಇಂದು ಮಧ್ಯಾಹ್ನ ನನ್ನ ಹೆಲಿಕಾಪ್ಟರ್‌ಗೆ ದಿಲ್ಲಿಯಿಂದ ಉತ್ತರಪ್ರದೇಶದ ಮುಝಾಫರ್‌ನಗರಕ್ಕೆ ಹಾರಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ .  ಇದು  "ಬಿಜೆಪಿಯ ಪಿತೂರಿ " ಎಂದು ಕರೆದಿದ್ದಾರೆ.

"ನನ್ನ ಹೆಲಿಕಾಪ್ಟರ್ ಅನ್ನು ದಿಲ್ಲಿಯಲ್ಲಿ ಯಾವುದೇ ಕಾರಣವಿಲ್ಲದೆ ನಿಲ್ಲಿಸಲಾಗಿದೆ. ಅದನ್ನು ಮುಝಾಫರ್‌ನಗರಕ್ಕೆ (ಉತ್ತರಪ್ರದೇಶ) ಹಾರಲು ಬಿಡುತ್ತಿಲ್ಲ. ಆದರೆ ಬಿಜೆಪಿ ನಾಯಕನಿಗೆ ಇಲ್ಲಿಂದ ಹಾರಲು ಅವಕಾಶ ನೀಡಲಾಯಿತು. ಇದು ಸೋಲಿನ ಭೀತಿಯಲ್ಲಿರುವ ಬಿಜೆಪಿಯ ಪಿತೂರಿ ಹಾಗೂ ಅದರ ಹತಾಶೆಗೆ ಸಾಕ್ಷಿ’’ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

"ಸಾರ್ವಜನಿಕರಿಗೆ ಇದೆಲ್ಲವೂ ತಿಳಿದಿದೆ" ಎಂದು ಅವರು ಆಡಳಿತ ಪಕ್ಷವನ್ನು ಕೆಣಕಿದ ಅವರು ಹೆಲಿಕಾಪ್ಟರ್  ಮುಂದೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಫೆಬ್ರವರಿ 10 ರಂದು ರಾಜ್ಯದಲ್ಲಿ ಏಳು ಹಂತಗಳ ನಿರ್ಣಾಯಕ ಚುನಾವಣೆ ಆರಂಭವಾಗುವ ಕೆಲವೇ ದಿನಗಳ ಮೊದಲು ಈ ಆರೋಪ ಬಂದಿದೆ.

 ದ.ಕ. ಜಿಲ್ಲೆಯ ಶಾಶ್ವತ ಅಭಿವೃದ್ಧಿಗೆ ಯೋಜನೆ: ಸಚಿವ ಸುನೀಲ್ ಕುಮಾರ್

ದ.ಕ. ಜಿಲ್ಲೆಯ ಶಾಶ್ವತ ಅಭಿವೃದ್ಧಿಗೆ ಯೋಜನೆ: ಸಚಿವ ಸುನೀಲ್ ಕುಮಾರ್


 ದ.ಕ. ಜಿಲ್ಲೆಯ ಶಾಶ್ವತ ಅಭಿವೃದ್ಧಿಗೆ ಯೋಜನೆ: ಸಚಿವ ಸುನೀಲ್ ಕುಮಾರ್

ಮಂಗಳೂರು: ಮುಂದಿನ 10 ವರ್ಷಗಳಲ್ಲಿ ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯ ಶಾಶ್ವತ ಅಭಿವೃದ್ಧಿಗೆ  ಶಾಸಕರ ಜೊತೆ ಸಮಾಲೋಚನೆ ನಡೆಸಿ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಕರ್ನಾಟಕದಲ್ಲಿ ಹಿಂದುತ್ವ ಪರ ಸರಕಾರವಿದೆ. ಹಾಗಾಗಿ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದ್ದೇವೆ. ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.

ಗೋಹತ್ಯೆ ನಿಷೇಧ ಕಾನೂನಿನ ವಿರುದ್ಧ ಕೆಲವರು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದಾರೆ. ಅದು  ತೆರವುಗೊಂಡ ಬಳಿಕ ಜಾರಿಯಾಗಲಿದೆ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ ಬೆನ್ನೆಲುಬು, ಅದನ್ನು ನಿರ್ಲಕ್ಷಿಸಬಾರದು: ರವಿ ಶಾಸ್ತ್ರಿ

ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ ಬೆನ್ನೆಲುಬು, ಅದನ್ನು ನಿರ್ಲಕ್ಷಿಸಬಾರದು: ರವಿ ಶಾಸ್ತ್ರಿ

 

ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ ಬೆನ್ನೆಲುಬು, ಅದನ್ನು ನಿರ್ಲಕ್ಷಿಸಬಾರದು: ರವಿ ಶಾಸ್ತ್ರಿ

ಹೊಸದಿಲ್ಲಿ: ರಣಜಿ ಟ್ರೋಫಿಯನ್ನು ಸತತ ಎರಡನೇ ವರ್ಷ ರದ್ದುಪಡಿಸಲು ಅವಕಾಶ ನೀಡುವುದಿಲ್ಲ ಎಂಬ ಕೂಗಿಗೆ  ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ದನಿಗೂಡಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಉನ್ನತ ಮಟ್ಟದ ಪ್ರಥಮ ದರ್ಜೆ ಪಂದ್ಯಾವಳಿಯನ್ನು ಮುಂದೂಡಲಾಗಿದೆ ಹಾಗೂ  ರಣಜಿ ಟ್ರೋಫಿಯನ್ನು ಮರುನಿಗದಿಪಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒತ್ತಡಕ್ಕೆ ಸಿಲುಕಿದೆ.

"ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬು. ನೀವು ಅದನ್ನು ನಿರ್ಲಕ್ಷಿಸಲು ಆರಂಭಿಸಿದ ಕ್ಷಣ ನಮ್ಮ ಕ್ರಿಕೆಟ್ ಸ್ಪೈನ್‌ಲೆಸ್ ಆಗಿರುತ್ತದೆ!" ಶಾಸ್ತ್ರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶಾಸ್ತ್ರಿ ಹಾಗೂ  ಉಳಿದ ಭಾರತೀಯ ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರರನ್ನು ಆಯ್ಕೆ ಮಾಡಲು ಭಾರತಕ್ಕೆ ಪ್ರತಿಭೆಯನ್ನು ಒದಗಿಸಿದ್ದಕ್ಕಾಗಿ ರಣಜಿ ಟ್ರೋಫಿಯನ್ನು ಪದೇ ಪದೇ ಸ್ಮರಿಸುತ್ತಾರೆ.  

ಸೌರಾಷ್ಟ್ರದ ನಾಯಕರಾಗಿರುವ ವೇಗದ ಬೌಲರ್ ಜಯದೇವ್ ಉನದ್ಕತ್ ಕೂಡ ರಣಜಿ ಟ್ರೋಫಿ ಟೂರ್ನಿಯನ್ನು ಮುಂದೂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು.

"ಸತತವಾಗಿ ಎರಡು ವರ್ಷಗಳು ದೊಡ್ಡ ನಷ್ಟವಾಗಿದೆ. ಒಂದು ವರ್ಷದಲ್ಲೇ ದೊಡ್ಡ ನಷ್ಟವಾಗಿದೆ. ಅಂತಿಮವಾಗಿ ಮುಂದೂಡುವ ಮೊದಲು ನಾವು ನಮ್ಮ ಪೂರ್ವ-ಋತುವಿನ ಶಿಬಿರವನ್ನು ಆರಂಭಿಸಿದಾಗ ಇದು ಸಂಪೂರ್ಣ ಹೊಸ ಆಟದಂತೆ ಭಾಸವಾಯಿತು" ಎಂದು ಉನದ್ಕತ್ ಪಿಟಿಐಗೆ ತಿಳಿಸಿದರು.

 ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ

ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ


 ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿರುವುದಾಗಿ ವರದಿಯಾಗಿದೆ. ಯಡಿಯೂರಪ್ಪ ಅವರ ಎರಡನೇ ಪುತ್ರಿ ಪದ್ಮಾವತಿ ಅವರ ಮಗಳು ಡಾ.ಸೌಂದರ್ಯ (30) ಮೃತಪಟ್ಟವರಾಗಿದ್ದಾರೆ. ವಸಂತ ನಗರದಲ್ಲಿರುವ ಅವರ ಮನೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. 

ಡಾ.ಸೌಂದರ್ಯ ಅವರ ಪತಿ ಡಾ. ನೀರಜ್ ಅವರು ನಗರದ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಅವರು ಕರ್ತವ್ಯಕ್ಕೆ ತೆರಳಿದ್ದ ವೇಳೆ ಆತ್ಮಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಡಾ.ಸೌಂದರ್ಯ ಕೂಡ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು. ಇವರು 2018ರಲ್ಲಿ ವಿವಾಹಿತ ರಾಗಿದ್ದರು.

ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.

Thursday, 27 January 2022

ಕೆಎಸ್​ಆರ್​ಟಿಸಿ ಟಿಕೆಟ್​ ವಿತರಣಾ ಯಂತ್ರ ಸ್ಫೋಟ:   ಕಂಡಕ್ಟರ್​ಗೆ ಗಂಭೀರ ಗಾಯ

ಕೆಎಸ್​ಆರ್​ಟಿಸಿ ಟಿಕೆಟ್​ ವಿತರಣಾ ಯಂತ್ರ ಸ್ಫೋಟ: ಕಂಡಕ್ಟರ್​ಗೆ ಗಂಭೀರ ಗಾಯ

ಕೆಎಸ್​ಆರ್​ಟಿಸಿ ಟಿಕೆಟ್​ ವಿತರಣಾ ಯಂತ್ರ ಸ್ಫೋಟ: 
ಕಂಡಕ್ಟರ್​ಗೆ ಗಂಭೀರ ಗಾಯ

ತಿರುವನಂತಪುರಂ: ಬಸ್​ ಕಂಡಕ್ಟರ್​ ಬಳಿಯಿರುವ ಟಿಕೆಟ್​ ವಿತರಣಾ ಯಂತ್ರವೂ ಕೂಡ ಸುರಕ್ಷಿತವಲ್ಲ ಎಂಬುದಕ್ಕೆ ಕೇರಳದಲ್ಲಿ ನಡೆದಿರುವ ಈ ಆತಂಕಕಾರಿ ಘಟನೆ ತಾಜಾ ಉದಾಹರಣೆಯಾಗಿದೆ.

ಯಂತ್ರವೂ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಕಂಡಕ್ಟರ್​ ಎಂಎಂ ಮುಹಮ್ಮದ್​ ಎಂಬುವರ ಒಂದು ಕೈಗೆ ಸುಟ್ಟ ಗಾಯಗಳಾಗಿವೆ.

ಪೆರುಂಬವೂರ್​ ನಿವಾಸಿಯಾಗಿರುವ ಮುಹಮ್ಮದ್, ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕಂಡಕ್ಟರ್​ ಆಗಿದ್ದಾರೆ.

ತಿರುವನಂತಪುರಂ-ಸುಲ್ತಾನ್ ಬತ್ತೇರಿ ಸೂಪರ್ ಡಿಲಕ್ಸ್ ಬಸ್‌ನ ಟಿಕೆಟ್ ಯಂತ್ರವೂ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಯಂತ್ರವೂ ಬತ್ತೇರಿ ಕೆಎಸ್​ಆರ್​ಟಿಸಿ ಡಿಪೋಗೆ ಸೇರಿದ್ದಾಗಿದೆ. ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸಿಬ್ಬಂದಿ ವಿಶ್ರಾಂತಿ ಕೊಠಡಿಯಲ್ಲಿ ಈ ಘಟನೆ ನಡೆದಿದೆ.

ಇದೇ ಸಂದರ್ಭದಲ್ಲಿ ಈ ಅಪಘಾತದ ಬಗ್ಗೆ ಕೆಎಸ್‌ಆರ್​ಟಿಸಿ ತನಿಖೆ ಆರಂಭಿಸಿದೆ. ಮೈಕ್ರೋಎಫ್​ಎಕ್ಸ್​ ಕಂಪನಿ ಈ ಯಂತ್ರವನ್ನು ತಯಾರಿಸಿದ್ದು, ಶಾರ್ಟ್​ ಸೆರ್ಕ್ಯೂಟ್​ನಿಂದ ಸ್ಫೋಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಹಿಂದಿನ ಎಲ್​ಡಿಎಫ್​ ಸರ್ಕಾರದ ಆಳ್ವಿಕೆ ವೇಳೆ ಇದನ್ನು ಖರೀದಿಸಲಾಗಿದ್ದು, ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಕೆಎಸ್‌ಆರ್‌ಟಿಸಿ ಗುತ್ತಿಗೆಯನ್ನು ಸಾರ್ವಜನಿಕ ವಲಯದ ಕಂಪನಿಯ ಬದಲಿಗೆ ಖಾಸಗಿ ಕಂಪನಿಗೆ ನೀಡಿರುವ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. (ಏಜೆನ್ಸೀಸ್​)


ಬೊಮ್ಮಾಯಿ ಸರ್ಕಾರಕ್ಕೆಇಂದಿಗೆ 6 ತಿಂಗಳು : ಇಂದು `ಸಿಎಂ ಸಾಧನಾ ಪುಸ್ತಕ' ಲೋಕಾರ್ಪಣೆ

ಬೊಮ್ಮಾಯಿ ಸರ್ಕಾರಕ್ಕೆಇಂದಿಗೆ 6 ತಿಂಗಳು : ಇಂದು `ಸಿಎಂ ಸಾಧನಾ ಪುಸ್ತಕ' ಲೋಕಾರ್ಪಣೆ

ಬೊಮ್ಮಾಯಿ ಸರ್ಕಾರಕ್ಕೆಇಂದಿಗೆ 6 ತಿಂಗಳು : ಇಂದು `ಸಿಎಂ ಸಾಧನಾ ಪುಸ್ತಕ' ಲೋಕಾರ್ಪಣೆ

ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ನಿರ್ಗಮನದ ಬಳಿಕ ಸವಾಲಿನ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಕಂರಿಸಿದ ಬಸವರಾಜ ಬೊಮ್ಮಾಯಿ ಇಂದಿಗೆ ಮುಖ್ಯಮಂತ್ರಿಯಾಗಿ 6 ತಿಂಗಳು ಪೂರೈಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 6 ತಿಂಗಳು ಪೂರೈಸುತ್ತಿದ್ದಾರೆ.

ಜೊತೆಗೆ ಅವರ 62 ನೇ ಹುಟ್ಟು ಹಬ್ಬ ಕೂಡ ಇದೆ. ಹುಟ್ಟು ಹಬ್ಬ ಆಚರಿಸಿಕೊಳ್ಳದಿದ್ದರೂ ರಾಜ್ಯ ಸರ್ಕಾರದ 6 ತಿಂಗಳ ಸಾಧನೆಯ ಸಂಭ್ರಮವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ.

ಇಂದು ಸಿಎಂ ಸಾಧನಾ ಪುಸ್ತಕ ಲೋಕಾರ್ಪಣೆ

ತಮ್ಮ ನೇತೃತ್ವದ ಸರ್ಕಾರ 6 ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಸರ್ಕಾರದ ಸಾಧನೆಗಳನ್ನು ಒಳಗೊಂಡ ಭವ್ಯ ಭವಿಷ್ಯದ ಭರವಸೆಯ ಹೆಜ್ಜೆಗಳು ಎಂಬ ಶೀರ್ಷಿಕೆಯುಳ್ಳ ಸಾಧನಾ ಪುಸ್ತಕವನ್ನು ವಿಧಾನಸೌಧದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆಗೊಳಿಸಲಿದ್ದಾರೆ.

ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದಿನಿಂದ 3 ದಿನ ಪವರ್ ಕಟ್

ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದಿನಿಂದ 3 ದಿನ ಪವರ್ ಕಟ್


ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದಿನಿಂದ 3 ದಿನ ಪವರ್ ಕಟ್

ಬೆಂಗಳೂರು: ಬನಶಂಕರಿ, ಮಾರತ್​ಹಳ್ಳಿ, ಇಸ್ರೋ ಲೇಔಟ್, ದೊಮ್ಮಲೂರು, ಹೆಗಡೆ ನಗರ, ಶ್ರೀನಗರ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದೆ.

ಬೆಂಗಳೂರು: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದಿನಿಂದ (ಜನವರಿ 28) ಜನವರಿ 30ರವರೆಗೆ ವಿದ್ಯುತ್ ವ್ಯತ್ಯಯ ಇರಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ ತಿಳಿಸಿದೆ.

ವಿದ್ಯುತ್ ಕಾಮಗಾರಿಯ ನಿರ್ವಹಣೆಯ ಕಾರ್ಯಗಳ ಪರಿಣಾಮವಾಗಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇಂದು ಬನಶಂಕರಿ, ಮಾರತ್​ಹಳ್ಳಿ, ಇಸ್ರೋ ಲೇಔಟ್, ದೊಮ್ಮಲೂರು, ಹೆಗಡೆ ನಗರ, ಶ್ರೀನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

ಇಂದು (ಶುಕ್ರವಾರ) ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಲಕ್ಷ್ಮಿ ರಸ್ತೆ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕೆಆರ್ ರಸ್ತೆ ಬನಶಂಕರಿ 2ನೇ ಹಂತ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಹಂತ, ಉತ್ತರಹಳ್ಳಿ ವೃತ್ತ, ಮಾರತಹಳ್ಳಿ, ಸಂಜಯ್ ನಗರ, ಮಂಜುನಾಥ ನಗರ, ಶ್ರೀನಗರ, ಅಶ್ವತ್ಥ ನಗರ, ಗೊಟ್ಟಿಗೆರೆ ಮುಖ್ಯರಸ್ತೆಯಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಟಿಸಿ ಪಾಳ್ಯ ರಸ್ತೆ, ಕೆಜಿ ಪುರ ಮುಖ್ಯ ರಸ್ತೆ, ಬಾಬುಸಪಾಳ್ಯ ಪ್ರದೇಶ, ದೊಮ್ಮಲೂರು 2ನೇ ಹಂತ, ಎಚ್‌ಎಎಲ್ 2ನೇ ಹಂತ ಮತ್ತು ನಾರ್ತ್ ಅವೆನ್ಯೂ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಆಂಜನೇಯ ಬ್ಲಾಕ್, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಚಾಮುಂಡೇಶ್ವರಿ ಲೇಔಟ್, ಮಾರುತಿ ನಗರ, ತಿರುಮಲ ನಗರ, ಆದಿತ್ಯನಗರ, ಹುರಳಿ ಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ದಾಸೇನಹಳ್ಳಿ, ಹೆಗಡೆ ನಗರ, ಕೋಗಿಲು ಮುಖ್ಯರಸ್ತೆ, ಜಕ್ಕೂರು ಮುಖ್ಯರಸ್ತೆ, ದಸರಹಳ್ಳಿ ಮುಖ್ಯರಸ್ತೆ, ಭುವನೇಶ್ವರಿ ನಾಗರ ಮತ್ತು ಎಂಎಲ್ ಪುರಂ 2ನೇ ಹಂತದಲ್ಲಿ ಕರೆಂಟ್ ಇರುವುದಿಲ್ಲ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಉತ್ತರಹಳ್ಳಿ ರಸ್ತೆ, ಕೋನಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಪಟಂಗಿರಿ, ಬಿಎಚ್‌ಇಎಲ್ ಲೇಔಟ್, ಹರ್ಷಾ ಲೇಔಟ್, ವಿದ್ಯಾಪೀಠ ರಸ್ತೆ, ಹೊಸಹಳ್ಳಿ ರಸ್ತೆ, ಅಂದ್ರಹಳ್ಳಿ ಮುಖ್ಯರಸ್ತೆ, ಉಳ್ಳಾಲ ನಗರ, ಮಾರುತಿ ನಗರ, ಬಿಡಿಎ ಏರಿಯಾ ಬ್ಲಾಕ್ -1, ಭುವನೇಶ್ವರ ನಗರ ಮತ್ತು ದೊಡ್ಡ ಬಸ್ತಿ ನಗರ ಸೇರಿವೆ. ಮುಖ್ಯ ರಸ್ತೆಯಲ್ಲಿ ಪವರ್ ಕಟ್ ಇರಲಿದೆ.

ಜನವರಿ 29ರಂದು ಪವರ್ ಕಟ್ ಇರುವ ಏರಿಯಾಗಳಿವು:

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಒಕ್ಕಲಿಗರ ಸಂಘ, ಜೆಸಿ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಅಶ್ವಥ್ ನಗರ ಮತ್ತು ಶ್ರೀನಗರದಲ್ಲಿ ಪವರ್ ಕಟ್ ಇರಲಿದೆ.

ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ಕಡಿತಗೊಳಿಸಲಾಗುವುದು. ಕಸ್ತೂರಿ ನಗರ, ಸದಾನಂದ ನಗರ ಮತ್ತು ಕೆಜಿ ಪುರ ಮುಖ್ಯ ರಸ್ತೆಯಲ್ಲಿ ಪವರ್ ಕಟ್ ಇರಲಿದೆ. ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ರಾಮಚಂದ್ರಾಪುರ ಗ್ರಾಮ, ಪೀಣ್ಯ ಕೈಗಾರಿಕಾ ಪ್ರದೇಶದ ಕೆಲವು ಭಾಗಗಳು, ಪೀಣ್ಯ, ಕಂಠೀರವ ಸ್ಟುಡಿಯೋ ಬಳಿ ಮತ್ತು ಲಗ್ಗೆರೆ ಭಾಗಗಳಲ್ಲಿ ಪವರ್ ಕಟ್ ಇರಲಿದೆ. ಬೆಂಗಳೂರಿನ ಪಶ್ಚಿಮ ವಲಯದಲ್ಲಿ ನಾಳೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಕಡಿತವಾಗಲಿದೆ. ಭೈರವೇಶ್ವರ ಕೈಗಾರಿಕಾ ರಸ್ತೆ, ತಿಮ್ಮಪ್ಪ ರಸ್ತೆ, ಡಿ ಗ್ರೂಪ್ ಲೇಔಟ್ ಮತ್ತು ವೀರಭದ್ರೇಶ್ವರ ನಗರದಲ್ಲಿ ಶನಿವಾರ ಪವರ್ ಕಟ್ ಇರಲಿದೆ.

 ನೇಣಿಗೆ ಕೊರಳೊಡ್ಡಿದ 7ತಿಂಗಳ ಗರ್ಭಿಣಿ

ನೇಣಿಗೆ ಕೊರಳೊಡ್ಡಿದ 7ತಿಂಗಳ ಗರ್ಭಿಣಿ

ನೇಣಿಗೆ ಕೊರಳೊಡ್ಡಿದ 7ತಿಂಗಳ ಗರ್ಭಿಣಿ

ರಾಮನಗರ; ಗಂಡನ ಹಾಗೂ ಆತನ ಕುಟುಂಬದ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ 7 ತಿಂಗಳ ಗರ್ಭಿಣಿಯಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಗಂಡನ ಮನೆಯವರ ಕ್ರೌರ್ಯಕ್ಕೆ ಬಲಿಯಾದ 23ರ ಹರೆಯದ ಹುಡುಗಿ ಹೆಸರು ಜಾಹ್ನವಿ. ಈಕೆ  ರಾಮನಗರದ ಮಂಜುನಾಥ ನಗರ ಬಡಾವಣೆಯ ನಿವಾಸಿ ಚನ್ನೇಗೌಡ, ಗೀತಾ ದಂತಿಗಳ ಪುತ್ರಿ.

'ನನ್ನಂತ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿ' ಎಂದು ಡೆತ್‌ ನೋಟ್ ಬರೆದಿಟ್ಟು 7 ಗರ್ಭಿಣಿ ಜಾಹ್ನವಿ ತನ್ನ ತವರು ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾಳೆ. ಸುಂದರ ಸಂಸಾರ ನಡೆಸುತ್ತಾ ಗಂಡನೊಂದಿಗೆ ಬದುಕು ಕಟ್ಟಿಕೊಳ್ಳುವ ಮಹದಾಸೆ ಇಟ್ಟುಕೊಂಡಿದ್ದ ಸಾವಿಗೆ ಶರಣಾಗಿದ್ದಾಳೆ.

ಪತಿ, ಆತನ ಮನೆಯವರ ಕಿರುಕುಳ ತಾಳಲಾಗದೇ ಒಂದು ತಿಂಗಳ ಹಿಂದಷ್ಟೇ ತವರು ಮನೆ ಸೇರಿಕೊಂಡಿದ್ದಳು ಜಾಹ್ನವಿ. ತವರಿಗೆ ಬಂದ ನಂತರವೂ ಪತಿ ಕರ್ಣನ ಕುಚೇಷ್ಟೆ ಹೆಚ್ಚಾಗಿತ್ತು. ಇತರೆ ಮಹಿಳೆಯರ ಜೊತೆ ನಗ್ನ ವಿಡಿಯೋ ಚಾಟಿಂಗ್ ಮಾಡುತ್ತಿದ್ದ, ಜಾಹ್ನವಿ ಅಶ್ಲೀಲ ವಿಡಿಯೋ, ಫೋಟೋ ಇಟ್ಟುಕೊಂಡು ಮತ್ತಷ್ಟು ವರದಕ್ಷಿಣೆ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಡೆತ್ ನೋಟ್ ಬರೆದಿಟ್ಟು ಜಾಹ್ನವಿ ನೇಣು ಹಾಕಿಕೊಂಡಿದ್ದಾಳೆ.

ಕಳೆದ 9 ತಿಂಗಳ ಹಿಂದೆ ಮನೆಯವರು ಒಪ್ಪಿದ್ದಂತೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಕರ್ಣ ಎಂಬುವವನ ಜತೆ ಜಾಹ್ನವಿ ವಿವಾಹವಾಗಿತ್ತು. ಇನ್ನು ಸಂಸಾರದ ಹಲವು ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದ ಜಾಹ್ನವಿಗೆ ಮನ ಬಂದಂತೆ ಥಳಿಸಿ ಪತಿ, ಮಾವ ಬೋರೆಗೌಡ, ಅತ್ತೆ ಸವಿತಾ ಸೇರಿಕೊಂಡು ಕಿರುಕುಳ ಕೊಡುತ್ತಿದ್ದರು ಎಂದು ಜಾಹ್ನವಿ ಪೋಷಕರು ಆರೋಪಿಸಿದ್ದಾರೆ.

ಇದೇ ವಿಚಾರವಾಗಿ ಹಲವು ಬಾರಿ ನ್ಯಾಯ ಪಂಚಾಯಿತಿ ಕೂಡ ನಡೆದಿತ್ತು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕರ್ಣ ಬೇರೆ ಮಹಿಳೆಯರ ಜೊತೆ ಸ್ನೇಹ ಬೆಳಸಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನಲ್ಲದೇ ವಾಟ್ಸಾಪ್‌ನಲ್ಲಿ ನಗ್ನ ಚಾಟಿಂಗ್ ಮಾಡುತ್ತಿದ್ದ ವಿಕೃತ ವ್ಯಕ್ತಿಯಾಗಿದ್ದ ಎಂದುಮೃತ ಜಾಹ್ನವಿ ಸಂಬಂಧಿಕರು ಆರೋಪಿಸಿದ್ದಾರೆ.

ಮೃತ ಜಾಹ್ನವಿ ಇಂಜಿನಿಯರಿಂಗ್ ಪದವಿಯ ಕಡೆಯ ವರ್ಷ ವ್ಯಾಸಂಗ ಮಾಡುತ್ತಿದ್ದಳು. ಅಲ್ಲದೇ ಆಕೆಯ ತಾಯಿ ಅಗ್ನಿ ಶಾಮಕ ಇಲಾಖೆಯಲ್ಲಿ ಎಸ್.ಡಿ.ಎ ಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಇದನೆಲ್ಲಾ ತಿಳಿದ ಕರ್ಣ ಲಕ್ಷ ಲಕ್ಷ ಹಣ ತಂದುಕೊಡುವಂತೆ ಕಿರುಕುಳ ನೀಡುತ್ತಿದ್ದ ಅಲ್ಲದೇ ಸಿಗರೇಟ್‌ನಿಂದ ಸುಟ್ಟು ಜಾಹ್ನವಿಗೆ ಚಿತ್ರಹಿಂಸೆ ನೀಡುತ್ತಿದ್ದನಂತೆ.

ಹಣ ತಂದುಕೊಡದಿದ್ದರೆ ನಿನ್ನ ಅಶ್ಲೀಲ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಬೆದರಿಕೆ ಹಾಕಿದ್ದ ಕರ್ಣ ಹಾಗೂ ಕಿರುಕುಳ ನೀಡಿದ ಆತನ ಮನೆಯವರಿಗೆ ಶಿಕ್ಷೆಯಾಗಬೇಕೆಂದು ಮೃತಳ ಸೋದರ ಮಾವ ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.

ಇನ್ನು ಪದವಿ ಮುಗಿಸಿ ಇನ್ನೇನು ಒಂದೆರಡು ತಿಂಗಳಲ್ಲಿ ಮಗು ಗಂಡನ ಜತೆಯಲ್ಲಿ ಸುಖವಾಗಿ ಬಾಳಬೇಕೆಂದು ಜಾಹ್ನವಿ ಅಂದುಕೊಂಡಿದ್ದಳು. ಈ ನಿಟ್ಟಿನಲ್ಲಿ ಹಲವು ಬಾರಿ ಗಂಡನೊಂದಿಗೆ ಅನ್ಯೋನ್ಯವಾಗಿ ಇರಬೇಕು ಎಂದು ಪ್ರಯತ್ನ ಸಹ ಪಟ್ಟಿದ್ದಳಂತೆ. ಆದರೆ ಆತನ ಕಿರುಕುಳ ಹಾಗೂ ಕೊಂಕು ಮಾತುಗಳಿಂದ ಜಾಹ್ನವಿ ಬೇಸತ್ತು ಹೋಗಿದ್ದಳು. ಇದರಿಂದಾಗಿ ನೇಣಿಗೆ ಕೊರಳೊಡ್ಡಿದ್ದಾಳೆ.


ಚನ್ನಣ್ಣನವರ್, ಸೆಂಟ್ರಲ್ ಜೈಲ್ ಎಸ್ ಪಿ ಸೇರಿ ಹಲವು ಐಪಿಎಸ್ ಗಳ ವರ್ಗಾವಣೆ

ಚನ್ನಣ್ಣನವರ್, ಸೆಂಟ್ರಲ್ ಜೈಲ್ ಎಸ್ ಪಿ ಸೇರಿ ಹಲವು ಐಪಿಎಸ್ ಗಳ ವರ್ಗಾವಣೆ

ಚನ್ನಣ್ಣನವರ್, ಸೆಂಟ್ರಲ್ ಜೈಲ್ ಎಸ್ ಪಿ ಸೇರಿ ಹಲವು ಐಪಿಎಸ್ ಗಳ ವರ್ಗಾವಣೆ

ಬೆಂಗಳೂರು: ಸಿಐಡಿ ಎಸ್ ಪಿ ರವಿ ಡಿ ಚನ್ನಣ್ಣನವರ್ , ಬೆಂಗಳೂರು ಸೆಂಟ್ರಲ್ ಜೈಲ್ ಎಸ್ ಪಿ ಟಿ.ಪಿ.ಶಿವಕುಮಾರ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳನ್ನು ಗುರುವಾರ ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಪ್ರಮುಖವಾಗಿ ಖಡಕ್ ಅಧಿಕಾರಿ ಎನಿಸಿಕೊಂಡು ಮತ್ತು ವಾಗ್ಮಿಯಾಗಿ ಹೆಸರು ಗಳಿಸಿದ್ದ ಚನ್ನಣ್ಣನವರ್ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು.

ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದರು.ಈಗ ಎಸ್ ಪಿ ಅವರನ್ನು ವರ್ಗಾವಣೆ ಮಾಡಿ ಸರಕಾರ ಬಿಸಿ ಮುಟ್ಟಿಸಿದೆ.

ಚನ್ನಣ್ಣನವರ್ ಅವರನ್ನು ಮುಂದಿನ ಆದೇಶದ ವರೆಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿಯನ್ನಾಗಿ ನೇಮಕ ಮಾಡಲಾಗಿದೆ.

ಟಿ.ಪಿ.ಶಿವಕುಮಾರ್ ಅವರನ್ನು ಚಾಮರಾಜನಗರ ಎಸ್ ಪಿ ಆಗಿ ನೇಮಕ ಮಾಡಲಾಗಿದೆ. ಚಾಮರಾಜನಗರ ಎಸ್ ಪಿ ಯಾಗಿದ್ದ ದಿವ್ಯಸಾರ ಥಾಮಸ್ ಅವರನ್ನು ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

ಸಿಐಡಿ ಯಲ್ಲಿದ್ದ ಡಾ. ಭೀಮಾಶಂಕರ ಗುಳೇದ್ ಅವರನ್ನು ಬೆಂಗಳೂರು ಪೂರ್ವ ಡಿಸಿಪಿ ಯಾಗಿ ವರ್ಗಾವಣೆ ಮಾಡಲಾಗಿದೆ.

ಡೆಕ್ಕಾ ಕಿಶೋರ್ ಬಾಬು ಅವರನ್ನು ಬೀದರ್ ಎಸ್​ಪಿ ಆಗಿ ನೇಮಿಸಿದ್ದು, ಬೀದರ್ ಎಸ್​ಪಿ ಆಗಿದ್ದ ಡಿ.ಎಲ್. ನಾಗೇಶ್ ಅವರನ್ನು ಸಿಐಡಿ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

ಮೈಸೂರು ಎಸಿಬಿ ಯಲ್ಲಿದ್ದ ಅರುಣಾಂಗ್ಶು ಗಿರಿ ಅವರನ್ನು ಕೊಪ್ಪಳ ಎಸ್ ಪಿ ಯಾಗಿ, ಎಸಿಬಿಯಲ್ಲಿದ್ದ ಅಬ್ದುಲ್ ಅಹಾದ್ ರನ್ನು ಕೆ ಎಸ್‌ಆರ್‌ಟಿಸಿ ನಿರ್ದೇಶಕರನ್ನಾಗಿ, ಕೊಪ್ಪಳ ಎಸ್ ಪಿ ಯಾಗಿದ್ದ ಟಿ. ಶ್ರೀಧರ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್​ಪಿಯಾಗಿ ನೇಮಕ ಮಾಡಲಾಗಿದೆ.


ವಾರದಲ್ಲಿ 5 ದಿನ ಆದೇಶ ವಾಪಾಸ್ ಪಡೆದ ರಾಜ್ಯ ಸರ್ಕಾರ:

ವಾರದಲ್ಲಿ 5 ದಿನ ಆದೇಶ ವಾಪಾಸ್ ಪಡೆದ ರಾಜ್ಯ ಸರ್ಕಾರ:


ವಾರದಲ್ಲಿ 5 ದಿನ ಆದೇಶ ವಾಪಾಸ್ ಪಡೆದ ರಾಜ್ಯ ಸರ್ಕಾರ: 

ಬೆಂಗಳೂರು: ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಿ, ಶನಿವಾರದಂದು ರಜೆ ಘೋಷಣೆ ಮಾಡಲಾಗಿತ್ತು.

ವೀಕೆಂಡ್ ಕರ್ಪ್ಯೂ ರದ್ದುಗೊಂಡ ಕಾರಣ, ಈಗ ಆ ಆದೇಶವನ್ನು ವಾಪಾಸ್ ಪಡೆಯಲಾಗಿದೆ. ಹೀಗಾಗಿ ಇನ್ಮುಂದೆ ವಾರದ 6 ದಿನ ರಜೆ ಮಾಡುವಂತೆ ತಿಳಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸ್ಪಷ್ಟೀಕರಣ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ದಿನಾಂಕ 04-01-2022ರಂದು ಎಲ್ಲಾ ಕಚೇರಿಗಳು ವಾರದಲ್ಲಿ ಐದು ದಿನ ಸೋಮವಾರದಿಂದ ಶುಕ್ರವಾರದ ವರೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿತ್ತು. ಈ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ವಾರಾಂತ್ಯದಲ್ಲಿ ಎಲ್ಲಾ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಸುವಂತೆ ಸೂಚಿಸಿದ್ದಾರೆ. ಈ ಮೂಲಕ ವಾರದ 6 ದಿನ ಕೆಲಸ ನಿರ್ವಹಿಸೋದಕ್ಕೆ ತಿಳಿಸಲಾಗಿದೆ.

 ದೇಶದಲ್ಲಿ ಒಮಿಕ್ರಾನ್ ಉಪ ರೂಪಾಂತರ 'ಬಿಎ.2' ಹೆಚ್ಚು ಹರಡುತ್ತಿದೆ : ಕೇಂದ್ರ ಸರ್ಕಾರ ಕಳವಳ

ದೇಶದಲ್ಲಿ ಒಮಿಕ್ರಾನ್ ಉಪ ರೂಪಾಂತರ 'ಬಿಎ.2' ಹೆಚ್ಚು ಹರಡುತ್ತಿದೆ : ಕೇಂದ್ರ ಸರ್ಕಾರ ಕಳವಳ


 ದೇಶದಲ್ಲಿ ಒಮಿಕ್ರಾನ್ ಉಪ ರೂಪಾಂತರ 'ಬಿಎ.2' ಹೆಚ್ಚು ಹರಡುತ್ತಿದೆ : ಕೇಂದ್ರ ಸರ್ಕಾರ ಕಳವಳ

ನವದೆಹಲಿ : ಕೋವಿಡ್-19ರ ಮೂರನೇ ಅಲೆಯಲ್ಲಿ ಭಾರತ ಹೋರಾಡುತ್ತಿರುವಂತೆಯೇ, ಕೇಂದ್ರ ಸರ್ಕಾರ ಗುರುವಾರ ಒಮಿಕ್ರಾನ್ ಉಪ ರೂಪಾಂತರ ಬಿಎ.2(Omicron sub-variant BA.2) ದೇಶದಲ್ಲಿ ಈಗ ಹೆಚ್ಚು ಪ್ರಚಲಿತದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ದೇಶದ ಕೋವಿಡ್-19 ಪರಿಸ್ಥಿತಿಯ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯ ಈ ಮಾಹಿತಿ ನೀಡಿದೆ.

ಇನ್ನು ಈ ಬಗ್ಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ನಿರ್ದೇಶಕ ಡಾ. ಸುಜೀತ್ ಕುಮಾರ್ ಸಿಂಗ್ ಅವರು ಮಾತನಾಡುತ್ತಿದಾಗ, ಒಮಿಕ್ರಾನ್ ಉಪ ರೂಪಾಂತರ ಬಿಎ.2(Omicron sub-variant BA.2) ದೇಶದಲ್ಲಿ ಈಗ ಹೆಚ್ಚು ಹರಡುತ್ತಿದೆ ಎಂದು ಹೇಳಿದರು.

ಕಳೆದ ವರ್ಷ ಡಿಸೆಂಬರ್ ನಲ್ಲಿ ಜಿನೋಮ್ ಅನುಕ್ರಮಣಿಕೆಯಲ್ಲಿ 1,292 ಒಮಿಕ್ರಾನ್ ರೂಪಾಂತರ ಪ್ರಕರಣಗಳು ಕಂಡುಬಂದಿವೆ ಎಂದು ಸರ್ಕಾರ ತಿಳಿಸಿದ್ದು, ಜನವರಿಯಲ್ಲಿ ಈ ಸಂಖ್ಯೆ 9,672ಕ್ಕೆ ಏರಿದೆ ಎಂದು ತಿಳಿಸಿದೆ.

ಹಿಂದಿನ ಏರಿಕೆಗಳಿಗೆ ಹೋಲಿಸಿದ್ರೆ ಪ್ರಸ್ತುತ ಅಲೆಯ ಸಮಯದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು ಅನುಗುಣವಾದ ಸಾವುಗಳು ತುಂಬಾ ಕಡಿಮೆ ಎಂದು ಸರ್ಕಾರ ಹೇಳಿದೆ.

ಮುನ್ನೆಚ್ಚರಿಕೆಗಳನ್ನು ಮುಂದುವರಿಸಬೇಕಾಗಿದೆ ಎಂದು ಪ್ರತಿಪಾದಿಸಿದ ಸರ್ಕಾರ, ಕೋವಿಡ್ ಪ್ರಕರಣಗಳ ಆರಂಭಿಕ ಸೂಚನೆಯನ್ನ ಕೆಲವು ಸ್ಥಳಗಳಲ್ಲಿ ವರದಿ ಮಾಡಲಾಗಿದೆ ಎಂದು ತಿಳಿಸಿದ್ದು, ಈ ಪ್ರವೃತ್ತಿಯನ್ನು ಗಮನಿಸಬೇಕಾಗಿದೆ ಎಂದು ಹೇಳಿದೆ.

ಸಕ್ರಿಯ ಕೋವಿಡ್ ಪ್ರಕರಣಗಳ ವಿಷಯದಲ್ಲಿ ಅಗ್ರ 10 ರಾಜ್ಯಗಳು ದೇಶದ ಒಟ್ಟು ಸಕ್ರಿಯ ಸೋಂಕುಗಳಲ್ಲಿ ಶೇಕಡಾ 77ಕ್ಕೂ ಹೆಚ್ಚು ಹೊಂದಿವೆ ಎಂದು ಸರ್ಕಾರ ಹೇಳಿದೆ. ಅವುಗಳೆಂದ್ರೆ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚು ದಾಖಲಿಸಲ್ಪಡುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

 'ಪಶುವೈದ್ಯರ ಹುದ್ಧೆ ನಿರೀಕ್ಷೆ'ಯಲ್ಲಿದ್ದವರಿಗೆ ಗುಡ್ ನ್ಯೂಸ್: '400 ಪಶು ವೈದ್ಯಾಧಿಕಾರಿ ಹುದ್ದೆ'ಗಳ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ

'ಪಶುವೈದ್ಯರ ಹುದ್ಧೆ ನಿರೀಕ್ಷೆ'ಯಲ್ಲಿದ್ದವರಿಗೆ ಗುಡ್ ನ್ಯೂಸ್: '400 ಪಶು ವೈದ್ಯಾಧಿಕಾರಿ ಹುದ್ದೆ'ಗಳ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ


 'ಪಶುವೈದ್ಯರ ಹುದ್ಧೆ': '400 ಪಶು ವೈದ್ಯಾಧಿಕಾರಿ ಹುದ್ದೆ'ಗಳ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ

ಬೆಂಗಳೂರು: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಾಲ್ಕುನೂರು ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಅನುಮೋದನೆ ದೊರಕಿದೆ ಎಂದು ಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ಪಶುಸಂಗೋಪನೆ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಗಳು ಸೇರಿದಂತೆ ಸಾವಿರಾರು ಹುದ್ದೆಗಳು ಖಾಲಿಯಿದ್ದು ಯಾವ ಸಚಿವರು ನೇಮಕಾತಿಗೆ ಆಸಕ್ತಿ ತೋರಿರಲಿಲ್ಲ ಎಂದು ಅವರು ಹೇಳಿದ್ದಾರೆ. ಇಲಾಖೆಯ ಅಧಿಕಾರವಹಿಸಿಕೊಂಡ ದಿನದಿಂದ ಇಲಾಖೆಯ ಹುದ್ದೆಗಳ ಭರ್ತಿಗೆ ಹೆಚ್ಚಿನ ಒತ್ತು ನೀಡಿ ನಿರಂತರ ಮುಖ್ಯಮಂತ್ರಿಗಳೊಂದಿಗೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಖಾಲಿ ಹುದ್ದೆ ಭರ್ತಿಗೆ ಕ್ರಮ ವಹಿಸಿದ್ದೆ ಎಂದು ತಿಳಿಸಿದ್ದಾರೆ.

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ‌ ವಿಳಂಭವಾದ್ದರಿಂದ ಕಳೆದ ಹಲವು ವರ್ಷಗಳಿಂದ ಹುದ್ದೆಗಳು ಖಾಲಿ ಇದ್ದು ಸಮರ್ಪಕವಾಗಿ ರೋಗ ನಿಯಂತ್ರಣ, ಪಶು ಆರೋಗ್ಯ ಸೇವೆ, ಕೃತಕ ಗರ್ಭಧಾರಣೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗುತ್ತಿತ್ತು.

ಗೋಹತ್ಯೆ ನಿಷೇಧ, ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ ಮತ್ತು ನಿರ್ವಹಣೆ, ಪ್ರಾಣಿ ಕಲ್ಯಾಣ ಸಹಾಯವಾಣಿ, ಪಶು ಸಂಜೀವಿನಿ ಅಂಬ್ಯುಲೆನ್ಸ್ ಮತ್ತು ಪಾಲಿ ಕ್ಲಿನಿಕ್ ಸೇವೆಗಳಿಗೆ ಹಿನ್ನಡೆಯಾಗುತ್ತಿತ್ತು. ಪ್ರತೀ ಬಾರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು ಸಿಬ್ಬಂದಿ ಕೊರತೆ ನೀಗಿಸಲು ಮನವಿ ಮಾಡಿಕೊಳ್ಳುತ್ತಿದ್ದರು.

ಹೊಸ ನೇಮಕಾತಿಯಿಂದ ಪಶುಪಾಲಕರಿಗೆ ರೈತರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟು ಖಾಲಿ ಇರುವ 900ಕ್ಕೂ ಹೆಚ್ಚು ಹುದ್ದೆಗಳ ಪೈಕಿ 400 ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆಯ ಮೂಲಕ ಪ್ರಸ್ತಾವನೆಗೆ ಸಹಮತಿ ಪಡೆಯಲಾಗಿತ್ತು. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದ್ದು ತಕ್ಷಣ ಅಧಿಸೂಚನೆ ಹೊರಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ಸಂಪುಟ ಸಹೋದ್ಯೋಗಿ ಸಚಿವರುಗಳಿಗೆ ಮತ್ತು ಇಲಾಖಾ ಹಿರಿಯ ಅಧಿಕಾರಿಗಳಿಗೆ ಪಶುಸಂಗೋಪನಾ ಸಚಿವರಾದ ಪ್ರಭು ಚವ್ಹಾಣ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

 ಉಡುಪಿ ಸ್ಕಾರ್ಫ್ ವಿವಾದ: ಸುನ್ನೀ ಸಂಘಟನೆಗಳಿಂದ ಶಾಸಕರ ಭೇಟಿ

ಉಡುಪಿ ಸ್ಕಾರ್ಫ್ ವಿವಾದ: ಸುನ್ನೀ ಸಂಘಟನೆಗಳಿಂದ ಶಾಸಕರ ಭೇಟಿ


 ಉಡುಪಿ ಸ್ಕಾರ್ಫ್ ವಿವಾದ: ಸುನ್ನೀ ಸಂಘಟನೆಗಳಿಂದ ಶಾಸಕರ ಭೇಟಿ

 ಉಡುಪಿ ಸ್ಕಾರ್ಫ್ ವಿವಾದವನ್ನು ಆಯಾಯ ಧರ್ಮದ ಸಂಸ್ಕೃತಿಗಳಿಗೆ ಚ್ಯುತಿ ಬಾರದಂತೆ ಆದಷ್ಟು ಶೀಘ್ರದಲ್ಲಿ ಶಾಂತಿಯುತವಾದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ

ಶಾಶ್ವತ ಪರಿಹಾರ ಮಾಡಬೇಕು, ಈ ಸಮಸ್ಯೆ ಆಗಬಾರದಿತ್ತು ಆಗಿದೆ ಮರುಗಳಿಸದಂತೆ ನಿಗಾ ವಹಿಸಬೇಕು ಎಂದು ಉಡುಪಿ  ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟವು ಸ್ಥಳೀಯ ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರನ್ನು ಬೇಟಿ ನೀಡಿ ವಿಚಾರ ವಿನಿಮಯ ನಡೆಸಿ ಉಡುಪಿ ಜಿಲ್ಲಾ ಸಹಾಯಕ ಖಾಝಿ, ಸುನ್ನೀ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಅಲ್ಹಾಜ್ ಬಿ.ಕೆ ಅಬ್ದುರ್ರಹ್ಮಾನ್ ಮದನಿ ಮೂಳೂರುರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

 ಜಿಲ್ಲಾ ಸಂಘಟನೆಗಳ ಕಾರ್ಯದರ್ಶಿ ಕೆ.ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ನೇಜಾರು, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಬಿ.ಎಸ್.ಎಫ್ ರಫೀಕ್ ಗಂಗೊಳ್ಳಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಹಾಜಿ ಕೆ.ಪಿ ಇಬ್ರಾಹಿಂ ಮಟಪಾಡಿ, ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮನ್ಸೂರ್ ಕೋಡಿ, ಎಸ್.ಡಿ.ಐ ಜಿಲ್ಲಾ ನಾಯಕ ಸುಬ್ಹಾನ್ ಅಹ್ಮದ್ ಹೊನ್ನಾಳ ಹಾಗೂ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಮ್.ಎ ಬಾವು ಮೂಳೂರು ನಿಯೋಗದಲ್ಲಿದ್ದರು.

 'ಈ ಬಾರಿ ಶಾಲಾ ಮಕ್ಕಳಿಗೆ ಹಾಜರಾತಿ ಕಡ್ಡಾಯವಲ್ಲ' : ಸಚಿವ ನಾಗೇಶ್

'ಈ ಬಾರಿ ಶಾಲಾ ಮಕ್ಕಳಿಗೆ ಹಾಜರಾತಿ ಕಡ್ಡಾಯವಲ್ಲ' : ಸಚಿವ ನಾಗೇಶ್


 'ಈ ಬಾರಿ ಶಾಲಾ ಮಕ್ಕಳಿಗೆ ಹಾಜರಾತಿ ಕಡ್ಡಾಯವಲ್ಲ' : ಸಚಿವ ನಾಗೇಶ್

ಬೆಂಗಳೂರು: ಈ ವರ್ಷ ಶಾಲಾ ಮಕ್ಕಳಿಗೆ ಹಾಜರಾತಿ ಕಡ್ಡಾಯ ಇಲ್ಲ ಹಾಗೂ ಯಾವ ಮಕ್ಕಳಿಗೂ ಶಾಲೆಗೆ ಬರಲು ಬಲವಂತ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಮಕ್ಕಳಿಗೆ ಹಾಜರಾತಿ ಕಡ್ಡಾಯ ಇಲ್ಲ.

ಪರೀಕ್ಷೆಗೂ 75% ಹಾಜರಾತಿ ಕಡ್ಡಾಯ ಮಾಡುವುದಿಲ್ಲ. ಎಸ್‌ಎಸ್‌ಎಲ್ ಮತ್ತು ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದರು.

ಇನ್ನು ಬೆಂಗಳೂರಿನಲ್ಲಿ 1 ರಿಂದ 9 ನೇ ತರಗತಿಯ ಬಗ್ಗೆ ತಜ್ಞರ ಸಲಹೆ ಮೇರೆಗೆ ಶಾಲೆ ಆರಂಭದ ಕುರಿತು ನಿರ್ಧಾರ ಮಾಡುತ್ತೇವೆ. ತಜ್ಞರು ಒಪ್ಪಿಗೆ ನೀಡಿದರೆ ಸೋಮವಾರದಿಂದ ಶಾಲೆ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ.


 ಎಸ್ಸೆಸ್ಸೆಫ್ ಪಾಟ್ರಕೋಡಿ ಯೂನಿಟ್: ನೂತನ ಸಾರಥಿಗಳ ಆಯ್ಕೆ

ಎಸ್ಸೆಸ್ಸೆಫ್ ಪಾಟ್ರಕೋಡಿ ಯೂನಿಟ್: ನೂತನ ಸಾರಥಿಗಳ ಆಯ್ಕೆ

 

ಎಸ್ಸೆಸ್ಸೆಫ್ ಪಾಟ್ರಕೋಡಿ ಯೂನಿಟ್: ನೂತನ ಸಾರಥಿಗಳ ಆಯ್ಕೆ

   ಎಸ್ಸೆಸ್ಸೆಫ್ ಪಾಟ್ರಕೋಡಿ ಯೂನಿಟ್ ಕೌನ್ಸಿಲ್, ದಿನಾಂಕ 26-01-2022 ಬುಧವಾರ ಸಂಜೆ 7:30ಕ್ಕೆ ತಾಜುಲ್ ಉಲಮಾ ಸುನ್ನಿ ಸೆಂಟರ್ ನಲ್ಲಿ ನಡೆಯಿತು. SYS ಮಾಣಿ ಸೆಂಟರ್ ಅಧ್ಯಕ್ಷರಾದ ಸುಲೈಮಾನ್ ಸದಿ ಉದ್ಘಾಟಿಸಿದರು.

     ಕೆ.ಸಿ.ಎಫ್ ನಾಯಕರಾದ ರಶೀದ್ ಸಖಾಫಿ ತರಗತಿ ಮಂಡಿಸಿದರು. ನಂತರ ನೂತನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಲೀಮ್ ಕೆತ್ತೆಪುಲಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್ ಸಫ್ವಾನ್, ಕೋಶಾಧಿಕಾರಿಯಾಗಿ ಖಲಂದರ್ ಶಾಫಿ ಮಿತ್ತಪಡ್ಪು, ಕ್ಯಾಂಪಸ್ ಕಾರ್ಯದರ್ಶಿಯಾಗಿ  ನಾಫಿ ಟಿ, ಮೀಡಿಯಾ ಕಾರ್ಯದರ್ಶಿ ಯಾಗಿ ಅಜಾದ್, ದವಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ನವವಿ, ರೈಂಬೂ ಕಾರ್ಯದರ್ಶಿಯಾಗಿ ಆಶೀಖ್ ಪಿ, ಪಬ್ಲಿಕೇಶನ್ ಕಾರ್ಯದರ್ಶಿ ಯಾಗಿ ಸಲಾವುದ್ದೀನ್ ಕೆಎಸ್, ಕಲ್ಚರ್ ಕಾರ್ಯದರ್ಶಿ ಯಾಗಿ ಬಿಎಚ್ ನಿಝಾಮ್, ವಿಝ್ಡಾಮ್ ಕಾರ್ಯದರ್ಶಿ ಯಾಗಿ ನಿಶಾದ್ ಕೆ.ಪಿ, ಸೆಕ್ಟರ್ ಕೌನ್ಸಿರ್ ರಾಗಿ ನೌಶೀರ್, ಬಿಎಚ್ ನಿಝಾಮ್, ಸಲಾವುದ್ದೀನ್ ಕೆಎಸ್, ಸೈಯದ್ ಸಾಬಿತ್ ಸಖಾಫಿ ಅಲ್ ಮುಈನಿ,ಸಾಬಿತ್ ಕೆ.ಪಿ, ಕೆ.ಪಿ ಖಲಂದರ್ ಶಾಫಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುವಾಝ್ ಎಂ, ತಾಜುದ್ದೀನ್, ಶಾಕೀರ್ , ನವಾಝ್ ಕೆ., ಷರೀಫ್ ಕುದುಂಬ್ಲಾಡಿ, ಸ್ವಾಲಿಹ್, ಅಝಾಮ್,ಅಫ್ರೀದ್,‌ ಅಕ್ಮಲ್, ಝಾಮ್ಮಿಲ್ ಟಿ. ಇವರನ್ನು ಆಯ್ಕೆ ಮಾಡಲಾಯಿತು. 

     ಸಭೆಯಲ್ಲಿ ವೀಕ್ಷಕರಾಗಿ ಆಗಮಿಸಿದ ಮಾಣಿ ಸೆಕ್ಟರ್ ಕಾರ್ಯದರ್ಶಿಯಾದ ನೌಫಲ್ ಪೇರಮೊಗರ್, ಸೆಕ್ಟರ್ ಕೋಶಾಧಿಕಾರಿಯಾದ ಅನ್ಸಾರ್ ಸತ್ತಿಕಲ್ಲು, ಕೆಸಿಎಫ್ ನಾಯಕರಾದ ನಾಸೀರ್ ಬಿಎಚ್ ,SYS ಕೋಶಾಧಿಕಾರಿಯಾದ ಕಾಸಿಮ್ ಕೆ.ಪಿ, ಹಾಗೂ ತಾಜುಲ್ ಉಲಮಾ ಸುನ್ನಿ ಸೆಂಟರ್ ಅಧ್ಯಕ್ಷರಾದ ಕೆ.ಬಿ ಮುಹಮ್ಮದ್, SYS ನಾಯಕರಾದ ಕೆ.ಎಸ್ ಯೂಸುಫ್,ಟಿ ಷರೀಫ್, ರಫೀಕ್ ಮದನಿ, ಯವರು ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು, ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಸಾಜಿದ್ ಎಂ SYS ಗೆ ಸದಸ್ಯರಾದರು.. ಕಾರ್ಯಕ್ರಮದಲ್ಲಿ SSF ಹಾಗೂ SYS ನ ಹಲವು ಕಾರ್ಯಕರ್ತರು ಹಾಗೂ ನಾಯಕರು ಉಪಸ್ಥಿತರಿದ್ದರು. ಕೆ.ಪಿ ಖಲಂದರ್ ಶಾಫಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸಫ್ವಾನ್ ಕೆ.ಎಸ್ ಧನ್ಯವಾದ ಅರ್ಪಿಸಿದರು, ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
Wednesday, 26 January 2022

7 ಕೋಟಿ ರೂ. ಮುಖಬೆಲೆಯ ನಕಲಿ ನೋಟು ವಶ

7 ಕೋಟಿ ರೂ. ಮುಖಬೆಲೆಯ ನಕಲಿ ನೋಟು ವಶ

7 ಕೋಟಿ ರೂ. ಮುಖಬೆಲೆಯ ನಕಲಿ ನೋಟು ವಶ

ಮುಂಬೈ: ನಕಲಿ ನೋಟುಗಳನ್ನು ಮುದ್ರಿಸಿ ವಿತರಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಬೇಧಿಸಿರುವ ಮುಂಬೈ ಪೊಲೀಸರು ಏಳು ಕೋಟಿ ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡು ಏಳು ಮಂದಿಯನ್ನು ಈ ಸಂಬಂಧ ಬಂಧಿಸಿದ್ದಾರೆ.

ಖಚಿತ ಮಾಹಿತಿಯ ಆಧಾರದಲ್ಲಿ ಮುಂಬೈ ಕ್ರೈಂಬ್ರಾಂಚ್‌ನ 11ನೇ ಘಟಕದ ಅಧಿಕಾರಿಗಳು ದಹಿಸಾರ್ ಚೆಕ್‌ಪೋಸ್ಟ್ ಬಳಿ ಕಾರೊಂದನ್ನು ಬೆನ್ನಟ್ಟಿ ಹಿಡಿದು ಈ ಅಪಾರ ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾರಿನಲ್ಲಿ ಇದ್ದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದಾಗ ಈ ಜಾಲದ ಬಗ್ಗೆ ಮಾಹಿತಿ ದೊರಕಿತು ಎಂದು ಪೊಲೀಸರು ಹೇಳಿದ್ದಾರೆ.

ಕಾರಿನಲ್ಲಿ ಶೋಧನೆ ನಡೆಸಿದಾಗ ಪೊಲೀಸರಿಗೆ 2000 ರೂ. ಮುಖಬೆಲೆಯ 5 ಕೋಟಿ ರೂ. ಮೊತ್ತದ 250 ಬಂಡಲ್‌ಗಳು ಸಿಕ್ಕಿದವು. ನಾಲ್ಕು ಮಂದಿಯ ವಿಚಾರಣೆ ನಡೆಸಿದಾಗ ಮತ್ತೆ ಮೂವರು ಸಹಚರರ ಬಗ್ಗೆ ಮಾಹಿತಿ ದೊರಕಿತು ಎಂದು ಪೊಲೀಸರು ವಿವರಿಸಿದ್ದಾರೆ. ಬಳಿಕ ಪೊಲೀಸರು ಅಂಧೇರಿ (ಪಶ್ಚಿಮ) ಉಪನಗರದ ಹೋಟೆಲ್ ಒಂದರ ಮೇಲೆ ದಾಳಿ ನಡೆಸಿ 2 ಕೋಟಿ ರೂ. ಮುಖಬೆಲೆಯ 100 ಬಂಡಲ್‌ಗಳನ್ನು ವಶಪಡಿಸಿಕೊಂಡರು.

ಈ ನಕಲಿ ನೋಟುಗಳ ಜತೆ ಲ್ಯಾಪ್‌ ಟಾಪ್, ಏಳು ಮೊಬೈಲ್ ಫೋನ್‌ಗಳು, 28,170 ರೂ. ನೋಟುಗಳು, ಆಧಾರ್ ಮತ್ತು ಪಾನ್‌ಕಾರ್ಡ್, ಚಾಲನಾ ಲೈಸನ್ಸ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಅಂತರರಾಜ್ಯ ಜಾಲ ಎನ್ನುವುದು ತನಿಖೆಯ ವೇಳೆ ದೃಢಪಟ್ಟಿದೆ ಎಂದು ಡಿಸಿಪಿ ಸಂಗ್ರಾಮ್‌ ಸಿಂಗ್ ನಿಶಂದಾರ್ ಹೇಳಿದ್ದಾರೆ.


ʻಆಂಧ್ರಪ್ರದೇಶʼದಲ್ಲಿ 13 ಹೊಸ ಜಿಲ್ಲೆಗಳನ್ನು ರಚಿಸಿದ ಜಗನ್ ರೆಡ್ಡಿ ಸರ್ಕಾರ

ʻಆಂಧ್ರಪ್ರದೇಶʼದಲ್ಲಿ 13 ಹೊಸ ಜಿಲ್ಲೆಗಳನ್ನು ರಚಿಸಿದ ಜಗನ್ ರೆಡ್ಡಿ ಸರ್ಕಾರ


ʻಆಂಧ್ರಪ್ರದೇಶʼದಲ್ಲಿ 13 ಹೊಸ ಜಿಲ್ಲೆಗಳನ್ನು ರಚಿಸಿದ ಜಗನ್ ರೆಡ್ಡಿ ಸರ್ಕಾರ

ಹೈದರಾಬಾದ್: ಆಂಧ್ರಪ್ರದೇಶ (AP) ಸರ್ಕಾರವು ಎಪಿ ಜಿಲ್ಲೆಗಳ ರಚನೆ ಕಾಯ್ದೆ, ಸೆಕ್ಷನ್ 3(5) ಅಡಿಯಲ್ಲಿ ರಾಜ್ಯದಲ್ಲಿ 13 ಹೊಸ ಜಿಲ್ಲೆಗಳನ್ನು ಸೇರಿಸಿದೆ. ಇದರ ಸೇರ್ಪಡೆಯೊಂದಿಗೆ ಆಂಧ್ರ ಪ್ರದೇಶವು ಶೀಘ್ರದಲ್ಲೇ ಒಟ್ಟು 26 ಜಿಲ್ಲೆಗಳನ್ನು ಪಡೆಯಲಿದೆ.

ಹೊಸ ಜಿಲ್ಲೆಗಳ ರಚನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಕರಡು ಅಧಿಸೂಚನೆಯನ್ನು ಬುಧವಾರ ಹೊರಡಿಸಿದೆ.

ಮುಖ್ಯ ಕಾರ್ಯದರ್ಶಿ ಸಮೀರ್ ಶರ್ಮಾ ಮಾತನಾಡಿ, 'ಸರ್ಕಾರವು ಉತ್ತಮ ಆಡಳಿತ ಮತ್ತು ಸಂಬಂಧಪಟ್ಟ ಪ್ರದೇಶಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಎಪಿ ಜಿಲ್ಲೆಗಳ (ರಚನೆ) ಕಾಯಿದೆ, 1974 ರ ಸೆಕ್ಷನ್ 3 (5) ರ ಅಡಿಯಲ್ಲಿ ಹೊಸ ಜಿಲ್ಲೆಯನ್ನು ರಚಿಸಲು ಪ್ರಸ್ತಾಪಿಸಿದೆ.' ಜಿಲ್ಲೆಯೊಳಗೆ ವಾಸಿಸುವ ನಾಗರಿಕರು ಸಹ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಕಳುಹಿಸಲು ಆಹ್ವಾನಿಸಲಾಗಿದೆ. ಇವುಗಳನ್ನು 30 ದಿನಗಳಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು.

ಭಾರತದ ಮೊದಲ ಮಹಿಳಾ ರಫೇಲ್ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ʻಶಿವಾಂಗಿ ಸಿಂಗ್ʼ… ಇವರ ಬಗೆಗಿನ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ

ಹೊಸ ಜಿಲ್ಲೆಗಳ ರಚನೆಯನ್ನು ಉಲ್ಲೇಖಿಸಿದ ರಾಜ್ಯಪಾಲ ಬಿಸ್ವಭೂಷಣ ಹರಿಚಂದನ್ ಅವರು ತಮ್ಮ ಗಣರಾಜ್ಯೋತ್ಸವ ಭಾಷಣದಲ್ಲಿ, ಈ ತೆಲುಗು ಹೊಸ ವರ್ಷದ ಯುಗಾದಿ (ಏಪ್ರಿಲ್ 2 ರಂದು ಬೀಳುವ) ವೇಳೆಗೆ ಅವು ಜಾರಿಯಲ್ಲಿರುತ್ತವೆ. 'ಜನರಿಗೆ ಹೆಚ್ಚು ಪರಿಣಾಮಕಾರಿ ಸೇವೆಗಳನ್ನು ತಲುಪಿಸಲು ಮತ್ತು ಉತ್ತಮ ಆಡಳಿತಕ್ಕಾಗಿ, ನಾವು ಯುಗಾದಿಯ ಶುಭ ದಿನದಂದು ರಾಜ್ಯದಲ್ಲಿ ಇನ್ನೂ 13 ಜಿಲ್ಲೆಗಳನ್ನು ರಚಿಸುತ್ತೇವೆ. ಎರಡು ಜಿಲ್ಲೆಗಳು ಕೇವಲ ಬುಡಕಟ್ಟು ಜನಸಂಖ್ಯೆಗೆ ಮಾತ್ರ' ಎಂದು ಹೇಳಿದರು.

ಹೊಸ ಜಿಲ್ಲೆಗಳಲ್ಲಿ ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು, ಅನಕಾಪಲ್ಲಿ, ಕಾಕಿನಾಡ, ಕೋನ ಸೀಮಾ, ಏಲೂರು, ಎನ್‌ಟಿಆರ್ ಜಿಲ್ಲೆ, ಬಾಪಟ್ಲಾ, ಪಲ್ನಾಡು, ನಂದ್ಯಾಲ್, ಶ್ರೀ ಸತ್ಯಸಾಯಿ, ಅನ್ನಮಯ್ಯ ಮತ್ತು ಶ್ರೀ ಬಾಲಾಜಿ ಜಿಲ್ಲೆಗಳು ಸೇರಿವೆ.

ಅಸ್ತಿತ್ವದಲ್ಲಿರುವ 13 ಜಿಲ್ಲೆಗಳ ಹೆಸರುಗಳಲ್ಲಿ ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣಾ, ಗುಂಟೂರು, ಪ್ರಕಾಶಂ, ನೆಲ್ಲೂರು, ಅನಂತಪುರಂ, ಕಡಪ, ಕರ್ನೂಲ್ ಮತ್ತು ಚಿತ್ತೂರು ಸೇರಿವೆ.

ಅವಿಭಜಿತ ಆಂಧ್ರಪ್ರದೇಶದಲ್ಲಿ ಕೊನೆಯ ಬಾರಿಗೆ 1979 ರಲ್ಲಿ ವಿಜಯನಗರ ಜಿಲ್ಲೆಯ ಸಂವಿಧಾನದೊಂದಿಗೆ ಹೊಸ ಜಿಲ್ಲೆಯನ್ನು ರಚಿಸಲಾಯಿತು.

ಹೊಸ ಜಿಲ್ಲೆಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ:

ರಾಜ್ಯದಲ್ಲಿ 25 ಲೋಕಸಭಾ ಕ್ಷೇತ್ರಗಳಿದ್ದು, ಪ್ರತಿಯೊಂದನ್ನು ಕಂದಾಯ ಜಿಲ್ಲೆಯನ್ನಾಗಿ ಮಾಡಬೇಕಿದೆ. ಆದಾಗ್ಯೂ, ಅದರ ಗಾತ್ರವು ತುಂಬಾ ದೊಡ್ಡದಾಗಿದೆ ಮತ್ತು ಅನೇಕ ಜಿಲ್ಲೆಗಳಲ್ಲಿ ಹರಡಿದೆ, ಬುಡಕಟ್ಟು ಪ್ರಾಬಲ್ಯವಿರುವ ಅರಕು ಲೋಕಸಭಾ ಕ್ಷೇತ್ರವನ್ನು ಎರಡು ಹೊಸ ಜಿಲ್ಲೆಗಳಾಗಿ ವಿಭಜಿಸಲಾಗುತ್ತಿದೆ.

ಎರಡು ಹೊಸ ಬುಡಕಟ್ಟು ಜಿಲ್ಲೆಗಳು ಮಾನ್ಯಂ ಆಗಿದ್ದು, ಪಾರ್ವತಿಪುರಂನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು, ತೆಲುಗು ಸ್ವಾತಂತ್ರ್ಯ ಹೋರಾಟಗಾರನ ಹೆಸರಾಂತ ಅಲ್ಲೂರಿ ಸೀತಾರಾಮ ರಾಜು ಹೆಸರನ್ನು ಪಡೆರುವಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಇತರ ಹೊಸ ಜಿಲ್ಲೆಗಳೆಂದರೆ ಅನಕಪಲ್ಲಿ (ಅಸ್ತಿತ್ವದಲ್ಲಿರುವ ವಿಶಾಖಪಟ್ಟಣಂ ಜಿಲ್ಲೆಯಿಂದ), ಕೋನಸೀಮಾ ಮತ್ತು ಕಾಕಿನಾಡ (ಪೂರ್ವ ಗೋದಾವರಿಯಿಂದ ಹೊರಗೆ), ಎಲೂರು (ಪಶ್ಚಿಮ ಗೋದಾವರಿಯಿಂದ ಹೊರಗೆ), ಎನ್‌ಟಿಆರ್ (ಕೃಷ್ಣಾದಿಂದ), ಬಾಪಟ್ಲಾ ಮತ್ತು ಪಲ್ನಾಡು (ಗುಂಟೂರಿನಿಂದ), ನಂದ್ಯಾಲ್ (ಕರ್ನೂಲ್‌ನಿಂದ), ಶ್ರೀ ಸತ್ಯ ಸಾಯಿ (ಅನಂತಪುರಮಿನಿಂದ), ಅನ್ನಮಯ್ಯ (ಕಡಪದಿಂದ) ಮತ್ತು ಶ್ರೀ ಬಾಲಾಜಿ (ಚಿತ್ತೂರಿನಿಂದ).

ಅಸ್ತಿತ್ವದಲ್ಲಿರುವ ಪೂರ್ವ ಗೋದಾವರಿ ಜಿಲ್ಲೆಯ ಪ್ರಧಾನ ಕಚೇರಿಯನ್ನು ರಾಜಮಹೇಂದ್ರವರಂಗೆ ಮತ್ತು ಪಶ್ಚಿಮ ಗೋದಾವರಿಯನ್ನು ಭೀಮಾವರಂಗೆ ಸ್ಥಳಾಂತರಿಸಲಾಗುತ್ತಿದೆ.

ಪ್ರಕ್ರಿಯೆಯು ಏಕೆ ಹೆಚ್ಚು ಸಮಯ ತೆಗೆದುಕೊಂಡಿತು?

2019 ರ ಚುನಾವಣೆಯ ಹಿಂದಿನ ಭರವಸೆಗೆ ಅನುಗುಣವಾಗಿ, ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರವು ಆಗಸ್ಟ್ 2020 ರಲ್ಲಿ ಜಿಲ್ಲಾ ಮರುಸಂಘಟನೆ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಆದಾಗ್ಯೂ, ಮುಂಬರುವ ಜನಗಣತಿ ಕಾರ್ಯಾಚರಣೆಗಳು ಮತ್ತು ಭೌಗೋಳಿಕ ಗಡಿಗಳನ್ನು ಮರುವಿನ್ಯಾಸಗೊಳಿಸುವ ನಿಷೇಧದಿಂದಾಗಿ ಅದು ಮುಂದುವರಿಯಲು ಸಾಧ್ಯವಾಗಲಿಲ್ಲ. ಈಗ ಕೇಂದ್ರವು ಜುಲೈವರೆಗೆ ನಿಷೇಧವನ್ನು ಸಡಿಲಿಸುವುದರೊಂದಿಗೆ, ಹೊಸ ಜಿಲ್ಲೆಗಳ ರಚನೆಯನ್ನು ತ್ವರಿತವಾಗಿ ಟ್ರ್ಯಾಕ್ ಮಾಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ.

ಅದರಂತೆ ಮಂಗಳವಾರ ಸಚಿವರಿಗೆ ಕ್ಯಾಬಿನೆಟ್ ನೋಟ್ ಅನ್ನು ವಿದ್ಯುನ್ಮಾನವಾಗಿ ವಿತರಿಸಲಾಯಿತು ಮತ್ತು ಅವರ ಅನುಮೋದನೆಯನ್ನು ಪಡೆಯಲಾಯಿತು. ಅದೇ ಸಮಯದಲ್ಲಿ, ಸರ್ಕಾರವು ಕರಡು ಪ್ರಸ್ತಾವನೆಗಳನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಳುಹಿಸಿತು, ಅವರು ತಮ್ಮ ಅಭಿಪ್ರಾಯಗಳನ್ನು ರಿಟರ್ನ್ ಮೇಲ್ ಮೂಲಕ ಕಳುಹಿಸಲು ನಿರ್ದೇಶನ ನೀಡಿದರು.

ಗುಲಾಂ ನಬಿ ಆಜಾದ್‌ಗೆ 'ಪದ್ಮಭೂಷಣ': ಕಾಂಗ್ರೆಸ್‌ನಲ್ಲಿ ಕಚ್ಚಾಟ

ಗುಲಾಂ ನಬಿ ಆಜಾದ್‌ಗೆ 'ಪದ್ಮಭೂಷಣ': ಕಾಂಗ್ರೆಸ್‌ನಲ್ಲಿ ಕಚ್ಚಾಟ

ಗುಲಾಂ ನಬಿ ಆಜಾದ್‌ಗೆ 'ಪದ್ಮಭೂಷಣ': ಕಾಂಗ್ರೆಸ್‌ನಲ್ಲಿ ಕಚ್ಚಾಟ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಪದ್ಮ ಪ್ರಶಸ್ತಿ ಘೋಷಿಸಿರುವುದು ಪಕ್ಷದಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ.

ಪದ್ಮ ಪ್ರಶಸ್ತಿ ಘೋಷಣೆ ವಿಚಾರವನ್ನು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ವಿರೋಧಿಸಿಲ್ಲವಾದರೂ, ಟ್ವಿಟರ್ ಮೂಲಕ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಟ್ವೀಟ್ ಮಾಡಿ, ಅಭಿನಂದನೆ ಸಲ್ಲಿಸಿದ್ದಾರೆ. ಅದೇ ಟ್ವೀಟ್‌ನಲ್ಲಿ, ಅವರ ಸಾರ್ವಜನಿಕ ಸೇವೆಯನ್ನು ರಾಷ್ಟ್ರ ಗುರುತಿಸಿದೆ, ಕಾಂಗ್ರೆಸ್‌ಗೆ ಅವರ ಸೇವೆ ಬೇಕಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಅವರು 'ಗುಲಾಂ' ಅಲ್ಲ 'ಆಜಾದ್' ಆಗಲು ಬಯಸುತ್ತಾರೆ: ಜೈರಾಮ್ ರಮೇಶ್

ಪಶ್ಮಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಜಿ ಅವರು ಪದ್ಮ ಭೂಷಣ ಪ್ರಶಸ್ತಿ ನಿರಾಕರಿಸಿದ್ದಾರೆ. ಈ ವಿಚಾರವನ್ನು ಅರವಿಂದ್ ಗುಣಶೇಖರ್ ಟ್ವೀಟ್ ಮಾಡಿದ್ದಾರೆ. ಅರವಿಂದ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಜೈರಾಮ್ ರಮೇಶ್, ಬುದ್ಧದೇವ್ ಅವರು ಸರಿಯಾದುದನ್ನೇ ಮಾಡಿದ್ದಾರೆ, ಅವರಿಗೆ ಆಜಾದಿ ಬೇಕಾಗಿದೆ. ಗುಲಾಮಗಿರಿಯಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಅಪಪ್ರಚಾರ, ಟ್ವಿಟರ್ ಪ್ರೊಫೈಲ್‌ನಲ್ಲಿ ಬದಲಾವಣೆ ಆಗಿಲ್ಲ: ಗುಲಾಂ ನಬಿ ಆಜಾದ್

ಹೀಗೆ ಗುಲಾಂ ನಬಿ ಆಜಾದ್ ಅವರಿಗೆ ಪದ್ಮ ಪ್ರಶಸ್ತಿ ಘೋಷಿಸಿರುವ ವಿಚಾರ, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಿಗೆ ಅಸಮಾಧಾನ ಉಂಟುಮಾಡಿದೆ.

ಅನೇಕ ಜಿಲ್ಲೆಗಳಲ್ಲಿ ಕೊರೋನಾ ಸ್ಪೋಟ;

ಅನೇಕ ಜಿಲ್ಲೆಗಳಲ್ಲಿ ಕೊರೋನಾ ಸ್ಪೋಟ;


ಅನೇಕ ಜಿಲ್ಲೆಗಳಲ್ಲಿ ಕೊರೋನಾ ಸ್ಪೋಟ;

ಬೆಂಗಳೂರು: ರಾಜ್ಯದಲ್ಲಿ ಇಂದು 48,905 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 39 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

41,699 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 36,54,413 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 32,57,769 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

38,705 ಜನ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 3,57,909 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 22.51 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ 22,427 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 18,734 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 8 ಜನ ಸೋಂಕಿತರು ಮೃತಪಟ್ಟಿದ್ದು, 2,16,145 ಸಕ್ರಿಯ ಪ್ರಕರಣಗಳಿವೆ.

ಬಳ್ಳಾರಿ 1141, ಚಾಮರಾಜನಗರ 917, ಧಾರವಾಡ 1523, ಹಾಸನ 2016, ಕಲಬುರ್ಗಿ 1007, ಕೊಡಗು 939, ಕೋಲಾರ 1547, ಮಂಡ್ಯ 2186, ಮೈಸೂರು 2797, ತುಮಕೂರು 2645, ಉಡುಪಿ 1392 ಹೊಸ ಪ್ರಕರಣ ವರದಿಯಾಗಿವೆ.

ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 8, ಚಾಮರಾಜನಗರ 1, ಚಿಕ್ಕಬಳ್ಳಾಪುರ 2, ದಕ್ಷಿಣಕನ್ನಡ 4, ದಾವಣಗೆರೆ 1, ಗದಗ 1, ಹಾಸನ 4, ಕಲಬುರ್ಗಿ 2, ಕೊಪ್ಪಳ 1, ಮಂಡ್ಯ 2, ಮೈಸೂರು 3, ರಾಯಚೂರು 1, ರಾಮನಗರ 2, ಶಿವಮೊಗ್ಗ 1, ಉಡುಪಿ 1, ಉತ್ತರ ಕನ್ನಡ 2, ವಿಜಯಪುರ 1 ಸೇರಿ ರಾಜ್ಯದಲ್ಲಿ 39 ಜನ ಸೋಂಕಿತರು ಮೃತಪಟ್ಟಿದ್ದಾರೆ. 

Tuesday, 25 January 2022

73 ನೇ ಗಣರಾಜ್ಯೋತ್ಸವ ಸಂಭ್ರಮ : ಬೆಂಗಳೂರಿನಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

73 ನೇ ಗಣರಾಜ್ಯೋತ್ಸವ ಸಂಭ್ರಮ : ಬೆಂಗಳೂರಿನಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

73 ನೇ ಗಣರಾಜ್ಯೋತ್ಸವ ಸಂಭ್ರಮ : ಬೆಂಗಳೂರಿನಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

ಬೆಂಗಳೂರು : ದೇಶಾದ್ಯಂತ ಇಂದು 73 ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಪಸ್ಥಿತರಿರಲಿದ್ದಾರೆ.

ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಬಾರಿ ಸರಳ ಗಣರಾಜ್ಯೋತ್ಸವ ಹಮ್ಮಿಕೊಂಡಿದೆ. ಕೇವಲ 200 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕಾರ್ಯಕ್ರಮದಲ್ಲಿ ಪೊಲ್ಗೊಳ್ಳುವ ಎಲ್ಲರಿಗೂ ಎರಡು ಡೋಸ್ ಕೊರೊನಾ ಲಸಿಕೆ ಕಡ್ಡಾಯಗೊಳಿಸಲಾಗಿದೆ. 

ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್.. ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹೀಂದ್ರಾ!

ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್.. ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹೀಂದ್ರಾ!


ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್.. ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹೀಂದ್ರಾ!

ಮುಂಬೈ: ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಎಂಬ ವ್ಯಕ್ತಿ ಕಳೆದ ಡಿಸೆಂಬರ್‌ನಲ್ಲಿ ಹಳೆಯ ವಾಹನದ ಬಿಡಿ ಭಾಗಗಳನ್ನ ಬಳಸಿ 'ಜೀಪ್' ತಯಾರಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಕಾರುಗಳು ಮತ್ತು ಬೈಕ್‌ಗಳ ಇತ್ತೀಚಿನ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಲೋಹರ್ ದ್ವಿಚಕ್ರ ವಾಹನದ ಎಂಜಿನ್, ರಿಕ್ಷಾ ಟೈರ್‌ಗಳು ಮತ್ತು ಅವರ ಫ್ಯಾಬ್ರಿಕೇಶನ್ ಅಂಗಡಿಯಲ್ಲಿ ತಯಾರಿಸಿದ ಸ್ಟೀರಿಂಗ್ ಸೇರಿದಂತೆ ವಿವಿಧ ಭಾಗಗಳಿಂದ 'ಜೀಪ್' ರೆಡಿ ಮಾಡಿದ್ದರು. ಲೋಹರ್ ತನ್ನ ಮಕ್ಕಳಿಗಾಗಿ ಈ 'ಜೀಪ್'ನ್ನು ನಿರ್ಮಿಸಿದ್ದರು. ಕಾರ್ ಬೇಕೆಂದು ಕೇಳಿದ್ದ ಮಕ್ಕಳ ಆಸೆ ಪೂರೈಸಲು ಲೋಹರ್ ಈ ಕಿಕ್-ಸ್ಟಾರ್ಟಿಂಗ್ ಜೀಪ್‌ ತಯಾರಿಸಿದ್ದರು.

ಇದನ್ನ ಶೇರ್ ಮಾಡಿಕೊಂಡಿದ್ದ ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ "ನಿಸ್ಸಂಶಯವಾಗಿ ಇದಕ್ಕೆ ಯಾವುದು ಹೋಲಿಕೆಯಿಲ್ಲ. ಆದರೆ, ನಮ್ಮ ಜನರ ಜಾಣ್ಮೆಯನ್ನು ನಾನು ಪ್ರಶಂಸಿಸುತ್ತೇನೆ. ಹೆಚ್ಚು ಹೆಚ್ಚು ಸಾಮರ್ಥ್ಯಗಳನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇನೆ" ಎಂದು ಬರೆದುಕೊಂಡಿದ್ದರು. ಇದರ ಜೊತೆಗೆ ಹಳೆಯ ವಾಹನದ ಬದಲಾಗಿ ಬೊಲೆರೋ ಕಾರನ್ನು ಗಿಫ್ಟ್​​ ಆಗಿ ನೀಡುವುದಾಗಿ ತಿಳಿಸಿದ್ದರು.

ಸೋಮವಾರ ಸಾಂಗ್ಲಿಯ ಸಹ್ಯಾದ್ರಿ ಮೋಟಾರ್ಸ್‌ನಿಂದ ಲೋಹರ್‌ಗೆ ಬೊಲೆರೊ ವಾಹನವನ್ನು ವಿತರಿಸಲಾಯಿತು. ಲೋಹರ್ ಮತ್ತು ಅವರ ಕುಟುಂಬ ಸದಸ್ಯರು ಇದರಿಂದ ತುಂಬಾ ಸಂತಸಗೊಂಡಿದ್ದಾರೆ. ಈ ಮೂಲಕ ಆನಂದ್ ಮಹಿಂದ್ರಾ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಲೋಹರ್ ತಮ್ಮ ಆವಿಷ್ಕಾರವನ್ನು ಸಹ್ಯಾದ್ರಿ ಮೋಟಾರ್ಸ್‌ಗೆ ಹಸ್ತಾಂತರಿಸಿದರು. ಅದನ್ನು ಮಹೀಂದ್ರಾ ರಿಸರ್ಚ್ ವ್ಯಾಲಿಗೆ ಸಾಗಿಸಲಾಯಿತು.


ಕಳವಿಗೆ ಹೋಗದಂತೆ ತಡೆದ ತಂದೆಯನ್ನು ಕೊಂದ ಮಗ

ಕಳವಿಗೆ ಹೋಗದಂತೆ ತಡೆದ ತಂದೆಯನ್ನು ಕೊಂದ ಮಗ

ಕಳವಿಗೆ ಹೋಗದಂತೆ ತಡೆದ ತಂದೆಯನ್ನು ಕೊಂದ ಮಗ

ನಾಯಕನಹಟ್ಟಿ (ಚಿತ್ರದುರ್ಗ): ಕಳವು ಮಾಡಲು ಹೋಗುತ್ತಿದ್ದ ಮಗನನ್ನು ತಡೆಯಲು ಮುಂದಾದ ತಂದೆಯನ್ನು ಒದ್ದು ಕೊಲೆ ಮಾಡಿದ ಪ್ರಕರಣ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ ಭರಮಸಾಗರ ಕಪಿಲೆ ಯಲ್ಲಿ ಸೋಮವಾರ ಮಧ್ಯೆ ರಾತ್ರಿ ನಡೆದಿದೆ.

ಮಗ ಲೋಕೇಶ (28) ಕೃತ್ಯವೆಸಗಿದ ಆರೋಪಿ.

ಲೋಕೇಶ ಹಲವು ದಿನಗಳಿಂದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಬಗ್ಗೆ ನಾಯಕನಹಟ್ಟಿ, ತಳಕು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು. ಇದರಿಂದ ಇಡೀ ಕುಟುಂಬ ತಲೆತಗ್ಗಿಸುವ ಸನ್ನಿವೇಶ ಎದುರಾಗಿತ್ತು. 'ಕಳವು ಮಾಡಬೇಡ ಎಂದು ಕುಟುಂಬದ ಎಲ್ಲ ಸದಸ್ಯರು ಹಲವು ಬಾರಿ ಬುದ್ಧಿವಾದ ಹೇಳಿದರೂ ಲೋಕೇಶ ಕೃತ್ಯವೆಸಗುವುದನ್ನು ಬಿಟ್ಟಿರಲಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಇದೇ ವಿಷಯಕ್ಕೆ ತಂದೆ ಮತ್ತು ಮಗನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹಗ್ಗದಿಂದ ಮಗನ ಕೈಕಾಲುಗಳನ್ನು ಕಟ್ಟಿಹಾಕಿದರೆ ಎಲ್ಲಿಯೂ ಹೋಗುವುದಿಲ್ಲ ಎಂದು ತಿಳಿದ ಮಲ್ಲಯ್ಯ ಹಗ್ಗ ಹಿಡಿದು ಕೈಕಾಲು ಕಟ್ಟಲು ಮುಂದಾದರು. ಈ ವೇಳೆ ಲೋಕೇಶನು ಕಾಲಿನಿಂದ ಜೋರಾಗಿ ಗುಡ್ಲುಮಲ್ಲಯ್ಯನ ಹೊಟ್ಟೆಗೆ ಒದ್ದಿದ್ದಾನೆ. ಒದ್ದ ರಭಸಕ್ಕೆ ಹಿಂದಕ್ಕೆ ಬಿದ್ದು ಗುಡ್ಲುಮಲ್ಲಯ್ಯ ಸ್ಥಳದಲ್ಲಿ ಮೃತಪಟ್ಟರು. ಇದರಿಂದ ಗಾಬರಿಗೊಂಡ ಮನೆಯ ಇತರೆ ಸದಸ್ಯರು ಲೋಕೇಶನನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಮಂಗಳವಾರ ಬೆಳಿಗ್ಗೆ ನಾಯಕನಹಟ್ಟಿ ಪೊಲೀಸರಿಗೆ ಮಾಹಿತಿ ನೀಡಿದರು. 

ಸಂಪಾಜೆ ಚೆಕ್‌ಪೋಸ್ಟ್;  ಲಾರಿಯೊಂದರಲ್ಲಿ 25ಕ್ಕೂ ಹೆಚ್ಚು ದನಗಳು

ಸಂಪಾಜೆ ಚೆಕ್‌ಪೋಸ್ಟ್; ಲಾರಿಯೊಂದರಲ್ಲಿ 25ಕ್ಕೂ ಹೆಚ್ಚು ದನಗಳು


ಸಂಪಾಜೆ ಚೆಕ್‌ಪೋಸ್ಟ್;
ಲಾರಿಯೊಂದರಲ್ಲಿ 25ಕ್ಕೂ ಹೆಚ್ಚು ದನಗಳು 

ರಾತ್ರಿ ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿತ್ತು. ಸಂಪಾಜೆ ಚೆಕ್‌ಪೋಸ್ಟ್ ಗೇಟಿನಲ್ಲಿ ತಪಾಸಣೆಯ ವೇಳೆ ಸಿಬ್ಬಂದಿಯು ಚಾಲಕನನ್ನು ವಿಚಾರಣೆ ನಡೆಸಿದಾಗ ಇದು ದನದ ಫೀಡ್ ಸಾಗಾಟ ವಾಹನ ಎಂದು ಚಾಲಕ ಹೇಳಿದ್ದಾನೆ ಎನ್ನಲಾಗಿದೆ..

ಸುಳ್ಯ : ಸುಳ್ಯ-ಕೇರಳ ಗಡಿಪ್ರದೇಶಗಳ ಗೇಟ್‌ಗಳ ಮೂಲಕ ಕೇರಳಕ್ಕೆ ಅಕ್ರಮ ಗೋ ಸಾಗಾಟ ನಡೆಯುತ್ತಿರುವ ಆರೋಪಗಳು ಈ ಹಿಂದಿನಿಂದಲೂ ಕೇಳಿ ಬರುತ್ತಿವೆ. ಇದಕ್ಕೆ ಪೂರಕವೆಂಬತೆ ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಕ್ರಮ ಗೋ ಕಳ್ಳಸಾಗಣೆ ಬಹಿರಂಗವಾಗಿದೆ.

ಹೊರಗಡೆ ಫೀಡ್ ಗೋಣಿಗಳನ್ನು ತುಂಬಿಸಿಕೊಂಡು ಬಂದ ಈಚರ್ ಲಾರಿಯೊಂದರಲ್ಲಿ 25ಕ್ಕೂ ಹೆಚ್ಚು ದನಗಳು ಪತ್ತೆಯಾಗಿವೆ. ಇನ್ನು ತಪಾಸಣಾಧಿಕಾರಿ ತಪಾಸಣೆ ಮಾಡುವಾಗ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ರಾತ್ರಿ ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿತ್ತು. ಸಂಪಾಜೆ ಚೆಕ್‌ಪೋಸ್ಟ್ ಗೇಟಿನಲ್ಲಿ ತಪಾಸಣೆಯ ವೇಳೆ ಸಿಬ್ಬಂದಿಯು ಚಾಲಕನನ್ನು ವಿಚಾರಣೆ ನಡೆಸಿದಾಗ ಇದು ದನದ ಫೀಡ್ ಸಾಗಾಟ ವಾಹನ ಎಂದು ಚಾಲಕ ಹೇಳಿದ್ದಾನೆ ಎನ್ನಲಾಗಿದೆ. ಆದರೆ, ಚಾಲಕನ ವರ್ತನೆಯಲ್ಲಿ ಅನುಮಾನಗೊಂಡ ಗೇಟಿನ ಸಿಬ್ಬಂದಿ ಲಾರಿಯ ಒಳಗಡೆ ಇಣುಕಿ ನೋಡಿದಾಗ ದನದ ಫೀಡ್ ಗೋಣಿಗಳ ಜೊತೆಗೆ ಸುಮಾರು 25ಕ್ಕೂ ಹೆಚ್ಚು ದನಕರುಗಳು ಇದ್ದವು.

ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸುತ್ತಿರುವಾಗಲೇ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.