ಬಿಜೆಪಿಗೆ ಧಮ್ ಇಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದ ಸಿದ್ದರಾಮಯ್ಯ
ಬೆಳಗಾವಿ: 'ಈ ಚುನಾವಣಯಲ್ಲಿ 12 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಇದು ಜನಾಭಿಪ್ರಾಯ ಅಲ್ಲ, ಆದರೂ ಕೂಡ ಚುನಾಯಿತ ಪ್ರತಿನಿಧಿಗಳ ತೀರ್ಪು ನಮ್ಮ ಪರ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುವರ್ಣ ವಿಧಾನಸೌಧ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ 11 ಸ್ಥಾನಗಳಲ್ಲಿ ಗೆದ್ದಿದ್ದೇವೆ, ಚಿಕ್ಕಮಗಳೂರಿನಲ್ಲಿ ನಮ್ಮ ಅಭ್ಯರ್ಥಿ ಗಾಯತ್ರಿ ಅವರು ಕೇವಲ 6 ಮತಗಳ ಅಂತರದಲ್ಲಿ ಸೋತರು. ಅಲ್ಲಿ 10 ಮಂದಿ ನಾಮ ನಿರ್ದೇಶಿತ ಸದಸ್ಯರಿದ್ದು, ಅವರು ವೋಟ್ ಹಾಕಿಲ್ಲ. ಅವರು ಮತ ಹಾಕಿದ್ರೆ ಗೆಲ್ತಾ ಇದ್ವಿ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಸೋಲು ಕಂಡಿರುವ ಬಿಜೆಪಿಗೆ ಧಮ್ ಇಲ್ಲ ಎಂಬುದು ಫಲಿತಾಂಶ ಸೂಚಿಸುತ್ತದೆ. ಗೆದ್ದ ಮತ್ತು ಸೋತ ಎಲ್ಲ ಅಭ್ಯರ್ಥಿಗೂ ಅಭಿನಂದನೆ ಹೇಳ್ತೇನೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.
0 التعليقات: