Friday, 3 December 2021

ಮನೆ ಗೋಡೆ ಕುಸಿತ; ಮಲಗಿದ್ದಲ್ಲೇ ಹೆಣವಾದ ಗಂಡ-ಹೆಂಡತಿ: ಇನ್ನೊಬ್ಬರಿಗೆ ಗಾಯ..


ಮನೆ ಗೋಡೆ ಕುಸಿತ; ಮಲಗಿದ್ದಲ್ಲೇ ಹೆಣವಾದ ಗಂಡ-ಹೆಂಡತಿ: ಇನ್ನೊಬ್ಬರಿಗೆ ಗಾಯ..

ಕೋಲಾರ: ಮಳೆಗೆ ಮರ-ಮನೆ ಬಿದ್ದು ಸಾವು-ನೋವು ಸಂಭವಿಸುವ ಪ್ರಕರಣಗಳು ಮುಂದುವರಿದಿದ್ದು, ಇಲ್ಲೊಂದು ಕಡೆ ಮನೆಯ ಗೋಡೆ ಕುಸಿದು ಗಂಡ-ಹೆಂಡತಿ ಇಬ್ಬರೂ ಮಲಗಿದ್ದಲ್ಲೇ ಹೆಣವಾಗಿದ್ದಾರೆ. ಅಲ್ಲದೆ, ಮನೆಯಲ್ಲಿದ್ದ ಇನ್ನೊಬ್ಬರು ಗಾಯಗೊಂಡಿದ್ದಾರೆ.

ಕೋಲಾರ ಜಿಲ್ಲೆಯ ಕೆ.ಮಲ್ಲಂಡಹಳ್ಳಿ ಎಂಬ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ನಾಗರಾಜಪ್ಪ (65) ಮತ್ತು ಲಕ್ಷ್ಮಮ್ಮ (60) ಸಾವಿಗೀಡಾದ ಗಂಡ-ಹೆಂಡತಿ. ಮನೆಯಲ್ಲಿದ್ದ ಸೀನಪ್ಪ ಎಂಬ ಇನ್ನೊಬ್ಬರು ಗಾಯಗೊಂಡಿದ್ದಾರೆ.

ಹೋಟೆಲ್​ಗೆ ಬಂದು ಅಮಾಯಕನಂತೆ ನಿಂತೇ ಇದ್ದ, ನೋಡ್ತನೋಡ್ತ ಮೊಬೈಲ್​ಫೋನ್​ ಕದ್ದ, ಏನೂ ಆಗಿಲ್ಲ ಎಂಬಂತೆ ಹೋದ.

ಗ್ರಾಮಸ್ಥರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಸೀನಪ್ಪ ಅವರನ್ನು ದುರಂತ ಸ್ಥಳದಿಂದ ಪಾರು ಮಾಡಿದ್ದಾರೆ. ವೇಮಗಲ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ.


SHARE THIS

Author:

0 التعليقات: