ಕ್ಯಾಲಿಪೋರ್ನಿಯಾದಲ್ಲಿ ಒಮಿಕ್ರಾನ್ ಮೊದಲ ಕೇಸ್ ಪತ್ತೆ.!
ಅಮೇರಿಕಾ: ಈಗಾಗಲೇ ವಿಶ್ವದ 18 ದೇಶಗಳಲ್ಲಿ ಕಾಣಿಸಿಕೊಂಡಿದ್ದಂತ ಒಮಿಕ್ರಾನ್ ವೈರಸ್ ಪ್ರಬೇಧ, ಈಗ ಅಮೇರಿಕಾಕಕ್ಕೂ ಕಾಲಿಟ್ಟಿದೆ. ಈ ಮೂಲಕ ಅಮೇರಿಕಾದಲ್ಲಿ ಒಮಿಕ್ರಾನ್ ವೈರಸ್ ಮೊಟ್ಟ ಮೊದಲ ಪ್ರಕರಣ ವರದಿಯಾಗಿದೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಪ್ರಯಾಣಿಕನಲ್ಲಿ ಕೋವಿಡ್ ನ ಹೊಸ ರೂಪಾಂತರವಾದ ಒಮೈಕ್ರಾನ್ ನ ಮೊದಲ ಪ್ರಕರಣ ಕ್ಯಾಲಿಪೋರ್ನಿಯಾದಲ್ಲಿ ಪತ್ತೆಯಾಗಿರೋದಾಗಿ ಯುನೈಟೆಡ್ ಸ್ಟೇಟ್ಸ್ ಘೋಷಿಸಿದೆ.
ದಕ್ಷಿಣ ಆಫ್ರಿಕಾ ಮೊದಲ ಪ್ರಕರಣವನ್ನು ವರದಿ ಮಾಡುವ ಮೊದಲು ಯುರೋಪಿನಲ್ಲಿ ಈ ರೂಪಾಂತರವಿತ್ತು ಎಂದು ಹಲವಾರು ವರದಿಗಳು ಈಗ ಸೂಚಿಸುತ್ತಿರುವುದರಿಂದ, ಯುಎಸ್ ನಲ್ಲಿ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಮೊದಲು ಗುರುತಿಸಿದ ಹೊಸ ರೂಪಾಂತರದ ಮೊದಲ ಪ್ರಕರಣ ಇದೀಗ ಪತ್ತೆಯಾಗಿದೆ.
ಹೊಸ ರೂಪಾಂತರದ ಬಗ್ಗೆ ಇನ್ನೂ ಹೆಚ್ಚಿನವು ತಿಳಿದಿಲ್ಲ, ಆದರೆ ಅದರ ಉಗಮವು ವಿಶ್ವದಾದ್ಯಂತ ಹೊಸ ಆತಂಕವನ್ನು ಸೃಷ್ಟಿಸಿದೆ. ಈ ಕೊರೋನಾ ರೂಪಾಂತರಿ ತಡೆಗಾಗಿ ಹೆಚ್ಚಿನ ದೇಶಗಳು ಪ್ರಯಾಣ ನಿರ್ಬಂಧಗಳನ್ನು ಹೇರುತ್ತಿವೆ.
0 التعليقات: