Wednesday, 8 December 2021

ಬಿಪಿನ್ ರಾವತ್ ದುರಂತ ಅಂತ್ಯ : ಜನ್ಮದಿನ ಆಚರಿಸಿಕೊಳ್ಳದೆ ಇರಲು ಸೋನಿಯಾ ಗಾಂಧಿ ನಿರ್ಧಾರ


ಬಿಪಿನ್ ರಾವತ್ ದುರಂತ ಅಂತ್ಯ : 
ಜನ್ಮದಿನ ಆಚರಿಸಿಕೊಳ್ಳದೆ ಇರಲು ಸೋನಿಯಾ ಗಾಂಧಿ ನಿರ್ಧಾರ

ನವದೆಹಲಿ: ತಮಿಳುನಾಡಿನ ಕೂನೂರ್​​ನಲ್ಲಿ ಹೆಲಿಕಾಪ್ಟರ್​ ಪತನದಲ್ಲಿ ಸಿಡಿಎಸ್​ ಬಿಪಿನ್​ ರಾವತ್ ಮತ್ತು ಇತರ 11 ಸೈನಿಕರು ಮೃತರಾದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಇಂದು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ.

ಈ ಸಂಬಂಧ ಸಂಸದ ಮಾಣಿಕ್ಕಮ್​ ಟಾಗೋರ್​ ಮಾಹಿತಿ ನೀಡಿದ್ದು, ಸಿಡಿಎಸ್ ಬಿಪಿನ್ ರಾವತ್ ಮತ್ತು 11 ಸೈನಿಕರು ಮೃತರಾದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಹೀಗಾಗಿ ರಾಷ್ಟ್ರಾದ್ಯಂತ ಯಾವುದೇ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ತಮ್ಮ ಜನ್ಮ ದಿನದಸಂಭ್ರಮ ಆಚರಣೆ ಮಾಡಬಾರದು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಊಟಿ ಸಮೀಪ ಕೂನೂರ್​​ಬಳಿ ಗುಡ್ಡ ಪ್ರದೇಶದಲ್ಲಿ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ ಸೇನಾಧಿಕಾರಿಗಳು ವೆಲ್ಲಿಂಗ್ಟನ್​​ಗೆ ತೆರಳುತ್ತಿದ್ದ ವೇಳೆ ಸೇನಾ ಹೆಲಿಕಾಪ್ಟರ್ ಪತನವಾಗಿ ಬಿಪಿನ್ ರಾವತ್, ಪತ್ನಿ ಮಧುಲಿಕಾ ಮತ್ತು 11 ಸೈನಿಕರು ಮೃತಪಟ್ಟಿದ್ದಾರೆ.


SHARE THIS

Author:

0 التعليقات: