
ಇತ್ತೀಚೆಗೆ ಖರೀದಿಸಿರುವ ಸೇನಾ ಹೆಲಿಕಾಪ್ಟರ್ ಪತನ ಬಗ್ಗೆ ಆಂತರಿಕ ತನಿಖೆ ನಡೆಯಬೇಕು: ಅಭಿಷೇಕ್ ಸಿಂಘ್ವಿ
ಹೊಸದಿಲ್ಲಿ: ಹೆಲಿಕಾಪ್ಟರ್ ಅಪಘಾತದ ಬಗ್ಗೆ ತನಿಖೆ ನಡೆಸಬೇಕೆಂದು ಕರೆ ನೀಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಅವರು ಈ ಹೆಲಿಕಾಪ್ಟರ್ಗಳನ್ನು ಇತ್ತೀಚೆಗೆ ಖರೀದಿಸಲಾಗಿದೆ ಎಂದು ಹೇಳಿದರು.
ನಮ್ಮ ಸಿಡಿಎಸ್ ಬಿಪಿನ್ ರಾವತ್ ಹಾಗೂ ಅವರ ಕುಟುಂಬದ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ ಹಾಗೂ ಯಾರೂ ಗಾಯಗೊಂಡಿಲ್ಲ ಎಂದು ಭಾವಿಸುತ್ತೇವೆ. ಈ ಹೆಲಿಕಾಪ್ಟರ್ಗಳನ್ನು ಇತ್ತೀಚೆಗೆ ಖರೀದಿಸಲಾಗಿದೆ ಆದ್ದರಿಂದ ಸರಿಯಾದ ತನಿಖೆ ಹಾಗೂ ವಿಚಾರಣೆಯನ್ನು ಆಂತರಿಕವಾಗಿ ಮತ್ತು ತಯಾರಕರೊಂದಿಗೆ ಮಾಡಬೇಕು ಎಂದು ಸಿಂಘ್ವಿ ಟ್ವೀಟಿಸಿದ್ದಾರೆ.
0 التعليقات: