Saturday, 11 December 2021

ಕಾರಿನಲ್ಲಿ ಗಾಂಜಾ ಸಾಗಾಟ ಪತ್ತೆ, ನಾಲ್ವರ ಬಂಧನ


ಕಾರಿನಲ್ಲಿ ಗಾಂಜಾ ಸಾಗಾಟ ಪತ್ತೆ, ನಾಲ್ವರ ಬಂಧನ

ಶಿವಮೊಗ್ಗ: ಆಂಧ್ರ ಪ್ರದೇಶದಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾವನ್ನು ತುಂಗಾ ನಗರ ಠಾಣೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

 ದೌಲತ್ ಅಲಿಯಾಸ್ ಗುಂಡು, ಮುಜೀಬ್ ಖಾನ್ ಅಲಿಯಾಸ್ ಬರ್ಸ್ಟ್, ಶುಐಬ್‌ ಅಲಿಯಾಸ್ ಚೂಡಿ ಹಾಗೂ ಝಫರುಲ್ಲಾ ಬಂಧಿತ ಆರೋಪಿಗಳು.

 ಆಂಧ್ರ ಪ್ರದೇಶದಿಂದ ಕಾರಿನಲ್ಲಿ ಗಾಂಜಾವನ್ನು ಶಿವಮೊಗ್ಗಕ್ಕೆ ತರುತ್ತಿದ್ದ ವೇಳೆ ಲಕ್ಕಿನಕೊಪ್ಪ ಕ್ರಾಸ್ ಹಾಗೂ ಹಾಲ್ ಲಕ್ಕವಳ್ಳಿ ಗ್ರಾಮದ ಮಧ್ಯೆ ತುಂಗಾ ನಗರ ಪೊಲೀಸರು ದಾಳಿ ನಡೆಸಿ 6.35 ಲಕ್ಷ ರೂ. ಮೌಲ್ಯದ 21 ಕೆ.ಜಿ. 315 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 9 ಲಕ್ಷ ರೂ. ಮೌಲ್ಯದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಹಾಗೂ ಅಪರ ಜಿಲ್ಲಾ ರಕ್ಷಣಾಧಿಕಾರಿ ಡಾ.ಎಚ್.ಟಿ.ಶೇಖರ್ ಮತ್ತು ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಮಾರ್ಗದರ್ಶನದಲ್ಲಿ ತುಂಗಾ ನಗರ ಠಾಣೆ ಸರ್ಕಲ್ ಇನ್ ಸ್ಪೆಕ್ಟರ್ ದೀಪಕ್ ಎಂ.ಎಸ್. ನೇತೃತ್ವದಲ್ಲಿ ಪಿಎಸ್ಸೈ ಶಿವಪ್ರಸಾದ್, ಸತೀಶ್ ನಾಯ್ಕ್ ಹಾಗೂ ಸಿಬ್ಬಂದಿಯಾದ ಅರುಣ್ ಕುಮಾರ್, ಪುನೀತ್, ಕಿರಣ್ ಮೋರೆ, ಸಂದೀಪ್, ಕಾಂತರಾಜ್, ಅರುಣ್, ಲಂಕೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.SHARE THIS

Author:

0 التعليقات: