Monday, 6 December 2021

ಮಂಗಳೂರು; ಬಾಲಕಿಗೆ ಕಿರುಕುಳ: ಕೇರಳ ಮೂಲದ ಆರೋಪಿ ವಶಕ್ಕೆ


 ಮಂಗಳೂರು; ಬಾಲಕಿಗೆ ಕಿರುಕುಳ: ಕೇರಳ ಮೂಲದ ಆರೋಪಿ ವಶಕ್ಕೆ

ಉಳ್ಳಾಲ : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೇರಳ ಮೂಲದ ಗೌತಮ್ ಎಂಬಾತನ ವಿರುದ್ಧ  ಉಳ್ಳಾಲ ಪೊಲೀಸರು ಪೊಕ್ಸೊ ಕಾಯಿದೆಯಡಿ  ಪ್ರಕರಣ ದಾಖಲಿಸಿ, ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಗೌತಮ್ 17ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರಲಾಗಿದೆ.

ಆಕೆಯನ್ನು ವಿವಾಹ ಮಾಡಿಕೊಡುವಂತೆ ಮನೆಯವರಲ್ಲಿ ಒತ್ತಾಯ ಮಾಡಿದ್ದ.  ತದನಂತರ ಮೊಬೈಲ್ ಮೂಲಕ ಸಂಪರ್ಕಿಸಿ ವಿವಾಹ ಮಾಡಿಕೊಡುವಂತೆ ಬೆದರಿಕೆ ಕೂಡಾ ಹಾಕಿದ್ದ ಎನ್ನಲಾಗಿದೆ. ಇದರಿಂದ ನೊಂದ ಬಾಲಕಿಯ ತಾಯಿ ಉಳ್ಳಾಲ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿದ ಪೋಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. 


SHARE THIS

Author:

0 التعليقات: