ಸೌದಿ ಅರೇಬಿಯಾ: ತಬ್ಲೀಗ್ ಜಮಾಅತ್ ಸಂಘಟನೆಗೆ ನಿಷೇಧ
ರಿಯಾದ್: ಇಸ್ಲಾಮಿಕ್ ಸಂಘಟನೆಯಾದ ತಬ್ಲಿಘಿ ಜಮಾತ್ ಅನ್ನು ಸೌದಿ ಅರೇಬಿಯಾ ನಿಷೇಧಿಸಿದೆ. ಸೌದಿ ಅರೇಬಿಯಾವು “ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ ಒಂದಾಗಿದೆ” ಎಂದು ಕರೆದಿರುವ ಈ ಗುಂಪನ್ನು ಕಾರ್ಯನಿರ್ವಹಿಸದಂತೆ ನಿಷೇಧಿಸಿದೆ. ತಬ್ಲೀಗ್ ಜಮಾಅತ್ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಮುಂದಿನ ಶುಕ್ರವಾರ ಮಸೀದಿಗಳಲ್ಲಿ ಧರ್ಮೋಪದೇಶವನ್ನು ನೀಡುವಂತೆ ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ನಿರ್ದೇಶಿಸಿದೆ.
ತಬ್ಲೀಗ್ ಗುಂಪಿನ ಚಟುವಟಿಕೆಗಳು ತಪ್ಪುದಾರಿಗೆಳೆಯುವ ಮತ್ತು ಅಪಾಯಕಾರಿ ಮತ್ತು ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ ಒಂದಾಗಿದೆ ಎಂದು ಸಚಿವಾಲಯ ಹೇಳಿದೆ. ಇಂತಹ ಗುಂಪುಗಳು ಸಮಾಜಕ್ಕೆ ಅಪಾಯಕಾರಿ, ಇಂತಹ ಗುಂಪುಗಳೊಂದಿಗಿನ ಸಂಪರ್ಕವನ್ನು ನಿಷೇಧಿಸಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
1926 ರಲ್ಲಿ ಭಾರತದ ಮೇವಾತ್ ಪ್ರದೇಶದಲ್ಲಿ, ಮುಹಮ್ಮದ್ ಇಲ್ಯಾಸ್ ಅಲ್-ಕಂಧ್ಲಾವಿ ಎಂಬವರಿಂದ ಸ್ಥಾಪನೆಯಾದ ತಬ್ಲೀಘಿ ಜಮಾಅತ್, ನವೀನ ಸಿದ್ಧಾಂತಗಳ ಇಸ್ಲಾಮಿಕ್ ಮಿಷನರಿ ಚಳುವಳಿಯಾಗಿದೆ. ತನ್ನದ್ದು ಅಹ್ಲೇ ಹದೀಸ್ ಅಥವಾ ಸಲಫಿ ಆದರ್ಶವಾಗಿದೆ ಎಂದು ಅದರ ವಕ್ತಾರರು ವ್ಯಕ್ತಪಡಿಸಿದ್ದಾರೆ.
ಭಾರತ ಸಹಿತ ವಿಶ್ವಾದ್ಯಂತವಿರುವ ಸುನ್ನೀ ಉಲಮಾಗಳು ತಬ್ಲೀಗ್ ಜಮಾಅತ್ ನ್ನು ಆರಂಭದಿಂದಲೇ ವಿರೋಧಿಸುತ್ತಾ ಬಂದಿರುವುದು ಗಮನಾರ್ಹ.
0 التعليقات: