Saturday, 18 December 2021

ಮಂಗಳೂರು: ಆರ್ಮಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡ ವ್ಯಕ್ತಿಯಿಂದ ಮಹಿಳೆಗೆ ವಂಚನೆ


 ಮಂಗಳೂರು: ಆರ್ಮಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡ ವ್ಯಕ್ತಿಯಿಂದ ಮಹಿಳೆಗೆ ವಂಚನೆ

ಮಂಗಳೂರು : ಆರ್ಮಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಮೈದಾ ಹಿಟ್ಟು ಖರೀದಿಸಲು ಇದೆಯೆಂದು ನಂಬಿಸಿ ತನ್ನ ಬ್ಯಾಂಕ್ ಖಾತೆಯಿಂದ 2,94,830 ರೂ. ವಂಚನೆ ಮಾಡಿರುವುದಾಗಿ ಮಹಿಳೆಯೋರ್ವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರ್ಮಿಯಲ್ಲಿ ಕೆಲಸ ಮಾಡುತ್ತಿರುವ ಅಮನ್ ಎಂದು ಪರಿಚಯಿಸಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿ ಮೈದಾ ಹಿಟ್ಟು ಖರೀದಿಸುವುದಾಗಿ ತಿಳಿಸಿದ್ದಾನೆ. ಅದರ ಹಣ ಪಾವತಿಸಲು ಕ್ಯೂಆರ್ ಕೋಡ್ ಕಳುಹಿಸುವಂತೆ ತಿಳಿಸಿದ್ದಾನೆ. ಆದರೆ ತನ್ನಲ್ಲಿ ಕ್ಯೂಆರ್ ಕೋಡ್ ಇಲ್ಲದ ಕಾರಣ ತನ್ನ ಪತ್ನಿಯ ಮೊಬೈಲ್ ನಂಬರ್ ಕೊಟ್ಟಿದ್ದು, ಬಳಿಕ ಅಮನ್ ಎಂಬ ಅಪರಿಚಿತ ವ್ಯಕ್ತಿ ಯೂನಿಯನ್ ಬ್ಯಾಂಕ್ ಪದವು ಬ್ರಾಂಚಿನಲ್ಲಿ ಖಾತೆಯನ್ನು ಹೊಂದಿರುವ ಪತ್ನಿಯ ಖಾತೆಯಿಂದ ಹಂತಹಂತವಾಗಿ 2,94,830ರೂ. ವರ್ಗಾಯಿಸಿದ್ದಾನೆ ಎಂದು ದೂರು ನೀಡಲಾಗಿದೆ.


SHARE THIS

Author:

0 التعليقات: