Saturday, 18 December 2021

ಜಯಪುರ: ಟ್ರ್ಯಾಕ್ಟರ್ ಉರುಳಿಬಿದ್ದು ಚಾಲಕ ಮೃತ್ಯು


 ಜಯಪುರ: ಟ್ರ್ಯಾಕ್ಟರ್ ಉರುಳಿಬಿದ್ದು ಚಾಲಕ ಮೃತ್ಯು

ಚಿಕ್ಕಮಗಳೂರು: ಟ್ರ್ಯಾಕ್ಟರ್ ವೊಂದು ಅಪಘಾತಕ್ಕೀಡಾಗಿ ಅದರ ಚಾಲಕ ಸಾವನ್ನಪ್ಪಿದ ಘಟನೆ ಕೊಪ್ಪ ತಾಲೂಕಿನ ಜಯಪುರ ಪಟ್ಟಣದಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.

ಪಟ್ಟಣದ ಮಸೀದಿಯೊಂದರ ಹಿಂಭಾಗದಲ್ಲಿ ಮಣ್ಣು ತುಂಬಿಸಿಕೊಂಡಿದ್ದ ಟ್ರಾಕ್ಟರ್ ಅನ್ನು ಟರ್ನ್ ಮಾಡುವ ಸಂದರ್ಭ ಟ್ರಾಕ್ಟರ್ ಇಂಜಿನ್ ಮೇಲೆದ್ದು ಉರುಳಿಬಿತ್ತೆನ್ನಲಾಗಿದೆ. ಅಪಘಾತದ ತೀವ್ರತೆಗೆ ಚಾಲಕನ ತಲೆ ತುಂಡರಿಸಲ್ಪಟ್ಟಿದೆ ಎಂದು ತಿಳಿದು ಬಂದಿದೆ.

ಮೃತ ಚಾಲಕನ ಗುರುತು ಪತ್ತೆಯಾಗಿಲ್ಲ.

ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


SHARE THIS

Author:

0 التعليقات: