Wednesday, 8 December 2021

ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರಿಂದ ಗ್ಯಾಂಗ್​ರೇಪ್​; ವಿಡಿಯೋ ಮಾಡಿದ ಶಿಕ್ಷಕಿಯರು!

ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರಿಂದ ಗ್ಯಾಂಗ್​ರೇಪ್​; ವಿಡಿಯೋ ಮಾಡಿದ ಶಿಕ್ಷಕಿಯರು!

ಜೈಪುರ: ಜ್ಞಾನದೇಗುಲವೆಂದು ಕರೆಯಲಾಗುವ ಶಾಲೆಯಲ್ಲಿ ಶಿಕ್ಷಕರಿಂದಲೇ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ನಾಲ್ಕು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ, ಗ್ಯಾಂಗ್​ರೇಪ್​ ಮಾಡಿದ ಮತ್ತು ಅದಕ್ಕೆ ಸಹಾಯ ಮಾಡಿದ ಆರೋಪಗಳ ಮೇಲೆ ರಾಜಸ್ಥಾನ ಪೊಲೀಸರು ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲ ಹಾಗೂ 9 ಶಿಕ್ಷಕರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋಗುವುದನ್ನು ಏಕೆ ನಿಲ್ಲಿಸಿದ್ದಾಳೆಂದು ಅವಳ ತಂದೆ ವಿಚಾರಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ತನ್ನ ಮೇಲೆ ಶಾಲೆಯ ಪ್ರಾಂಶುಪಾಲ ಮತ್ತು ಮೂವರು ಇತರ ಶಿಕ್ಷಕರು ಒಂದು ವರ್ಷದಿಂದ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ. ಇಬ್ಬರು ಮಹಿಳಾ ಶಿಕ್ಷಕಿಯರು ಆ ಕೃತ್ಯದ ವಿಡಿಯೋಗಳನ್ನು ಕೂಡ ಮಾಡಿದ್ದಾರೆ ಎಂದು ಹೇಳಿದಳು ಎನ್ನಲಾಗಿದೆ.

ರಾಜ್ಯದ ಆಲ್ವಾರ್ ಜಿಲ್ಲೆಯ ಮಂಡಾನಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿರುವ ಶಾಲೆಯಲ್ಲಿ ಈ ಹೇಯ ಕೃತ್ಯ ನಡೆದಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಮಂಡಾನಾ ಪೊಲೀಸರು ವಿಚಾರಣೆ ಆರಂಭಿಸಿದರು ತನಿಖೆಯ ವೇಳೆ, ಪ್ರಾಂಶುಪಾಲ ಮತ್ತು ಶಿಕ್ಷಕರು ಇನ್ನೂ ಮೂವರು ಹೆಣ್ಣುಮಕ್ಕಳು ಮೇಲೂ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಬೆಳಕಿಗೆ ಬಂತು. ಇತರ ಸಂತ್ರಸ್ತ ಬಾಲಕಿಯರಾದ 6ನೇ ತರಗತಿ, 4ನೇ ತರಗತಿ ಮತ್ತು 3ನೇ ತರಗತಿಯ ವಿದ್ಯಾರ್ಥಿನಿಯರು, ಈ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ತಮ್ಮನ್ನು ಸಾಯಿಸಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದೂ ಆರೋಪಿಸಿದ್ದಾರೆ.

ಮಹಿಳಾ ಶಿಕ್ಷಕಿಯರ ಸಾಥ್​: ಒಬ್ಬ ಸಂತ್ರಸ್ತೆಯು ಪುರುಷ ಶಿಕ್ಷಕರು ತನಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮಹಿಳಾ ಶಿಕ್ಷಕಿಯರಿಗೆ ತಿಳಿಸಿದಾಗ, ಪುಸ್ತಕಗಳನ್ನು ಕೊಡಿಸುವುದಾಗಿ ಆಮಿಷ ಒಡ್ಡಿ ಯಾರಿಗೂ ಹೇಳದಂತೆ ತಾಕೀತು ಮಾಡಿದರು ಎಂದು ತಿಳಿಸಿದ್ದಾಳೆ. 'ಮೇಡಂ ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರ ಮನೆಗೆ ಹಲವು ಬಾರಿ ನನ್ನನ್ನು ಕರೆದೊಯ್ದರು. ಎಲ್ಲಾ ಶಿಕ್ಷಕರು ಮದ್ಯ ಕುಡಿದು ನಂತರ ನನ್ನ ಬಟ್ಟೆ ತೆಗೆದು ಕೆಟ್ಟ ಕೆಲಸ ಮಾಡುತ್ತಿದ್ದರು' ಎಂದೊಬ್ಬ ಬಾಲಕಿ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

ಒಬ್ಬ ಸಂತ್ರಸ್ತೆಯ ತಂದೆ ಶಾಲೆಗೆ ಹೋಗಿ ವಿಚಾರಿಸಿದಾಗ ಅವರಿಗೂ ಪ್ರಾಣ ಬೆದರಿಕೆ ಹಾಕಿ, ತಮಗೆ ರಾಜಕೀಯ ಪ್ರಭಾವ ಇದೆ ಎಂದು ಮೊಂಡಾಟ ನಡೆಸಿದರು ಎಂದು ಆರೋಪಿಸಲಾಗಿದೆ. ಈ ಸಂಬಂಧವಾಗಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಠಾಣಾಧಿಕಾರಿ ಮುಕೇಶ್​ ಯಾದವ್​ ತಿಳಿಸಿದ್ದಾರೆ. (ಏಜೆನ್ಸೀಸ್)


SHARE THIS

Author:

0 التعليقات: