Monday, 6 December 2021

ಕ್ರೈಸ್ತ ಸಮುದಾಯದ ಮೇಲೆ ಉತ್ತರ ಪ್ರದೇಶದಲ್ಲಿ ಗರಿಷ್ಠ ದಾಳಿ ಪ್ರಕರಣಗಳು: ಸತ್ಯಶೋಧನಾ ವರದಿ


 ಕ್ರೈಸ್ತ ಸಮುದಾಯದ ಮೇಲೆ ಉತ್ತರ ಪ್ರದೇಶದಲ್ಲಿ ಗರಿಷ್ಠ ದಾಳಿ ಪ್ರಕರಣಗಳು: ಸತ್ಯಶೋಧನಾ ವರದಿ

ಹೊಸದಿಲ್ಲಿ: ಕ್ರೈಸ್ತ ಸಮುದಾಯದ ಸದಸ್ಯರು ಹಾಗೂ ಸಮುದಾಯದ ಪ್ರಾರ್ಥನಾ ಸ್ಥಳಗಳ ಮೇಲೆ ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ದಾಳಿಗಳು ನಡೆದಿವೆ ಎಂದು ರವಿವಾರ ಬಿಡುಗಡೆಗೊಂಡ ಸತ್ಯಶೋಧನಾ ವರದಿಯೊಂದು ತಿಳಿಸಿದೆ.

ಎನ್‍ಜಿಒಗಳಾದ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮತ್ತು ಯುನೈಟೆಡ್ ಅಗೇನ್ಸ್ಟ್ ಹೇಟ್ ಜಂಟಿಯಾಗಿ "ಕ್ರಿಶ್ಚಿಯನ್ಸ್ ಅಂಡರ್ ಅಟ್ಯಾಕ್ ಇನ್ ಇಂಡಿಯಾ" ಎಂಬ ಹೆಸರಿನ ಈ ವರದಿಯನ್ನು ಹೊರತಂದಿವೆ. ದೇಶಾದ್ಯಂತ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ 305 ಘಟನೆಗಳು ವರದಿಯಾಗಿವೆ ಎಂದು ವರದಿ ತಿಳಿಸಿದೆ.

ಯುನೈಟೆಡ್ ಕ್ರಿಶ್ಚಿಯನ್ ಫೋರಂನ ಸಹಾಯವಾಣಿಗೆ ಬಂದ ಕರೆಗಳ ಆಧಾರದಲ್ಲಿ  ಈ ಅಂಕಿಅಂಶ ಒದಗಿಸಲಾಗಿದ್ದು ಸಂಸ್ಥೆಗೆ ಒಟ್ಟು 1,362 ಕರೆಗಳು ಬಂದಿದ್ದವು.

ಒಟ್ಟು 288 ಗುಂಪು ದಾಳಿ ಪ್ರಕರಣಗಳು ನಡೆದಿವೆ ಹಾಗೂ 28 ಪ್ರಕರಣಗಳಲ್ಲಿ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿಗಳಾಗಿವೆ ಎಂದು ವರದಿ ಹೇಳಿದೆ.

ಒಟ್ಟು 305 ಪ್ರಕರಣಗಳ ಪೈಕಿ 66 ಪ್ರಕರಣಗಳು ಉತ್ತರ ಪ್ರದೇಶದಿಂದ, 47 ಪ್ರಕರಣಗಳು ಛತ್ತೀಸಗಢದಿಂದ ಹಾಗೂ 32 ಪ್ರಕರಣಗಳು ಕರ್ನಾಟಕದಿಂದ ವರದಿಯಾಗಿವೆ. ಸೆಪ್ಟಂಬರಿನಲ್ಲಿ ಗರಿಷ್ಠ 69 ಪ್ರಕರಣಗಳು, ಆಗಸ್ಟ್ ತಿಂಗಳಿನಲ್ಲಿ 50 ಹಾಗೂ ಜನವರಿಯಲ್ಲಿ 37 ಪ್ರಕರಣಗಳು ವರದಿಯಾಗಿವೆ.  ದಾಳಿಗಳಲ್ಲಿ 1,331 ಮಹಿಳೆಯರು, 588 ಆದಿವಾಸಿಗಳು ಹಾಗೂ 513 ದಲಿತರು ಗಾಯಗೊಂಡಿದ್ದರು ಎಂದೂ ಸತ್ಯಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ವರದಿಯನ್ನು ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾದೋ ಬಿಡುಗಡೆಗೊಳಿಸಿದರು.


SHARE THIS

Author:

0 التعليقات: