Tuesday, 21 December 2021

ಅಮೆರಿಕ: ಒಮೈಕ್ರಾನ್‌ನಿಂದ ಪ್ರಥಮ ಸಾವಿನ ಪ್ರಕರಣ ವರದಿ

ಅಮೆರಿಕ: ಒಮೈಕ್ರಾನ್‌ನಿಂದ ಪ್ರಥಮ ಸಾವಿನ ಪ್ರಕರಣ ವರದಿ

ವಾಷಿಂಗ್ಟನ್, ಡಿ.21: ಅಮೆರಿಕದ ಟೆಕ್ಸಾಸ್‌ನಲ್ಲಿ ಸೋಮವಾರ ಒಮೈಕ್ರಾನ್ ಸೋಂಕಿನಿಂದ ಓರ್ವ ಮೃತಪಟ್ಟಿದ್ದು ಇದು ದೇಶದಲ್ಲಿ ಹೊಸ ರೂಪಾಂತರ ಸೋಂಕಿನಿಂದ ಸಂಭವಿಸಿದ ಪ್ರಥಮ ಸಾವಿನ ಪ್ರಕರಣವಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಲಸಿಕೆ ಪಡೆಯದ , 50-60 ವರ್ಷದ ವ್ಯಕ್ತಿ ಕೊರೋನ ಸೋಂಕಿನ ಗಂಭೀರ ಲಕ್ಷಣದಿಂದ ಆಸ್ಪತ್ರೆಗೆ ದಾಖಲಾಗಿದ್ದು ಸೋಮವಾರ ಮೃತಪಟ್ಟಿದ್ದಾನೆ. ಇದು ದೇಶದಲ್ಲಿ ಒಮೈಕ್ರಾನ್ ಸೋಂಕಿನಿಂದ ಮೃತಪಟ್ಟ ಪ್ರಥಮ ಪ್ರಕರಣವಾಗಿರುವ ಸಾಧ್ಯತೆಯಿದೆ ಎಂದು ಟೆಕ್ಸಾಸ್ ಕೌಂಟಿಯ ನ್ಯಾಯಾಧಿಕಾರಿ ಲೀನಾ ಹಿಡಾಲ್ಗೋ ಟ್ವೀಟ್ ಮಾಡಿದ್ದಾರೆ. ಡಿಸೆಂಬರ್ 18ಕ್ಕೆ ಅಂತ್ಯಗೊಳ್ಳುವ ವಾರಕ್ಕೆ ಸಂಬಂಧಿಸಿ, ಅಮೆರಿಕದಲ್ಲಿ ದಾಖಲಾಗಿರುವ ಒಟ್ಟು ಕೊರೋನ ಸೋಂಕಿನ ಪ್ರಕರಣಗಳ 73%ದಷ್ಟು ಪ್ರಕರಣ ಒಮೈಕ್ರಾನ್ ಸೋಂಕಿಗೆ ಸಂಬಂಧಿಸಿದೆ ಎಂದು ಅಮೆರಿಕದ ಆರೋಗ್ಯ ಇಲಾಖೆ ಹೇಳಿದೆ.

ವಿಶ್ವದಲ್ಲಿ ಒಮೈಕ್ರಾನ್ ಸೋಂಕಿನಿಂದ ಮೃತಪಟ್ಟ ಪ್ರಥಮ ಅಧಿಕೃತ ಪ್ರಕರಣ ಡಿಸೆಂಬರ್ ಆರಂಭದಲ್ಲಿ ಬ್ರಿಟನ್‌ನಲ್ಲಿ ದಾಖಲಾಗಿದೆ. ಬ್ರಿಟನ್‌ನಲ್ಲಿ ಇದುವರೆಗೆ ಒಮೈಕ್ರಾನ್ ಸೋಂಕಿನಿಂದ 12 ಮಂದಿ ಮೃತಪಟ್ಟಿದ್ದು 104 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬ್ರಿಟನ್‌ನ ಉಪಪ್ರಧಾನಿ ಡೊಮಿನಿಕ್ ರ್ಯಾಬ್ ಸೋಮವಾರ ಹೇಳಿದ್ದಾರೆ.SHARE THIS

Author:

0 التعليقات: