Saturday, 4 December 2021

ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಸರಳಿಕಟ್ಟಿ ಸೆಂಟರ್ ವತಿಯಿಂದ ಅನುಸ್ಮರಣೆ ಮಜ್ಲಿಸ್

ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ  
ಸರಳಿಕಟ್ಟಿ ಸೆಂಟರ್ ವತಿಯಿಂದ ಅನುಸ್ಮರಣೆ ಮಜ್ಲಿಸ್

ಸರಳಿಕಟ್ಟಿ; ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಜೀಲಾನಿ ಸ್ಮರಣೆ ಹಾಗೂ ತಾಜುಲ್ ಉಲಮಾ ಮತ್ತು ಅಗಲಿದ ಸುನ್ನೀ ವಿದ್ವಾಂಸರ ಅನುಸ್ಮರಣೆ ಮಜ್ಲಿಸ್,ಸೆಂಟರ್ ಮತ್ತು ಬ್ರಾಂಚ್ ಇಸಾಬ ಅಮೀರ್ ಹಾಗೂ ಸದಸ್ಯರ ಸಂಗಮ G M KUNHI ಅಧ್ಯಕ್ಷತೆಯಲ್ಲಿ ಅಲ್ ಮದೀನತುಲ್ ಮುನವ್ವರ ಮೂಡಡ್ಕದಲ್ಲಿ ನಡೆಯಿತು.ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಸಖಾಫಿ ಸ್ವಾಗತಿಸಿದರು

ದ.ಕ.ಜಿಲ್ಲಾ ಈಸ್ಟ್ ಎಸ್ ವೈ ಎಸ್ ಅಧ್ಯಕ್ಷರು ಅಬೂಬಕ್ಕರ್ ಸಅದಿ ಮಜೂರು ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತಾಡುತ್ತಾ ಕಾರ್ಯಕರ್ತರು ಪಾಲಿಸಬೇಕಾದ ತತ್ವಗಳು ಸಮಯ ಪಾಲನೆ ಸರಿಯಾಗಿ ನಿರ್ವಹಿಸಿ ಮಾದರಿ ಸದಸ್ಯರಾಗಿ ಎಂದು ತಿಳಿಸುತ್ತಾ ಸರಳಿಕಟ್ಟೆ ಎಸ್ ವೈ ಎಸ್ ಸೆಂಟರ್ ನ ಕಾರ್ಯವೈಖರಿಯನ್ನು ಪ್ರಶಂಶಿದರು. ಸರಳಿಕಟ್ಟೆ ಸೆಂಟರ್ ಉಪಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ ಪ್ರಸ್ತಾವಿಕ ಬಾಷಣಗೈದರು. ಸರಳಿಕಟ್ಟೆ ಸೆಂಟರ್ ಉಸ್ತುವಾರಿ ದ,ಕ,ಜಿಲ್ಲಾ ಎಸ್ ವೈ ಎಸ್ ಸದಸ್ಯರು ಉಸ್ಮಾನ್ ಜೌಹರಿ ನೆಲ್ಯಾಡಿ ಆಶಂಶ ಬಾಷಣಗೈದರು. 

   ಬಹು  GM ಮುಹಮ್ಮದ್ ಕಾಮಿಲ್ ಸಖಾಫಿ  SYS ರಾಜ್ಯ ಇಸಾಬ ಡೈರೆಕ್ಟರ್ ಸೆಂಟರ್ ಮತ್ತು ಬ್ರಾಂಚ್ ಎಸ್ ವೈ ಎಸ್ ಸದಸ್ಯರು ಇಸಾಬ ಅಮೀರ್ ಮತ್ತು ಇಸಾಬ ಸದಸ್ಯರಿಗೆ ತನ್ನ ವಾಕುಚಾತುರ್ಯದ ಮೂಲಕ  ವಿಷಯ ಮಂಡಿಸಿದರು. 

ಜಿಲ್ಲಾ ಮಹಾಸಭೆಗೆ ಹಾಜರಾಗಲು ಪ್ರತ್ಯೇಕ ಆಹ್ವಾನ ನೀಡಲಾಯಿತು. ವೇದಿಕೆಯಲ್ಲಿ ಸ್ಥಳಿಯ ಮುದರ್ರಿಸ್ ಸಲಾಹುದ್ದೀನ್ ಸಖಾಫಿ, ಉಸ್ಮಾನ್ ಹಾಜಿ, ಅಬ್ದುಲ್ ಹಮೀದ್ ಉಸ್ತಾದ್ ಅಜಿಲಮೊಗರು, ಉಸ್ಮಾನ್ ಸ ಅದಿ, ಪ್ರ ಕಾರ್ಯದರ್ಶಿ ಸೂಫಿ ಬಾಗ್ಲೋಡಿ, ದಅವ ಕಾರ್ಯದರ್ಶಿ ನಾಸಿರ್ ಇಸಾಬ ಅಮೀರ್ ಅಶ್ರಫ್ ಜೋಗಿಬೆಟ್ಟು  ಉಪಸ್ಥಿತಿದ್ದರು.

ಸೋಶಿಯಲ್ ಕಾರ್ಯದರ್ಶಿ ಅಬ್ದರ್ರಝಾಕ್ ಬೈಲಮೇಲು ವಂದಿಸಿದರು.  

ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.


SHARE THIS

Author:

0 التعليقات: