Saturday, 11 December 2021

ಅಜ್‌ಮೀರ್ ಶರೀಫ್‌ನಲ್ಲಿ "ಝಾವಿಯ ಖುರ್‌ಆನ್ ವಿಲೇಜ್ "ಗೆ ವಿಧ್ಯುಕ್ತ ಚಾಲನೆ


 ಅಜ್‌ಮೀರ್ ಶರೀಫ್‌ನಲ್ಲಿ "ಝಾವಿಯ ಖುರ್‌ಆನ್ ವಿಲೇಜ್ "ಗೆ ವಿಧ್ಯುಕ್ತ ಚಾಲನೆ

ಮಂಗಳೂರು ತಾಲೂಕಿನ ತಲಪಾಡಿ- ಕೆಸಿ ರೋಡ್  ವಿದ್ಯಾ ನಗರದ 'ಮಸ್‌ಕನೇ ಖಾಜಾ ಗರೀಬ್ ನವಾಝ್‌'ನಲ್ಲಿ  ಪ್ರಾರಂಭಗೊಳ್ಳುತ್ತಿರುವ 'ಝಾವಿಯಾ ಖುರ್‌ಆನ್ ವಿಲ್ಲೇಜ್' ಎಂಬ ಹೆಣ್ಣುಮಕ್ಕಳ ಖುರ್‌ಆನ್ ಕಂಠಪಾಠ ಮತ್ತು ಅಧ್ಯಯನ ಕೇಂದ್ರದ ಔಪಚಾರಿಕ ಉಧ್ಘಾಟನೆಯು ಅಜ್‌ಮೀರ್ ಶರೀಫ್‌ನಲ್ಲಿ ಖಾಜಾ ಗರೀಬ್ ನವಾಝ್ ಹಝ್ರತ್ ಮುಈನುದ್ದೀನ್ ಚಿಶ್ತೀ (ರ) ಅವರ ಸನ್ನಿಧಿಯಲ್ಲಿ ನೆರವೇರಿತು.

ಅಜ್‌ಮೀರ್ ದರ್ಗಾದ ಮುಖ್ಯಸ್ಥರಾದ ಗದ್ದೀ ನಶೀನ್ ಸಯ್ಯಿದ್ ಮುಹಮ್ಮದ್ ಮಹ್ದೀ ಮಿಯಾ ಚಿಶ್ತೀ ಅವರು ಸಂಸ್ಥೆಗೆ ಚಾಲನೆ ನೀಡಿದರು. ಸಯ್ಯಿದ್ ನೂರುಲ್ ಐನ್ ಚಿಶ್ತಿ ಅಝ್‌ಹರಿ ಶುಭ ಹಾರೈಸಿದರು. ಸಂಸ್ಥೆಯ ಪ್ರಿನ್ಸಿಪಾಲ್ ಅಲ್ ಹಾಫಿಝ್ ಮುಹಮ್ಮದ್ ವಹೀದ್ ನ‌ಈಮಿ ಕಾಮಿಲ್ ಸಖಾಫಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ಮಹಿಳಾ ವಿದ್ಯಾಭ್ಯಾಸ ರಂಗದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಈ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಅವರ ಸಾರಥ್ಯದಲ್ಲಿ ಝಾವಿಯಾ ಕಾರ್ಯಾಚರಿಸುತ್ತಿದ್ದು, ಒಂದನೇ ಹಂತದಲ್ಲಿ ಹೆಣ್ಮಕ್ಕಳಿಗೆ ಶಾಲಾ ಶಿಕ್ಷಣದ ಜತೆ ಖುರ್‌ಆನ್ ಕಂಠಪಾಠ ಮಾಡಿಸುವ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ತಮಿಳುನಾಡಿನ ಏರ್‌ವಾಡಿ ದರ್ಗಾ ಸಮೀಪದ 'ರಾಜಾಕ್ಕಲ್ ಪಾಳಯಂ' ಎಂಬಲ್ಲಿ  'ಖುತ್‌ಬ್ ಸುಲ್ತಾನ್ ಖುರ್‌ಆನ್ ವಿಲ್ಲೇಜ್' ಕಾರ್ಯಾಚರಿಸುತ್ತಿದ್ದು, ಪ್ರಿನ್ಸಿಪಾಲ್ ಉಸ್ತಾದ್ ವಹೀದ್ ನ‌ಈಮಿ ಅವರ ನೇತೃತ್ವದಲ್ಲಿ ನುರಿತ ಹಾಫಿಝ‌್‌ಗಳು ಕ್ಲಾಸ್‌ಗಳಿಗೆ ನೇತೃತ್ವ ನೀಡುತ್ತಿದ್ದಾರೆ. 

ಇದರ ಈ ವರ್ಷದ ದಾಖಲಾತಿ ಪೂರ್ಣಗೊಂಡಿದ್ದು ಮುಂದಿನ ವರ್ಷದ ದಾಖಲಾತಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಎಚ್.ಎ.ತಿಳಿಸಿದ್ದಾರೆ.


SHARE THIS

Author:

0 التعليقات: