ಬೆಚ್ಚಿಬಿದ್ದ ಜನರು: ಭಾರೀ ಸದ್ದಿನೊಂದಿಗೆ ಭೂಕಂಪನದ ಅನುಭವ
ಬೀದರ್ : ಜಿಲ್ಲೆಯಲ್ಲಿ ಈಗಾಗಲೇ ಅನೇಕ ಬಾರಿ ಭೂ ಕಂಪನದ ಅನುಭವ ಜನರಿಗೆ ಆಗಿತ್ತು. ಇದರಿಂದಾಗಿ ಭಯಗೊಂಡಿದ್ದ ಜನರಲ್ಲಿ, ನಿನ್ನೆ ರಾತ್ರಿ ಮೂರು ಭಾರಿ ಭಾರೀ ಸದ್ದಿನೊಂದಿಗೆ ಉಂಟಾದಂತ ಭೂಮಿಯ ಕಂಪನದಿಂದ, ಜನರು ಬೆಚ್ಚಿಬೀಳುವಂತೆ ಆಗಿದೆ.
ಬೀದರ್ ಜಿಲ್ಲೆಯ ಹುಮಾನಾಬಾದ್ ತಾಲೂಕಿನ ಕೊಡಂಬಲ್ ಗ್ರಾಮದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದಂತ ಅನುಭವ ನಿನ್ನೆ ಸಂಜೆ 6.30 ರಿಂದ 7.30ರ ಸಮಯದಲ್ಲಿ ಆಗಿದೆ. ಮೂರು ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದಂತ ಅನುಭವ ಜನರಿಗೆ ಉಂಟಾಗಿದೆ. ಇದರಿಂದಾಗಿ ಜನರು ಭಯಭೀತಗೊಂಡು ಮನೆಯಿಂದ ಹೊರ ಓಡಿ ಬಂದು ಕೆಲಸ ಸಮಯ ಕಳೆಯುವಂತೆ ಆಯ್ತು.
ಅಂದಹಾಗೇ ಮೂರು ತಿಂಗಳ ಹಿಂದೆ ಹುಣಸನಾಳ, ಹೊಸಳ್ಳಿ ಗ್ರಾಮದಲ್ಲೂ ಈ ರೀತಿಯ ಶಬ್ದ ಕೇಳಿ ಬಂದಿತ್ತು. ಭಾರೀ ಶಬ್ದದಿಂದ ಉಂಟಾದಂತ ಭೂ ಕಂಪನದ ಅನುಭವಕ್ಕೆ, ಜನರು ಬೆಚ್ಚಿ ಬಿದ್ದಿದ್ದರು. ಆಗ ಭೂಗರ್ಭ ವಿಜ್ಞಾನಿಗಳು ಗ್ರಾಮಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದು, ಪರಿಶೀಲನೆ ನಡೆಸಿದ್ದರು. ಈ ಬಳಿಕ ಮತ್ತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದಂತ ಅನುಭವ ಉಂಟಾಗಿದ್ದು, ಜನರನ್ನು ಭಯಭೀತಗೊಳಿಸುವಂತಾಗಿದೆ
0 التعليقات: