Tuesday, 7 December 2021

ವಶಪಡಿಸಿಕೊಂಡಿರುವ ವಕ್ಫ್ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕು: ಡಾ ಎ.ಪಿ ಅಬ್ದುಲ್ ಹಕೀಂ ಅಝ್ಹರಿ


 ವಶಪಡಿಸಿಕೊಂಡಿರುವ ವಕ್ಫ್ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕು: ಡಾ ಎ.ಪಿ ಅಬ್ದುಲ್ ಹಕೀಂ ಅಝ್ಹರಿ

ಕೋಝಿಕ್ಕೋಡ್: ವಶಪಡಿಸಿಕೊಂಡಿರುವ ವಕ್ಫ್ ಆಸ್ತಿಗಳನ್ನು ಸರಕಾರವು ಮರಳಿ ಪಡೆಯಬೇಕು ಎಂದು ಎಸ್ ವೈ ಎಸ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ಎ.ಪಿ ಅಬ್ದುಲ್ ಹಕೀಮ್ ಅಝ್ಹರಿ ಹೇಳಿದರು. ಕೋಝಿಕ್ಕೋಡ್ ನಲ್ಲಿ ಆಗಿದೆ ಅತ್ಯಧಿಕವಾಗಿ ಆಸ್ತಿಗಳನ್ನು ಅತಿಕ್ರಮವಾಗಿ ವಶಪಡಿಸಿರುವುದು. ಪಟ್ಟಾಳಪಳ್ಳಿ, ಮುಹಿಯುದ್ದೀನ್ ಮಸ್ಜಿದ್ ಸಹಿತ 11 ಮಸ್ಜಿದ್ ಗಳು ಕೋಝಿಕೋಡ್ ನಗರದಲ್ಲಿಯೇ ವಹ್ಹಾಬಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಅವೇಲತ್ ಮುಖಾಂ ಉರೂಸ್‌ ಸಂಬಂಧವಾಗಿ ಕೋಝಿಕ್ಕೋಡ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.

ವಕ್ಫ್ ಆಸ್ತಿಗಳು ಭಾರತದ ಹೊರಗೂ ಕೂಡ ವ್ಯಾಪಕವಾಗಿ ವಶಪಡಿಸಿಕೊಂಡಿದ್ದಾರೆ. ಸುನ್ನಿಗಳು ವಕ್ಫ್ ಮಾಡಿರುವ ಹಲವಾರು ಆಸ್ತಿಗಳನ್ನು ಕೇರಳದಲ್ಲಿ ವಹ್ಹಾಬಿಗಳು ವಶಪಡಿಸಿಕೊಂಡಿದ್ದಾರೆ. ಅದಕ್ಕಿರುವ ಬಹಳ ಉದಾತ್ತವಾದ ಉದಾಹರಣೆಯಾಗಿದೆ ಕೋಝಿಕ್ಕೋಡ್ ನಗರದಲ್ಲಿರುವುದು. ಅವುಗಳ ಬಗ್ಗೆ ತನಿಖೆಯಾಗಬೇಕು. ಅವೆಲ್ಲವನ್ನೂ ಕೂಡ ಹಿಂಪಡೆಯಬೇಕು.

ವಕ್ಫ್ ಆಸ್ತಿಗಳನ್ನು ವಕ್ಫ್ ಮಾಡಿರುವ ವ್ಯಕ್ತಿಯ ಉದ್ದೇಶಗಳಿಗೆ ಅನುಗುಣವಾಗಿ ಉಪಯೋಗಿಸಬೇಕು. ವಕ್ಫ್ ಮಂಡಳಿ ನೇಮಕಾತಿ ಪಾರದರ್ಶಕವಾಗಬೇಕು. ವಕ್ಫ್ ಮಂಡಳಿ ನೇಮಕಾತಿಯಲ್ಲಿ ಎಲ್ಲಾ ವಿಭಾಗಗಳೊಂದಿಗೆ ಆಲೋಚಿಸಿ ಮಾತ್ರವೇ ಸರಕಾರ ತೀರ್ಮಾನ ತೆಗೆಯಬೇಕು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.


SHARE THIS

Author:

0 التعليقات: