Tuesday, 7 December 2021

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಬಿಗ್ ಶಾಕ್ : ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ!

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಬಿಗ್ ಶಾಕ್ : 
ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ! 

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರು ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ನುಗ್ಗೇಕಾಯಿ, ಟೊಮೆಟೋ, ಬೀನ್ಸ್ ಸೇರಿದಂತೆ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಆಪ್ತ ಕಾರ್ಯದರ್ಶಿಗಳ ಜಾಮೀನು ತಿರಸ್ಕರಿಸಿದ ವಿಶೇಷ ನ್ಯಾಯಾಲಯ ಮಳೆಯಿಂದಾಗಿ ತರಕಾರಿ ಬೆಲೆ ನಾಶವಾಗಿರುವುದರಿಂದ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದ್ದು, ನುಗ್ಗೇಕಾಯಿ ಕೆಜಿಗೆ ಬರೋಬ್ಬರಿ 30 ರೂ.ನಿಂದ 200 ರೂ. ಗಡಿ ದಾಟಿದೆ. ಹಾಪ್ ಕಾಮ್ಸ್ ನಲ್ಲಿ 360 ರೂ. ಗೆ ಮಾರಾಟವಾಗಿದೆ. ಮಳೆಯಿಂದಾಗಿ ತರಕಾರಿ ಬೆಳೆಗಳು ನಾಶವಾಗಿರುವುದರಿಂದ ತರಕಾರಿ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ. ಅಗತ್ಯದಷ್ಟು ತರಕಾರಿ ಪೂರೈಕೆಗೆ ಇನ್ನು ಕೆಲವು ದಿನ ಕಾಯಬೇಕಾಗಿದೆ.

ಹಾಪ್ ಕಾಮ್ಸ್ ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ಕೆಜಿಗೆ 360 ರೂ. ಇದ್ದರೆ ಬದನೆ 94, ಟೊಮೆಟೋ 108, ಬದನೆ 94, ಬೀನ್ಸ್ 99, ಕ್ಯಾರೆಟ್ 84, ಆಲೂಗಡ್ಡ 120, ಪುದೀನ 94, ಕೊತ್ತಂಬರಿ 90, ಮೂಲಂಗಿ 80, ಈರುಳ್ಳಿ 35 ರೂ. ಇದೆ.SHARE THIS

Author:

0 التعليقات: