Monday, 13 December 2021

ಮಲ್ಪೆ ಬಂದರು: ದಕ್ಕೆ ನೀರಿಗೆ ಉರುಳಿಬಿದ್ದ ಆಟೋ ರಿಕ್ಷಾ!


 ಮಲ್ಪೆ ಬಂದರು: ದಕ್ಕೆ ನೀರಿಗೆ ಉರುಳಿಬಿದ್ದ ಆಟೋ ರಿಕ್ಷಾ!

ಉಡುಪಿ: ಮಲ್ಪೆ ಬಂದರಿನಲ್ಲಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ದಕ್ಕೆಯ ನೀರಿಗೆ ಬಿದ್ದಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮಲ್ಪೆ ಆಟೋ ರಿಕ್ಷಾ ನಿಲ್ದಾಣದ ಚಂದ್ರ ಸುವರ್ಣ ಎಂಬವರು ಮಲ್ಪೆ ಬಂದರಿಗೆ ತನ್ನ ರಿಕ್ಷಾವನ್ನು ಚಲಾಯಿಸಿಕೊಂಡು ಬಂದಿದ್ದರು. ಅಲ್ಲಿ ರಿಕ್ಷಾ ನಿಯಂತ್ರಣ ತಪ್ಪಿ ಆಳದ ದಕ್ಕೆ ಬಿತ್ತೆನ್ನಲಾಗಿದೆ. ರಿಕ್ಷಾದಲ್ಲಿದ್ದ ಚಂದ್ರ ಸುವರ್ಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಕ್ರೇನ್ ಬಳಸಿ ರಿಕ್ಷಾವನ್ನು ಮೇಲೆತ್ತಲಾಯಿತು.


SHARE THIS

Author:

0 التعليقات: