Wednesday, 1 December 2021

ಕೆ ಎಸ್ ಆರ್ ಟಿ ಸಿ ಬಸ್'ನಲ್ಲಿ ಲಗೇಜ್ ದರ ಹೆಚ್ಚಳ


ಕೆ ಎಸ್ ಆರ್ ಟಿ ಸಿ ಬಸ್'ನಲ್ಲಿ ಲಗೇಜ್ ದರ ಹೆಚ್ಚಳ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ  ದಿನಾಂಕ 01-03-2021ರಿಂದ ನೂತನ ಕೆ ಎಸ್ ಆರ್ ಟಿ ಸಿ ಲಾಜಿಸ್ಟಿಕ್ಸ್ ಸೇವೆಗಳನ್ನು ಆರಂಭಿಸಲಾಗಿದೆ.

ಇದಕ್ಕಾಗಿ ಪ್ರತ್ಯೇಕ ದರ ಪಟ್ಟಿಗಳನ್ನು ಜಾರಿಗೆ ತರಲಾಗಿದೆ. ಆದ್ರೇ ಪ್ರಯಾಣಿಕರ ರಹಿತ ಹಾಗೂ ಪ್ರಯಾಣಿಕ ಸಹಿತ ಲಗೇಜ್ ದರಗಳನ್ನು  ಏಕರೂಪತೆ ತರೋ ಸಲುವಾಗಿ ಲಗೇಜ್ ಟಿಕೆಟ್ ದರಗಳನ್ನು  ಪರಿಷ್ಕರಿಸಲಾಗಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ.

ಈ ಕುರಿತಂತೆ ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾದಂತ ಶಿವಯೋಗಿ ಸಿ ಕಳಸದ ಆದೇಶ ಹೊರಡಿಸಿದ್ದು, ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಹೊರತಾಗಿ, ಪ್ರಯಾಣಿಕರ ಸಹಿತ ಹಾಗೂ ಪ್ರಯಾಣಿಕ ರಹಿತ ಲಗೇಜ್ ಗಳನ್ನು ಸಾಗಿಸಲು ಅವಕಾಶವಿದ್ದು, ಈ ಲಗೇಜ್ ಗಳಿಗೆ ವಿಧಿಸಬೇಕಾದ ಟಿಕೆಟ್ ದರಗಳು, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಉಲ್ಲೇಖಿತ ಆದೇಶಗಳಲ್ಲಿ ತಿಳಿಸಲಾಗಿರುತ್ತದೆ.

ದಿನಾಂಕ 01-03-2021ರಿಂದ ನಿಗಮದಲ್ಲಿ ನೂತನ ಕೆ ಎಸ್ ಆರ್ ಟಿ ಸಿ ಲಾಜಿಸ್ಟಿಕ್ಸ್ ಸೇವೆಗಳನ್ನು ಆರಂಭಿಸಲಾಗಿದೆ. ಈ ವ್ಯವಲ್ಥೆಯ ಅನುಷ್ಠಾನದಲ್ಲಿ ಹೊರಗುತ್ತಿಗೆ ಮೇರೆಗೆ ತಂತ್ರಾಂಶ ಅಭಿವೃದ್ಧಿಗೆ ಹಾಗೂ ವಹಿವಾಟು ನಡೆಸುವ ಏಜೆನ್ಸಿಯವರನ್ನು ಆಯ್ಕೆಗೊಳಿಸಿ, ನಿರ್ವಹಿಸಲಾಗುತ್ತಿದೆ. ಅಲ್ಲದೇ ಇದಕ್ಕಾಗಿ ಪ್ರತ್ಯೇಕ ದರ ಪಟ್ಟಿ ಕೂಡ ಜಾರಿಗೊಳಿಸಲಾಗಿರುತ್ತದೆ.

ಆದ್ರೇ.. ನಿರ್ವಾಹಕರು ಇಟಿಎಂ ಮೂಲಕ ಬುಕ್ಕಿಂಗ್ ಗೊಳಿಸುವ ಪ್ರಯಾಣಿಕ ರಹಿತ ಹಾಗೂ ಪ್ರಯಾಣಿಕ ಸಹಿತ ಲಗೇಜ್ ದರಗಳಲ್ಲಿ ಏಕರೂಪತೆ ಮಾಡುವ ಸಲುವಾಗಿ ನಿರ್ವಾಹಕರ ಇಟಿಎಂ ಮೂಲಕ ವಿತರಣೆಯಲ್ಲಿರುವ ಲಗೇಜ್ ಟಿಕೆಟ್ ದರಗಳನ್ನು ಸಮನ್ವಯಗೊಳಿಸಿ, ಪರಿಷ್ಕರಿಸಲು ತೀರ್ಮಾನಿಸಲಾಗಿದೆ.

ಈ ಪರಿಷ್ಕೃತ ದರಗಳು ದಿನಾಂಕ 10-12-2021ರಿಂದ ಜಾರಿಗೆ ಬರಲಿದ್ದು, ಕೆ ಎಸ್ ಆರ್ ಟಿ ಸಿ ಪ್ರಯಾಣಿಕರು, ಪ್ರಯಾಣಿಕ ರಹಿತ ಲಗೇಜ್ ಕಳುಹಿಸುವವರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಹೀಗಿದೆ ಪರಿಷ್ಕೃತ ಕೆ ಎಸ್ ಆರ್ ಟಿ ಸಿ ನೂತನ ಲಗೇಜ್ ದರ ಪಟ್ಟಿ

1 ರಿಂದ 5 ಹಂತ - ಹಿಂದಿನ ದರ ರೂ.5, ಈಗಿನ ದರ ರೂ.5

6 ರಿಂದ 10ನೇ ಹಂತ - ಹಿಂದಿನ ದರ ರೂ.10, ನೂತನ ದರ ರೂ.10

11 ರಿಂದ 15ನೇ ಹಂತ - ಹಿಂದಿನ ದರ ರೂ.15, ನೂತನ ದರ ರೂ.17

16 ರಿಂದ 20ನೇ ಹಂತ - ಹಿಂದಿನ ದರ ರೂ.18, ನೂತನ ದರ ರೂ.21

21 ರಿಂದ 25ನೇ ಹಂತ - ಹಿಂದಿನ ದರ ರೂ.21, ನೂತನ ದರ ರೂ.24

26 ರಿಂದ 30ನೇ ಹಂತ - ಹಿಂದಿನ ದರ ರೂ.25, ನೂತನ ದರ ರೂ.28

31 ರಿಂದ 35ನೇ ಹಂತ - ಹಿಂದಿನ ದರ ರೂ.29, ನೂತನ ದರ ರೂ.32

36 ರಿಂದ 40ನೇ ಹಂತ - ಹಿಂದಿನ ದರ ರೂ.33, ನೂತನ ದರ ರೂ.36

41 ರಿಂದ 45ನೇ ಹಂತ - ಹಿಂದಿನ ದರ ರೂ.36, ನೂತನ ದರ ರೂ.39

46 ರಿಂದ 50ನೇ ಹಂತ - ಹಿಂದಿನ ದರ ರೂ.40, ನೂತನ ದರ ರೂ.43

51 ರಿಂದ 55ನೇ ಹಂತ - ಹಿಂದಿನ ದರ ರೂ.44, ನೂತನ ದರ ರೂ.47

56 ರಿಂದ 60ನೇ ಹಂತ - ಹಿಂದಿನ ದರ ರೂ.48, ನೂತನ ದರ ರೂ.51

61 ರಿಂದ 65ನೇ ಹಂತ - ಹಿಂದಿನ ದರ ರೂ.51, ನೂತನ ದರ ರೂ.54

66 ರಿಂದ 70ನೇ ಹಂತ - ಹಿಂದಿನ ದರ ರೂ.55, ನೂತನ ದರ ರೂ.58

71 ರಿಂದ 75ನೇ ಹಂತ - ಹಿಂದಿನ ದರ ರೂ.59, ನೂತನ ದರ ರೂ.26

ಹೀಗೆ ಸಾಗುತ್ತಾ ಕೊನೆಗೆ 156 ರಿಂದ 160ನೇ ಹಂತದಲ್ಲಿ ರೂ.123 ಇದ್ದಂತ ದರವನ್ನು, ರೂ.126ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಲಾಗಿದೆ.


SHARE THIS

Author:

0 التعليقات: