ಕಾಸರಗೋಡು: ಕೇಬಲ್ ಟಿವಿ ನೌಕರನ ಸಂಶಯಾಸ್ಪದ ಸಾವು
ಕಾಸರಗೋಡು: ಕೇಬಲ್ ಟಿವಿ ನೌಕರನೋರ್ವ ಸಂಶಯಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರ ಹೊರ ವಲಯದ ನಾಯಮ್ಮರಮೂಲೆಯ ಎಂಬಲ್ಲಿಂದ ವರದಿಯಾಗಿದೆ.
ನಾಯಮ್ಮರಮೂಲೆ ನಿವಾಸಿ ಸುಲೈಮಾನ್ (45) ಮೃತಪಟ್ಟವರು. ಇವರು ಕೇಬಲ್ ಟಿವಿ ಟೆಕ್ನಿಷಿಯನ್ ಆಗಿದ್ದರು.
ಇವರು ಕೆಲಸ ಮುಗಿಸಿ ಎಂದಿನಂತೆ ಶನಿವಾರ ರಾತ್ರಿ ಮನೆಗೆ ಬರದ ಹಿನ್ನೆಲೆಯಲ್ಲಿ ಮನೆಮಂದಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ರವಿವಾರ ಬೆಳಗ್ಗೆ ಅವರು ಕೆಲಸ ಮಾಡುತ್ತಿದ್ದ ನಾಯಾಮ್ಮರಮೂಲೆಯ ಕೇಬಲ್ ಟಿವಿ ಕಚೇರಿ ಪರಿಸರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಲೆ ಹಾಗೂ ಕಾಲಿನಲ್ಲಿ ಗಾಯಗಳು ಕಂಡುಬಂದಿದೆ ಎಂದು ತಿಳಿದುಬಂದಿದೆ.
ವಿದ್ಯಾನಗರ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
0 التعليقات: