Tuesday, 7 December 2021

ಗಾಂಜಾ, ಮಾದಕ ವಸ್ತು ಸಹಿತ ಆರೋಪಿ ಸೆರೆ


ಗಾಂಜಾ, ಮಾದಕ ವಸ್ತು ಸಹಿತ ಆರೋಪಿ ಸೆರೆ

ಮಂಗಳೂರು, ಡಿ.7: ಕೋಟೇಕಾರ್ ಸಮೀಪದ ಸೋಮೇಶ್ವರ ಸೋಮನಾಥ ನಗರ ಬಡಾವಣೆಯ ಪೂರ್ವಿತ್ ಮಿನಿ ಮಾರ್ಟ್ ಬಳಿ ಗಾಂಜಾ ಮತ್ತು ಹ್ಯಾಶಿಶ್ ಲಿಕ್ವಿಡ್ ಹೊಂದಿದ್ದ ಆರೋಪಿ ಕೋಟೆಕಾರ್‌ನ ಹರ್ಷವರ್ಧನ ಎಂಬಾತನನ್ನು ಅಬಕಾರಿ ಪೊಲೀಸ್ ತಂಡ ಬಂಧಿಸಿದೆ.

ಬಂಧಿತ ಆರೋಪಿಯಿಂದ 120 ಗ್ರಾಂ ಗಾಂಜಾ ಹಾಗೂ 20 ಗ್ರಾಂ ಹ್ಯಾಶಿಶ್ ಲಿಕ್ವಿಡ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಶೈಲಜಾ ಮಾರ್ಗದರ್ಶನದಂತೆ ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್ ನೇತೃತ್ವದಲ್ಲಿ ಸಿದ್ಧಪ್ಪ ಮೇಟಿ, ಆಶಿಶ್ ಕಾರ್ಯಾಚರಣೆ ನಡೆಸಿದ್ದಾರೆ.


 


SHARE THIS

Author:

0 التعليقات: