Wednesday, 1 December 2021

ಆಯತಪ್ಪಿ ಬಾವಿಗೆ ಬಿದ್ದ ಕಾರು: ತಾಯಿ-ಮಗನ ಸಾವು.


ಆಯತಪ್ಪಿ ಬಾವಿಗೆ ಬಿದ್ದ ಕಾರು: ತಾಯಿ-ಮಗನ ಸಾವು.

ಚಿತ್ತಾಪುರ (ತೆಲಂಗಾಣ): ರಸ್ತೆಯ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿದ ಕಾರೊಂದು ಬಾವಿಯಲ್ಲಿ ಬಿದ್ದು ಅದರಲ್ಲಿದ್ದ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇವರ ರಕ್ಷಣೆಗೆ ಹೋಗಿದ್ದ ಈಜುಗಾರ ಕೂಡ ಮೃತಪಟ್ಟಿದ್ದಾರೆ.

ಸಿದ್ದಿಪೇಟ್ ಜಿಲ್ಲೆಯ ದುಬ್ಬಾಕ ಮಂಡಲ್​ನ ಚಿತ್ತಾಪುರದಲ್ಲಿ ಈ ಘಟನೆ ಸಂಭವಿಸಿದೆ. ತಾಯಿ ಮತ್ತು ಮಗ ಕಾರಿನಲ್ಲಿ ರಾಮಯಂಪೇಟೆಯಿಂದ ಸಿದ್ದಿಪೇಟ್​​ ಕಡೆಗೆ ಹೊರಟಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಕಾರು ಬಾವಿಯೊಳಗೆ ಬಿದ್ದಿದೆ. ಘಟನೆಯಲ್ಲಿ ಮೇದಕ್ ಜಿಲ್ಲೆಯ ನಿಜಾಂಪೇಟ್​​ ಮಂಡಲದ ನಂದಿಗಾಮ ಗ್ರಾಮದ ಭಾಗ್ಯಲಕ್ಷ್ಮಿ ಹಾಗೂ ಅವರ ಪುತ್ರ 26 ವರ್ಷದ ಅಕುಲ್‌ ಪ್ರಶಾಂತ್‌ ಮೃತಪಟ್ಟಿದ್ದಾರೆ. ಇವರನ್ನು ರಕ್ಷಿಸಲು ಹೋದ ನರಸಿಂಹಲು ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳೀಯರ ಸಹಾಯದಿಂದ ಕಾರ್ಯಾಚರಣೆ ನಡೆಸಿ, ಬಾವಿಯಲ್ಲಿದ್ದ ನೀರನ್ನು ಮೋಟಾರುಗಳ ಮೂಲಕ ಖಾಲಿ ಮಾಡಿಸಿದ್ದಾರೆ. ನಂತರ ಕ್ರೇನ್ ಸಹಾಯದಿಂದ ಕಾರು ಹಾಗೂ ಮೃತದೇಹಗಳನ್ನು ಹೊರತೆಗೆದಿದ್ದಾರೆ.SHARE THIS

Author:

0 التعليقات: