Monday, 13 December 2021

ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ಯುಎಇ ವತಿಯಿಂದ ಅಲ್ ಮಕಾರಿಮ್ ಕಾನ್ಫರೆನ್ಸ್


 ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ಯುಎಇ ವತಿಯಿಂದ ಅಲ್ ಮಕಾರಿಮ್ ಕಾನ್ಫರೆನ್ಸ್

ದುಬೈ:  ಕರಾವಳಿ ಕರ್ನಾಟಕದ ಪ್ರಮುಖ ಧಾರ್ಮಿಕ ಶಿಕ್ಷಣ ಸಂಸ್ಥೆ ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ನಚ್ಚಬೆಟ್ಟು ಇದರ ಯುಎಇ ಸಮಿತಿ ವತಿಯಿಂದ "ಅಲ್ ಮಕಾರಿಮ್" ಆಧ್ಯಾತ್ಮಿಕ ಸಂಗಮ  ಕಾರ್ಯಕ್ರಮವು ಯುಏಈಯಾದ್ಯಂತ ವಿವಿಧ ಎಮಿರೇಟ್ಸ್ ಗಳಲ್ಲಿ  ನಡೆಸಿ ಸಮರೋಪ ಸಮಾವೇಶ  ದುಬೈ ಅಲ್ ಕಿಸೈಸ್ ರಿವಾಕ್ ಓಷಾ ಆಡಿಟೋರಿಯಂ ನಲ್ಲಿ ನಡೆಯಿತು

ಸ್ವಾಗತ ಸಮಿತಿ ಚೈರ್ ಮ್ಯಾನ್ ಇಬ್ರಾಹಿಂ ಹಾಜಿ ಬ್ರೈಟ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಸ್ತುತ ಸಮಾವೇಶ ಸಯ್ಯದ್ ನಿಜಾಮುದ್ದೀನ್ ಬಾಫಕಿ ತಂಗಳ್ ಉದ್ಘಾಟಿಸಿದರು.

ದಾರುಲ್ ಮುಸ್ತಫಾ ಮೋರಲ್ ಅಕಾಡಮಿಯ ಸಾರಥಿ ಟಿ.ಎಂ ಮುಹಿಯ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಪ್ರಭಾಷಣ ಮಾಡಿದರು.

ಕೆಸಿಎಫ್ ಐಎನ್ ಸಿ ಫೈನಾನ್ಸ್ ಕಂಟ್ರೋಲರ್ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ, KKM ಕಾಮಿಲ್ ಸಖಾಫಿ, ಅಶ್ರಫ್ ಹಾಜಿ ಅಡ್ಯಾರ್, ಶುಭ ಹಾರೈಸಿ ಮಾತನಾಡಿದರು. ಬ್ರೈಟ್ ಇಬ್ರಾಹಿಂ ಹಾಜಿ ಅಧ್ಯಕ್ಷೀಯ ಭಾಷಣ ಮಾಡಿದರು. ಉಮರ್ ಫಾರೂಕ್ ಅಮಾನಿ ಬುರ್ದಾ ಆಲಾಪನೆ ಮಾಡಿದರು 

ಇಬ್ರಾಹಿಂ ಮದನಿ, ಹಸೈನಾರ್ ಅಮಾನಿ ಅಬುಧಾಬಿ, ಸಿದ್ದೀಕ್ ಅಮಾನಿ ಅಜ್ಮಾನ್, ಇಸ್ಮಾಯಿಲ್ ಮದನಿ ನಗರ, ಇಕ್ಬಾಲ್ ಕಾಜೂರ್, ಮೂಸ ಹಾಜಿ ಬಸರ ಮತ್ತಿತರರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ದಾರುಲ್ ಮುಸ್ತಫಾದ ಅಧಿಕೃತ ಲೋಗೋ ಬಿಡುಗಡೆ ಮಾಡಲಾಯಿತು ಹಾಗೂ ದಾರುಲ್ ಮುಸ್ತಫಾ ಯುಎಇ ಸಮಿತಿ ರಚಿಸಲಾಯಿತು.ಕಾರ್ಯಕ್ರಮವನ್ನು ಮುಸ್ತಫಾ ಮಾಸ್ಟರ್ ಸ್ವಾಗತಿಸಿ ಮನ್ಸೂರ್ ಝುಹ್ರಿ ವಂದಿಸಿದರು.
SHARE THIS

Author:

0 التعليقات: