Friday, 24 December 2021

ಕರ್ಪುತಲಾದಲ್ಲಿ ಗುಂಪು ಹತ್ಯೆಗೀಡಾದ ಯುವಕ ಯಾವುದೇ ಅಪಚಾರ ಎಸಗಿಲ್ಲ: ಪಂಜಾಬ್ ಸಿಎಂ ಚನ್ನಿ


 ಕರ್ಪುತಲಾದಲ್ಲಿ ಗುಂಪು ಹತ್ಯೆಗೀಡಾದ ಯುವಕ ಯಾವುದೇ ಅಪಚಾರ ಎಸಗಿಲ್ಲ: ಪಂಜಾಬ್ ಸಿಎಂ ಚನ್ನಿ

ಚಂಡೀಗಡ: ಕಪುರ್ತಲದ ಗುರುದ್ವಾರದಲ್ಲಿ  ಇತ್ತೀಚೆಗೆ ನಡೆದ ಯುವಕನ ಹತ್ಯೆ ಘಟನೆಯ ತನಿಖೆಯ ವೇಳೆ ಮೃತ ಯುವಕ ಗುರುದ್ವಾರದಲ್ಲಿ ಧಾರ್ಮಿಕ ಧ್ವಜವಾದ ನಿಶಾನ್ ಸಾಹಿಬ್ ಅನ್ನು ಅಪವಿತ್ರಗೊಳಿಸಲು ಯತ್ನಿಸಿರುವ  ಯಾವುದೇ ಪುರಾವೆ ಲಭಿಸಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಶುಕ್ರವಾರ ಹೇಳಿದ್ದಾರೆ.

“ಯುವಕನನ್ನು ಗುಂಪೊಂದು ಹತ್ಯೆಗೈದಿದೆ.  ತನಿಖೆಯು ಕೊಲೆಯತ್ತ ಬೊಟ್ಟು ಮಾಡುತ್ತಿದೆ. ಅದರಂತೆ ಎಫ್‌ಐಆರ್‌ನಲ್ಲಿ ಮಾರ್ಪಾಡು ಮಾಡುತ್ತೇವೆ’’ ಎಂದು ಸುದ್ದಿಗೋಷ್ಠಿಯಲ್ಲಿ ಚನ್ನಿ ತಿಳಿಸಿದರು.

ಇನ್ನೂ ಗುರುತಿಸಲ್ಪಡದ, ಆದರೆ ವಲಸಿಗನೆಂದು ಶಂಕಿಸಲಾದ ಯುವಕನನ್ನು ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಒಂದು ದಿನದ ನಂತರ ಕಪುರ್ತಲಾದಲ್ಲಿ ಕೊಲ್ಲಲಾಗಿತ್ತು. ಶವಪರೀಕ್ಷೆ ವರದಿಯು ಕಪುರ್ತಲಾದಲ್ಲಿ ಹತ್ಯೆಗೀಡಾದ ಯುವಕನ ದೇಹದಲ್ಲಿ 30 ಗಾಯಗಳನ್ನು ತೋರಿಸಿದೆ.

ಗುರುವಾರ ಲೂಧಿಯಾನ ನ್ಯಾಯಾಲಯದಲ್ಲಿ ನಡೆದ ಸ್ಫೋಟದ ಬಗ್ಗೆ ಮಾತನಾಡಿದ ಚನ್ನಿ, ತನಿಖೆಯಲ್ಲಿನ  ಸಹಾಯಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪರ್ಕಿಸಿದ್ದೇನೆ ಮತ್ತು ಕೇಂದ್ರವು ತಂಡಗಳನ್ನು ಕಳುಹಿಸಿದೆ ಎಂದು ಹೇಳಿದರು.

"ಸ್ಫೋಟದಲ್ಲಿ ಬಳಸಲಾದ ಆರ್‌ಡಿಎಕ್ಸ್ ಅನ್ನು ಪರಿಶೀಲಿಸಲು ಪಂಜಾಬ್‌ನಲ್ಲಿ ಸಾಧನಗಳಿಲ್ಲದ ಕಾರಣ ನಮಗೆ ಕೇಂದ್ರದ ಸಹಾಯ ಬೇಕು" ಎಂದು ಸಿಎಂ ಹೇಳಿದರು.


SHARE THIS

Author:

0 التعليقات: