ಬೀಜಿಂಗ್ ಗೇಮ್ಸ್ಗೆ ಆಸ್ಟ್ರೇಲಿಯಾ ಬಹಿಷ್ಕಾರ
ಕ್ಯಾನ್ಬೆರಾ, ಡಿ.8- ಮಾನವ ಹಕ್ಕುಗಳ ಉಲ್ಲಂಘನೆ ಆತಂಕದ ಹಿನ್ನೆಲೆಯಲ್ಲಿ ಬೀಜಿಂಗ್ ಚಳಿಗಾಲದ ಕ್ರೀಡಾಕೂಟವನ್ನು ರಾಜತಾಂತ್ರಿಕವಾಗಿ ಬಹಿಷ್ಕರಿಸುವಲ್ಲಿ ಆಸ್ಟ್ರೇಲಿಯಾವು ಅಮೆರಿಕದ ಜತೆಗೂಡುತ್ತದೆ ಎಂದು ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಇಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಚೀನಾದೊಂದಿಗಿನ ಸಂಬಂಧಗಳು ಮುರಿದುಬಿದ್ದಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಅಕಾರಿಗಳು ಈ ಕ್ರೀಡಾಕೂಟವನ್ನು ಬಹಿಷ್ಕರಿಸಿದರೆ ಅಚ್ಚರಿಯಿಲ್ಲ ಎಂದು ಮಾರಿಸನ್ ನುಡಿದಿದ್ದಾರೆ.
ಇದು ಆಸ್ಟ್ರೇಲಿಯಾದ ಹಿತಾಸಕ್ತಿಗನುಗುಣವಾಗಿರುವುದರಿಂದ ನಾನಿದನ್ನು ಮಾಡುತ್ತಿದ್ದೇನೆ. ಇದು ಸೂಕ್ತವಾದ ಕ್ರಮ ಕೂಡ ಎಂದು ಮಾರಿಸನ್ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಕ್ರೀಡಾಪಟುಗಳು ಈಗಲೂ ಸ್ರ್ಪಸಲು ಸಮರ್ಥರಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
0 التعليقات: