Friday, 3 December 2021

ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಎ.ವಿ. ವೆಂಕಟಾಚಲಂ ಆತ್ಮಹತ್ಯೆ

ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಎ.ವಿ. ವೆಂಕಟಾಚಲಂ ಆತ್ಮಹತ್ಯೆ

ಚೆನ್ನೈ: ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ (ಟಿಎನ್‌ಪಿಸಿಬಿ) ಮಾಜಿ ಅಧ್ಯಕ್ಷ ಎ.ವಿ.ವೆಂಕಟಾಚಲಂ ಅವರು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೆನ್ನೈನ ವೆಲಚೇರಿಯಲ್ಲಿರುವ ಅವರ ನಿವಾಸದಲ್ಲಿ ಅವರ ಪತ್ನಿ ಶವವನ್ನು ಪತ್ತೆ ಮಾಡಿದ್ದಾರೆ.

ಮನೆಯಿಂದ ಯಾವುದೇ ಡೆತ್ ನೋಟು ಪತ್ತೆಯಾಗಿಲ್ಲ. ನಂತರ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ  ವರದಿ ಮಾಡಿದೆ

ವಿಜಿಲೆನ್ಸ್ ಹಾಗೂ  ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ (ಡಿವಿಎಸಿ) ಅಧಿಕಾರಿಗಳು ಸೆಪ್ಟೆಂಬರ್ 23 ರಂದು ವೆಂಕಟಾಚಲಂ ವಿರುದ್ಧ ಕ್ರಿಮಿನಲ್ ದುರ್ನಡತೆ ಮತ್ತು ಕ್ರಿಮಿನಲ್ ದುರ್ಬಳಕೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು.


SHARE THIS

Author:

0 التعليقات: