Friday, 3 December 2021

ಫಿನ್‌ಟೆಕ್‌ನಲ್ಲಿ ಚಿಂತನೆಯ ನಾಯಕತ್ವ ವೇದಿಕೆ ಉದ್ಘಾಟಿಸಿದ ಪ್ರಧಾನಿ ಮೋದಿ


 ಫಿನ್‌ಟೆಕ್‌ನಲ್ಲಿ ಚಿಂತನೆಯ ನಾಯಕತ್ವ ವೇದಿಕೆ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಫಿನ್‌ಟೆಕ್‌ನಲ್ಲಿನ ಚಿಂತನೆಯ ನಾಯಕತ್ವ ವೇದಿಕೆಯಾದ ಇನ್ಫಿನಿಟಿ ಫೋರಂ ಅನ್ನು ಉದ್ಘಾಟಿಸಿದ್ದಾರೆ.

ಡಿಸೆಂಬರ್ 3 ಹಾಗೂ  4 ರಂದು ಗಿಫ್ಟ್ ಸಿಟಿ ಮತ್ತು ಬ್ಲೂಮ್‌ಬರ್ಗ್ ಸಹಯೋಗದೊಂದಿಗೆ ಭಾರತ ಸರಕಾರದ ಅಧೀನದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ (ಐಎಫ್‌ಎಸ್‌ಸಿಎ) ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ಫಾರಂನ  ಮೊದಲ ಆವೃತ್ತಿಯಲ್ಲಿ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಯುಕೆ ಪಾಲುದಾರ ದೇಶಗಳಾಗಿವೆ.


SHARE THIS

Author:

0 التعليقات: