Friday, 3 December 2021

ಪಂಜಾಬ್:ನಟಿ ಕಂಗನಾ ರಣಾವತ್ ಕಾರಿಗೆ ಮುತ್ತಿಗೆ ಹಾಕಿದ ರೈತರು


 ಪಂಜಾಬ್:ನಟಿ ಕಂಗನಾ ರಣಾವತ್ ಕಾರಿಗೆ ಮುತ್ತಿಗೆ ಹಾಕಿದ ರೈತರು

ಚಂಡಿಗಡ: ಪಂಜಾಬ್‌ನ ಕಿರಾತ್‌ಪುರದಲ್ಲಿ ಶುಕ್ರವಾರ ತಮ್ಮ ಕಾರನ್ನು ರೈತರು ಮುತ್ತಿಗೆ ಹಾಕಿದ್ದರು ಎಂದು ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ. ಚಂಡೀಗಢ-ಉನಾ ಹೆದ್ದಾರಿಯಲ್ಲಿರುವ ಕಿರಾತ್‌ಪುರ ಸಾಹಿಬ್‌ನ ಬುಂಗಾ ಸಾಹಿಬ್‌ನಲ್ಲಿ ಈ ಘಟನೆ ನಡೆದಿದೆ.

ನಟಿಯ ಬಿಳಿ ಕಾರನ್ನು ದೊಡ್ಡ ಸಂಖ್ಯೆಯಲ್ಲಿದ್ದ ರೈತರು ಸುತ್ತುವರೆದಿರುವುದನ್ನು ಆ ಪ್ರದೇಶದಲ್ಲಿನ ದೃಶ್ಯದಿಂದ ಕಂಡುಬಂದಿದೆ. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯೂ ಅಲ್ಲಿ ಕಂಡುಬರಲಿಲ್ಲ.

ಕಂಗನಾ ರಣಾವತ್ ಕಾರಿನ ಮೇಲೆ ನಡೆದಿರುವ ದಾಳಿಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. "ನನಗೆ ಯಾವುದೇ ಮಾಹಿತಿ ಇಲ್ಲ, ಘಟನೆಯ ವಿವರಗಳನ್ನು ಪಡೆದ ನಂತರವೇ ಪ್ರತಿಕ್ರಿಯೆ ನೀಡುತ್ತೇನೆ" ಎಂದು ಅವರು ಹೇಳಿದರು.

ರೈತರ ಪ್ರತಿಭಟನೆ ಕುರಿತ ಪೋಸ್ಟ್‌ಗಳಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿರುವುದಾಗಿ ನಟಿ ಕಂಗನಾ ರಣಾವತ್ ಮಂಗಳವಾರ ಹೇಳಿದ್ದರು.

ರಣಾವತ್ ಅವರು ರೈತರ ಚಳವಳಿಯ ವಿರುದ್ಧ ಟೀಕೆ ಮಾಡುತ್ತಾ ಬಂದಿದ್ದಾರೆ.ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಹಿಂದಿಯಲ್ಲಿ ಸುದೀರ್ಘ ಹೇಳಿಕೆಯನ್ನು  ಪೋಸ್ಟ್ ಮಾಡಿದ್ದಾರೆ.


SHARE THIS

Author:

0 التعليقات: