Thursday, 23 December 2021

ಮತಾಂತರ ನಿಷೇಧ ಕಾಯ್ದೆ ಆರೆಸ್ಸೆಸ್, ಬಿಜೆಪಿ ಸರ್ಕಾರದ ಕೂಸು: ಸಿದ್ದರಾಮಯ್ಯ


 ಮತಾಂತರ ನಿಷೇಧ ಕಾಯ್ದೆ ಆರೆಸ್ಸೆಸ್, ಬಿಜೆಪಿ ಸರ್ಕಾರದ ಕೂಸು: ಸಿದ್ದರಾಮಯ್ಯ

ಬೆಳಗಾವಿ: 2009 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಆರೆಸ್ಸೆಸ್ ಮೂಲದ ಚಿದಾನಂದ ಮೂರ್ತಿ, ನರಹರಿ, ಬಿ.ಎನ್ ಮೂರ್ತಿ, ಜಯದೇವ, ಆರ್.ಲೀಲಾ, ಮುತ್ತೂರು ಕೃಷ್ಣಮೂರ್ತಿ ಎಂಬುವವರು ಕಾನೂನು ಆಯೋಗಕ್ಕೆ ಮತಾಂತರ ನಿಷೇಧ ಕಾಯ್ದೆ ರೂಪಿಸಿ, ಜಾರಿಗೊಳಿಸುವಂತೆ ಮನವಿ ಮಾಡಿದ್ದರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಮಧ್ಯಪ್ರದೇಶದ ‘ದಿ ಮಧ್ಯಪ್ರದೇಶ್ ಧರ್ಮ ಸ್ವಾತಂತ್ರ್ಯ ಅಧಿನಿಯಮ್’ವನ್ನು ಮಾದರಿಯಾಗಿಟ್ಟುಕೊಂಡು ಆ ಕಾನೂನಿನಲ್ಲಿ ‘ಮಧ್ಯಪ್ರದೇಶ’ ಪದವನ್ನು ತೆಗೆದು ‘ಕರ್ನಾಟಕ’ ಎಂದು ಹಾಕಿದರೆ ಸಾಕು. ಆಗ ತಾವು ಮಾಡಿದ ಕಾನೂನನ್ನು ಯಾರು ಪ್ರಶ್ನಿಸಲು ಅವಕಾಶವೇ ಇರುವುದಿಲ್ಲ. ಅಗತ್ಯವಿದ್ದಲ್ಲಿ, ತಾವು ನಿವೃತ್ತ ನ್ಯಾಯಮೂರ್ತಿ ಡಾ.ಮ.ರಾಮಜೋಯಿಸರವರ ಸಲಹೆ, ಮಾರ್ಗದರ್ಶನ ಪಡೆಯಬಹುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಕಾನೂನು ಆರೆಸ್ಸೆಸ್‍ನ ಹಿಡೆನ್ ಅಜೆಂಡಾ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮನವಿ ಮಾಡಿದ್ದರಿಂದ ಕಾನೂನು ಆಯೋಗದವರು ಕರಡು ರಚನೆ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದು ಆರೆಸ್ಸೆಸ್ ಮತ್ತು ಯಡಿಯೂರಪ್ಪ ಅವರ ಸರ್ಕಾರದ ಕೂಸು. ನಮ್ಮದಲ್ಲ ಎಂದರು.


SHARE THIS

Author:

0 التعليقات: