Saturday, 18 December 2021

ಮಂಗಳೂರಿನ 'ದುಬೈ ಮಾರ್ಕೆಟ್'ನಲ್ಲಿ ಅಗ್ನಿ ಅವಘಡ

ಮಂಗಳೂರಿನ 'ದುಬೈ ಮಾರ್ಕೆಟ್'ನಲ್ಲಿ ಅಗ್ನಿ ಅವಘಡ

ಮಂಗಳೂರು: ನಗರದ ಮಾರ್ಕೆಟ್ ರಸ್ತೆಯ ಸಿಟಿ ಮಾರ್ಕೆಟ್ ‌ಕಟ್ಟಡದಲ್ಲಿರುವ 'ದುಬೈ ಮಾರ್ಕೆಟ್‌'ನಲ್ಲಿ ಭಾನುವಾರ ನಸುಕಿನ ಜಾವ 3 ಗಂಟೆಯ ವೇಳೆಗೆ ಬೆಂಕಿ ಆಕಸ್ಮಿಕ ಸಂಭವಿಸಿದೆ.

ಮಾರ್ಕೆಟ್‌ನಲ್ಲಿರುವ ಗೋದಾಮು ಸಹಿತ ಎರಡು ‌ಅಂಗಡಿಗಳಲ್ಲಿ ಬೆಂಕಿ ಕಾಣಿಸಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಅಗ್ನಿಶಾಮಕ ದಳ ಮತ್ತು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.



SHARE THIS

Author:

0 التعليقات: