Wednesday, 8 December 2021

ದ.ಕ.ಜಿಲ್ಲೆ : ಅನಿಲ ವಿತರಕರಿಗೆ ಹೆಚ್ಚುವರಿ ಹಣ ನೀಡದಂತೆ ಸೂಚನೆ


 ದ.ಕ.ಜಿಲ್ಲೆ : ಅನಿಲ ವಿತರಕರಿಗೆ ಹೆಚ್ಚುವರಿ ಹಣ ನೀಡದಂತೆ ಸೂಚನೆ

ಮಂಗಳೂರು: ಅಡುಗೆ ಅನಿಲವನ್ನು ಮನೆ ಮನೆಗೆ ಪೂರೈಸುವ ಸಂದರ್ಭ ಅನಿಲ ವಿತರಕರು ಗ್ರಾಹಕರಿಂದ ಹೆಚ್ಚಿನ ದರವನ್ನು ವಸೂಲಿ ಮಾಡುವಂತಿಲ್ಲ. ಗ್ರಾಹಕರು ಕೂಡ ಹೆಚ್ಚಿನ ದರ ನೀಡಬೇಕಾಗಿಲ್ಲ. ಒಂದು ವೇಳೆ ಹಣಕ್ಕಾಗಿ ಒತ್ತಾಯಿಸಿದರೆ ದೂರು ನೀಡಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಅನಿಲ ವಿತರಕರು ನಿಗದಿ ಪಡಿಸಿದ ದರಕ್ಕಿಂತ ಹೆಚ್ಚುವರಿ ದರವನ್ನು ವಸೂಲಿ ಮಾಡಿದಲ್ಲಿ ಸಹಾಯಕ ನಿರ್ದೇಶಕರು, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಮಂಗಳೂರು

(ದೂ.ಸಂ: 0824-2220571 ) ಈ ವಿಳಾಸಕ್ಕೆ ದೂರನ್ನು ಸಲ್ಲಿಸಬಹುದು ಎಂದು ಸೂಚಿಸಿದ್ದಾರೆ.


SHARE THIS

Author:

0 التعليقات: