ಛತ್ತೀಸ್ ಗಡ ಸ್ಥಳೀಯ ಸಂಸ್ಥೆಗಳ ಚುನಾವಣೆ:ಕಾಂಗ್ರೆಸ್ ಗೆ ಭರ್ಜರಿ ಜಯ
ರಾಯ್ಪುರ: ಛತ್ತೀಸ್ ಗಡದ 15 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ದಾಖಲಿಸಿದೆ.
ಮತ ಎಣಿಕೆ ಪೂರ್ಣಗೊಂಡ 300 ವಾರ್ಡ್ ಗಳ ಪೈಕಿ ಕಾಂಗ್ರೆಸ್ 174ರಲ್ಲಿ ಜಯ ದಾಖಲಿಸಿದೆ. 89 ವಾರ್ಡ್ ಗಳಲ್ಲಿ ಗೆದ್ದಿರುವ ಬಿಜೆಪಿ ಹಿನ್ನಡೆ ಕಂಡಿದೆ.
15 ನಗರ ಸಂಸ್ಥೆಗಳು ಹಾಗೂ 15 ಪ್ರತ್ಯೇಕ ವಾರ್ಡ್ ಗಳ ಉಪ ಚುನಾವಣೆಯ ಮತದಾನ ಸೋಮವಾರ ನಡೆದಿತ್ತು. ಮತ ಎಣಿಕೆ ಕಾರ್ಯ ಗುರುವಾರ 29 ಕೇಂದ್ರಗಳಲ್ಲಿ ನಡೆದಿತ್ತು.
ನಮ್ಮ ಸರಕಾರ ಆರಂಭಿಸಿದ್ದ ಕಲ್ಯಾಣ ಯೋಜನೆಗಳ ಯಶಸ್ಸನ್ನು ಈ ಫಲಿತಾಂಶ ಸೂಚಿಸುತ್ತದೆ ಎಂದು ಫಲಿತಾಂಶದ ಕುರಿತು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರತಿಕ್ರಿಯಿಸಿದರು.
15 ನಗರ ಸಂಸ್ಥೆಗಳ ಒಟ್ಟು 370 ವಾರ್ಡ್ ಗಳ ಪೈಕಿ 300 ವಾರ್ಡ್ ಗಳ ಫಲಿತಾಂಶವನ್ನು ಚುನಾವಣಾ ಆಯೋಗ ಈ ತನಕ ಘೋಷಿಸಿದೆ. 174 ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು, 89ರಲ್ಲಿ ಬಿಜೆಪಿ, 6ರಲ್ಲಿ ಜನತಾ ಕಾಂಗ್ರೆಸ್ ಛತ್ತೀಸ್ ಗಡ(ಜೆ) ಹಾಗೂ 31ರಲ್ಲಿ ಪಕ್ಷೇತರರು ಜಯ ಸಾಧಿಸಿದ್ದಾರೆ.
0 التعليقات: