Tuesday, 14 December 2021

ವಿಧಾನಪರಿಷತ್ ಚುನಾವಣೆ: ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರಗೆ ಗೆಲುವು


 ವಿಧಾನಪರಿಷತ್ ಚುನಾವಣೆ: ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರಗೆ ಗೆಲುವು

ತುಮಕೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ ರಾಜೇಂದ್ರ ಗೆಲುವು ಸಾಧಿಸಿದ್ದಾರೆ.

ಮೊದಲ ಪ್ರಾಶಸ್ತ್ಯ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ನ ಆರ್.ರಾಜೇಂದ್ರ 2251 ಮತಗಳನ್ನು ಪಡೆದರೆ, ಬಿಜೆಪಿಯ ಲೋಕೇಶ್ ಗೌಡ 1798 ಮತ್ತು ಜೆಡಿಎಸ್ ನ ಅನಿಲ್ ಕುಮಾರ್ 1398 ಮತಗಳನ್ನು ಪಡೆದಿದ್ದಾರೆ. 

ಚಲಾವಣೆಯಾಗಿದ್ದ 5547 ಮತಗಳಲ್ಲಿ 227 ಮತಗಳು ತಿರಸ್ಕೃತ ಗೊಂಡಿದ್ದವು. ಗೆಲ್ಲಲ್ಲು 2661 ಮತಗಳನ್ನು ಪಡೆಯಬೇಕಿದ್ದ ಸಂದರ್ಭದಲ್ಲಿ ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆಯಲ್ಲಿ ಆರ್ ರಾಜೇಂದ್ರ ಅಗತ್ಯವಿದ್ದ 503 ಮತಗಳನ್ನು ಪಡೆದು ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ.


SHARE THIS

Author:

0 التعليقات: