ಭತ್ತದ ಕೊಯ್ಲು ಮುಗಿಸಿ ಬರುತ್ತಿದ್ದ ಆರು ಮಂದಿ ದುರ್ಮರಣ
ಬಿಹಾರ್: ಹೊಸ ವರ್ಷದ ಹೊಸ್ತಿನಲ್ಲಿ ಇರುವಾಗಲೇ ನಿನ್ನೆ ಮಧ್ಯರಾತ್ರಿ ಭೀಕರ ಅಪಘಾತವೊಂದು ನಡೆದಿದ್ದು, ಆರು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಔರಂಗಾಬಾದ್ನ ಹರಿಹರಗಂಜ್ನ ರಾಷ್ಟ್ರೀಯ ಹೆದ್ದಾರಿ 98ರಲ್ಲಿ ಈ ಅಪಘಾತ ಸಂಭವಿಸಿದೆ.
ಒಬ್ರಾ ಪೊಲೀಸ್ ಠಾಣಾ ಪ್ರದೇಶದಲ್ಲಿ ಎರಡು ಪಿಕಪ್ ವ್ಯಾನ್ಗಳಲ್ಲಿ ಕಾರ್ಮಿಕರು ಬರುತ್ತಿದ್ದರು. ಈ ಸಂದರ್ಭದಲ್ಲಿ ಹರಿಹರಗಂಜ್ ಬಳಿ ನಿಯಂತ್ರಣ ತಪ್ಪಿದ ಟ್ರಕ್ವೊಂದು ಪಿಕಪ್ ವ್ಯಾನ್ಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ಈ ಅವಘಡದಲ್ಲಿ ವ್ಯಾನ್ನಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ.
ಇವರೆಲ್ಲರೂ ಶಿಹುಡಿ ಗ್ರಾಮದಲ್ಲಿ ಭತ್ತದ ಕೊಯ್ಲು ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಕಾರ್ಮಿಕರು ಎಂದು ಪೊಲೀಸರು ಹೇಳಿದ್ದಾರೆ. ಗಾಯಗೊಂಡವರನ್ನು ಮೇದಿನಿರೈ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತಪಟ್ಟವರನ್ನು ಕಲೋಕುಮಾರಿ, ರೀಟಾ, ಬಸಂತಿ, ನೀಲಂ, ಅಪರ್ಣಾ, ಕಮಲೇಶ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
0 التعليقات: